ಪ್ರಧಾನಿ ಮೋದಿ ಭೇಟಿ ಮಾಡಲು 5 ರೂ. ಸಾಕು!

0
603

ಸ್ಫೂರ್ತಿದಾಯಕ ಮಾತುಗಳ ಮೂಲಕ ಯುವ ಜನತೆಯಲ್ಲಿ ಹೊಸ ಹೊಸ ಕನಸುಗಳನ್ನು ಬಿತ್ತುತ್ತಿರುವ ಪ್ರಧಾನಿ ಮೋದಿ ಅವರನ್ನು ನೀವು ಭೇಟಿಯಾಗಬೇಕೇ? ಅವರ ‘ಮನ್‌ ಕಿ ಬಾತ್‌’ಅನ್ನು ಮುಖತಃ ಖುದ್ದು ಕೇಳಬೇಕೇ? ನಿಮ್ಮಲ್ಲಿ 5 ರೂಪಾಯಿ ಇದ್ದರೆ ಇದು ಸಾಧ್ಯ! ಅದೇಗೆ ಎಂದು ಅಚ್ಚರಿಪಡಬೇಡಿ. ಚುನಾವಣೆ ಹಿನ್ನೆಲೆಯಲ್ಲಿ ದೇಣಿಗೆ ಸಂಗ್ರಹಿಸುತ್ತಿರುವ ಬಿಜೆಪಿ ಇಂತಹದ್ದೊಂದು ವಿಶೇಷ ಅವಕಾಶ ಕಲ್ಪಿಸಿದೆ.

ಹೊಸದಿಲ್ಲಿ: ಸ್ಫೂರ್ತಿದಾಯಕ ಮಾತುಗಳ ಮೂಲಕ ಯುವ ಜನತೆಯಲ್ಲಿ ಹೊಸ ಹೊಸ ಕನಸುಗಳನ್ನು ಬಿತ್ತುತ್ತಿರುವ ಪ್ರಧಾನಿ ಮೋದಿ ಅವರನ್ನು ನೀವು ಭೇಟಿಯಾಗಬೇಕೇ? ಅವರ ‘ಮನ್‌ ಕಿ ಬಾತ್‌’ಅನ್ನು ಮುಖತಃ ಖುದ್ದು ಕೇಳಬೇಕೇ? ನಿಮ್ಮಲ್ಲಿ 5 ರೂಪಾಯಿ ಇದ್ದರೆ ಇದು ಸಾಧ್ಯ! ಅದೇಗೆ ಎಂದು ಅಚ್ಚರಿಪಡಬೇಡಿ. ಚುನಾವಣೆ ಹಿನ್ನೆಲೆಯಲ್ಲಿ ದೇಣಿಗೆ ಸಂಗ್ರಹಿಸುತ್ತಿರುವ ಬಿಜೆಪಿ ಇಂತಹದ್ದೊಂದು ವಿಶೇಷ ಅವಕಾಶ ಕಲ್ಪಿಸಿದೆ. 
ನಮೋ ಆ್ಯಪ್‌ ಮೂಲಕ 5 ರೂಪಾಯಿಯಿಂದ 1,000 ಸಾವಿರ ರೂ.ವರೆಗೆ ಪಕ್ಷಕ್ಕೆ ದೇಣಿಗೆ ನೀಡಬಹುದಾಗಿದೆ. ಈ ದೇಣಿಗೆಯ ಜತೆಗೆ ನಿಮಗೆ ಅದೃಷ್ಟವೂ ಇದ್ದರೆ ಖುದ್ದು ಪ್ರಧಾನಿಯನ್ನು ಭೇಟಿ ಮಾಡಬಹುದು. ದೇಣಿಗೆ ನೀಡುವವರಿಗೆ ಒಂದು ರೆಫರಲ್‌ ಕೋಡ್‌ ಕಳಿಸಲಾಗುತ್ತದೆ. ಆ ಕೋಡ್‌ಅನ್ನು ಇತರರಿಗೆ ಎಸ್‌ಎಂಎಸ್‌ ಇಲ್ಲವೇ ವಾಟ್ಸ್‌ಆ್ಯಪ್‌ ಮೂಲಕ ಕಳಿಸಬೇಕು. ಹೀಗೆ ಕಳಿಸಿದ ರೆಫರಲ್‌ ಕೋಡ್‌ಅನ್ನು ಸುಮಾರು 100 ಜನ ಬಳಕೆ ಮಾಡಿ ಅವರೆಲ್ಲರೂ ಪಕ್ಷಕ್ಕೆ ದೇಣಿಗೆ ನೀಡಿದರೆ ಮೂಲದಲ್ಲಿ ರೆಫರಲ್‌ ಕೋಡ್‌ ಕಳಿಸಿದ ವ್ಯಕ್ತಿಯು ಮೋದಿ ಅವರನ್ನು ಭೇಟಿಯಾಗಬಹುದು. ದೇಣಿಗೆ ಸಂಗ್ರಹ ಹೆಚ್ಚಿಸಲು ಬಿಜೆಪಿ ಈ ವಿಶೇಷ ಅವಕಾಶ ಒದಗಿಸಿದೆ. ಒಂದೊಮ್ಮೆ ಇಂತಹ ರೆಫರಲ್‌ ಕೋಡ್‌ ಕನಿಷ್ಠ 10 ಜನರಿಗೆ ತಲುಪಿ ಅವರೆಲ್ಲರೂ ದೇಣಿಗೆ ನೀಡಿದರೆ ಮೂಲದಲ್ಲಿ ರೆಫರಲ್‌ ಕೋಡ್‌ ಕಳಿಸಿದವರಿಗೆ ಟಿ-ಶರ್ಟ್‌, ಕಾಫಿ ಮಗ್‌ಗಳನ್ನು ಉಡುಗೊರೆಯಾಗಿ ನೀಡಲಾಗುತ್ತದೆ ಎಂದು ಬಿಜೆಪಿ ಮೂಲಗಳು ತಿಳಿಸಿವೆ.