ಪ್ರಧಾನಿ ಖಾಸಗಿ ಕಾರ್ಯದರ್ಶಿ( ಪ್ರೈವೇಟ್​ ಸೆಕ್ರೆಟರಿ)ಯಾಗಿ ಐಎಫ್ಎಸ್​ ಅಧಿಕಾರಿ “ವಿವೇಕ್​ ಕುಮಾರ್”​ ನೇಮಕ

0
38

ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಖಾಸಗಿ ಕಾರ್ಯದರ್ಶಿ (ಪ್ರೈವೇಟ್​ ಸೆಕ್ರೆಟರಿ)ಯಾಗಿ ಭಾರತೀಯ ವಿದೇಶ ಸೇವೆ (ಐಎಫ್​ಎಸ್​) ಅಧಿಕಾರಿ ವಿವೇಕ್​ ಕುಮಾರ್​ ಅವರು ಶುಕ್ರವಾರ ನೇಮಕಗೊಂಡಿದ್ದಾರೆ.

ನವದೆಹಲಿ: ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಖಾಸಗಿ ಕಾರ್ಯದರ್ಶಿ (ಪ್ರೈವೇಟ್​ ಸೆಕ್ರೆಟರಿ)ಯಾಗಿ ಭಾರತೀಯ ವಿದೇಶ ಸೇವೆ (ಐಎಫ್​ಎಸ್​) ಅಧಿಕಾರಿ ವಿವೇಕ್​ ಕುಮಾರ್​ ಅವರು ಜುಲೈ 19 ರ ಶುಕ್ರವಾರ ನೇಮಕಗೊಂಡಿದ್ದಾರೆ.

ವಿವೇಕ್​ ಕುಮಾರ್​ ಅವರು 2004ನೇ ಬ್ಯಾಚ್​ನ ಐಎಫ್​ಎಸ್​ ಅಧಿಕಾರಿ. ಹಿಂದೆ ಪ್ರಧಾನಿ ಕಚೇರಿಯ ನಿರ್ದೇಶಕರಾಗಿದ್ದರು. 2014ರಲ್ಲಿ ಪ್ರಧಾನಿ ಕಚೇರಿಯ ಉಪ ಕಾರ್ಯದರ್ಶಿಯಾಗಿ ನೇಮಕಗೊಂಡಿದ್ದರು. ಇವರು ಮುಂಬೈನ ಐಐಟಿ ಕಾಲೇಜಿನಲ್ಲಿ ಕೆಮಿಕಲ್​ ಇಂಜಿನಿಯರಿಂಗ್​ನಲ್ಲಿ ಬಿ.ಟೆಕ್​ ಪದವಿ ಪಡೆದಿದ್ದಾರೆ. ಆಸ್ಟ್ರೇಲಿಯಾ, ರಷ್ಯಾಗಳಲ್ಲಿ ರಾಯಭಾರಿಯಾಗಿಯೂ ಕಾರ್ಯ ನಿರ್ವಹಿಸಿದ್ದಾರೆ.

ನಿನ್ನೆ ಕೇಂದ್ರ ಸರ್ಕಾರ ವಿವೇಕ್​ ಕುಮಾರ್​ ಸೇರಿ ಒಟ್ಟು ಎಂಟು ಅಧಿಕಾರಿಗಳನ್ನು ಬೇರೆಬೇರೆ ಡಿಪಾರ್ಟ್​ಮೆಂಟ್​ಗಳಿಗೆ ವರ್ಗಾವಣೆ ಮಾಡಿತ್ತು.

ವಿವೇಕ್​ ಕುಮಾರ್​ ಅವರನ್ನು ಪ್ರಧಾನಿ ಖಾಸಗಿ ಕಾರ್ಯದರ್ಶಿಯಾಗಿ ನೇಮಕ ಮಾಡಿ ಸಿಬ್ಬಂದಿ ಮತ್ತು ತರಬೇತಿ ಇಲಾಖೆ ಆದೇಶ ಹೊರಡಿಸಿದೆ. ಪ್ರಧಾನಿ ನೇತೃತ್ವದ ಕ್ಯಾಬಿನೆಟ್​ ನೇಮಕಾತಿ ಸಮಿತಿ ಅನುಮೋದನೆ ಮಾಡಿದ ಬಳಕವಷ್ಟೇ ವರ್ಗಾವಣೆ ಪ್ರಕ್ರಿಯೆ ನಡೆದಿದೆ.