ಪ್ರಧಾನಿ ಮೋದಿಗೆ ಇಂದು ವಿಶ್ವಸಂಸ್ಥೆಯಿಂದ ಭೂಮಿ ಪ್ರಶಸ್ತಿ ಪ್ರದಾನ

0
908

ಬುಧವಾರ (ಅ.3) ನಡೆಯಲಿರುವ ವಿಶೇಷ ಸಮಾರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ವಿಶ್ವಸಂಸ್ಥೆಯ ಮಹಾ ಪ್ರಧಾನ ಕಾರ್ಯದರ್ಶಿ ಆಂಟೊನಿಯೊ ಗುಟೆರಸ್‌ ಅವರು ವಿಶ್ವಸಂಸ್ಥೆಯ ಅತ್ಯುನ್ನತ ಪರಿಸರ ಗೌರವವಾದ ಭೂಮಿ ಪ್ರಶಸ್ತಿ (ಅರ್ಥ್‌ ಅವಾರ್ಡ್‌) ಪ್ರದಾನ ಮಾಡಿದ್ದಾರೆ

ಹೊಸದಿಲ್ಲಿ: ಬುಧವಾರ (ಅಕ್ಟೋಬರ್.3) ನಡೆಯಲಿರುವ ವಿಶೇಷ ಸಮಾರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ವಿಶ್ವಸಂಸ್ಥೆಯ ಮಹಾ ಪ್ರಧಾನ ಕಾರ್ಯದರ್ಶಿ ಆಂಟೊನಿಯೊ ಗುಟೆರಸ್‌ ಅವರು ವಿಶ್ವಸಂಸ್ಥೆಯ ಅತ್ಯುನ್ನತ ಪರಿಸರ ಗೌರವವಾದ ಭೂಮಿ ಪ್ರಶಸ್ತಿ (ಅರ್ಥ್‌ ಅವಾರ್ಡ್‌) ಪ್ರದಾನ  ಮಾಡಿದ್ದಾರೆ.

ಅಂತಾರಾಷ್ಟ್ರೀಯ ಸೌರ ಮೈತ್ರಿ ಮತ್ತು ಪರಿಸರ ರಕ್ಷಣೆಗೆ ಸಂಬಂಧಿಸಿ ಹೊಸ ಕ್ಷೇತ್ರಗಳಲ್ಲಿ ಸಹಕಾರ ನೀಡುವಲ್ಲಿ ವಹಿಸಿದ ಮುಂಚೂಣಿ ಪಾತ್ರಕ್ಕಾಗಿ ಹಾಗೂ 2022ರೊಳಗೆ ಪ್ಲಾಸ್ಟಿಕ್‌ ಮುಕ್ತ ಭಾರತ ನಿರ್ಮಿಸುವ ಸಂಕಲ್ಪಕ್ಕಾಗಿ ಪ್ರಧಾನಿ ಮೋದಿ ಅವರಿಗೆ ಈ ಗೌರವ ನೀಡಲಾಗಿದೆ. ಮೋದಿ ಮತ್ತು ಫ್ರಾನ್ಸ್‌ ಅಧ್ಯಕ್ಷ ಎಮಾನ್ಯುಯೆಲ್‌ ಮ್ಯಾಕ್ರೋನ್‌ ಅವರಿಗೆ ಜಂಟಿಯಾಗಿ ‘ಚಾಂಪಿಯನ್‌ ಆಫ್‌ ದಿ ಅರ್ಥ್‌ ಅವಾರ್ಡ್‌’ ಅನ್ನು ಸೆ. 26ರಂದು ನ್ಯೂಯಾರ್ಕ್‌ನಲ್ಲಿ ನಡೆದ ವಿಶ್ವಸಂಸ್ಥೆಯ 73ನೇ ಮಹಾ ಅಧಿವೇಶನ ಸಂದರ್ಭದಲ್ಲಿ ಘೋಷಿಸಲಾಯಿತು.