ಪ್ರಧಾನಿ ಆರ್ಥಿಕ ಸಲಹಾ ಮಂಡಳಿಗೆ ಶಮಿಕಾ ರವಿ

0
14

ಪ್ರಧಾನಿ ಆರ್ಥಿಕ ಸಲಹಾ ಮಂಡಳಿಗೆ ಆರ್ಥಿಕ ತಜ್ಞೆ ಶಮಿಕಾ ರವಿ ಅವರನ್ನು ಅರೆ ಕಾಲಿಕ ಸದಸ್ಯೆಯನ್ನಾಗಿ ನೇಮಕ ಮಾಡುವ ಸಾಧ್ಯತೆ ಇದೆ.

ಶಮಿಕಾ ಅವರ ನೇಮಕಕ್ಕೆ ಪ್ರಧಾನಿ ಕಚೇರಿ ಈಗಾಗಲೇ ಹಸಿರು ನಿಶಾನೆ ನೀಡಿದ್ದು, ಅಧಿಕೃತ ಪ್ರಕಟಣೆ ಹೊರ ಬೀಳಬೇಕಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಶಮಿಕಾ ಅವರು ಅಭಿವೃದ್ಧಿ ಅರ್ಥಶಾಸ್ತ್ರ ಸಂಶೋಧನಾ ಕ್ಷೇತ್ರದಲ್ಲಿ ತೊಡಗಿಸಿಕೊಂಡಿರುವ ಬ್ರೂಕಿಂಗ್ಸ್‌ ಇಂಡಿಯಾ ಸಂಸ್ಥೆಯ ಮುಖ್ಯಸ್ಥೆಯಾಗಿದ್ದಾರೆ. ಅದರ ಜತೆಗೆ ಇಂಡಿಯನ್‌ ಸ್ಕೂಲ್‌ ಆಫ್ ಬಿಸಿನೆಸ್‌ನ ಗೌರವ ಪ್ರಾಧ್ಯಾಪಕಿಯಾಗಿದ್ದು, ಅರ್ಥಶಾಸ್ತ್ರ, ಕಿರು ಹಣಕಾಸು ಇತ್ಯಾದಿ ವಿಷಯಗಳನ್ನು ಬೋಧಿಸುತ್ತಾರೆ.

ನೀತಿ ಆಯೋಗದ ಸದಸ್ಯ ವಿವೆಕ್ ದೆಬ್ರಾಯ್‌ ಅವರು ಆರ್ಥಿಕ ಸಲಹಾ ಮಂಡಳಿ ಮುಖ್ಯಸ್ಥರಾಗಿದ್ದಾರೆ.