ಪ್ರಧಾನಿ ಮೋದಿಗೆ ಫಿಫಾ ವಿಶೇಷ ಫುಟ್ಬಾಲ್ ಜೆರ್ಸಿ ಕೊಡುಗೆ

0
548

ಭಾರತ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರಿಗೆ ಫಿಫಾ ಅಧ್ಯಕ್ಷ ಗಿಯಾನಿ ಇನ್ಫಾಂಟಿನೊ ವಿಶೇಷ ಫುಟ್ಬಾಲ್ ಜೆರ್ಸಿ ನೀಡಿ ಗೌರವಿಸಿದ್ದಾರೆ.

ಬ್ಯೂನೆಸ್ ಐರಿಸ್: ಭಾರತ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರಿಗೆ ಫಿಫಾ ಅಧ್ಯಕ್ಷ ಗಿಯಾನಿ ಇನ್ಫಾಂಟಿನೊ ವಿಶೇಷ ಫುಟ್ಬಾಲ್ ಜೆರ್ಸಿ ನೀಡಿ ಗೌರವಿಸಿದ್ದಾರೆ. 

ಮಹತ್ವದ ಜಿ20 ಶೃಂಗಸಭೆಯಲ್ಲಿ ಭಾಗವಹಿಸಲು ಅರ್ಜೇಂಟೀನಾಗೆ ಭೇಟಿ ಕೊಟ್ಟಿರುವ ಮೋದಿಗೆ ಫುಟ್ಬಾಲ್ ಜೆರ್ಸಿ ನೀಡುವ ಮೂಲಕ ಸನ್ಮಾನಿಸಲಾಗಿದೆ. 

ಜಿ20 ಎಂದು ಮುದ್ರಿಸಿರುವ ಜೆರ್ಸಿಯಲ್ಲಿ ಮೋದಿ ಎಂದು ಬರೆದಿರುವುದು ಗಮನಾರ್ಹವೆನಿಸಿದೆ. 

ಈ ಸಂತಸದ ಕ್ಷಣವನ್ನು ಟ್ವೀಟ್ ಮಾಡಿರುವ ಮೋದಿ, “ಫುಟ್ಬಾಲ್ ಬಗ್ಗೆ ಯೋಚಿಸದೆ ಅರ್ಜೆಂಟೀನಾಗೆ ಬರುವುದು ಅಸಾಧ್ಯ. ಭಾರತದಲ್ಲಿ ಅರ್ಜೆಂಟೀನಾ ಆಟಗಾರರು ಅತೀವ ಜನಪ್ರಿಯರಾಗಿದ್ದಾರೆ” 

“ಇಂದು ಫಿಫಾ ಅಧ್ಯಕ್ಷ ಗಿಯಾನಿ ಇನ್ಫಾಂಟಿನೊರಿಂದ ಫುಟ್ಬಾಲ್ ಜೆರ್ಸಿ ಗಿಟ್ಟಿಸಿಕೊಂಡಿದ್ದೇನೆ. ಈ ರೀತಿಯ ಗೌರವಕ್ಕಾಗಿ ನಾನವರಿಗೆ ಧನ್ಯವಾದಗಳನ್ನು ಸಮರ್ಪಿಸುತ್ತಿದ್ದೇನೆ” ಎಂದು ಹೇಳಿದ್ದಾರೆ. 

“ಭಾರತದ ತತ್ವಶಾಸ್ತ್ರ, ಕಲೆ, ಸಂಗೀತ, ನೃತ್ಯದಲ್ಲಿ ಅರ್ಜೇಂಟೀನಾ ಆಸಕ್ತಿಯನ್ನು ತೋರಿದರೆ ದೇಶದಲ್ಲಿ ಅರ್ಜೆಂಟೀನಾ ಫುಟ್ಬಾಲ್ ಸ್ಟಾರ್‌ಗಳ ಮಿಲಿಯನ್‌ಗಟ್ಟಲೆ ಅಭಿಮಾನಿಗಳಿದ್ದಾರೆ. ಮರಡೋನಾ ಪ್ರತಿಯೊಬ್ಬರ ಮನೆಯ ಮನೆ ಮಾತಾಗಿದ್ದಾರೆ. ಅವರ ಹೆಸರನ್ನು ಅನೇಕ ಸ್ಥಳೀಯ ಭಾಷೆಗಳಲ್ಲೂ ಬಳಸಲಾಗುತ್ತಿದೆ” ಎಂದು ಉಲ್ಲೇಖಿಸಿದರು.