‘ಪ್ರಧಾನಮಂತ್ರಿ ಶ್ರಮ್ ಯೋಗಿ ಮಾನ್ ಧನ್ ಯೋಜನೆ’ಯ ಸದಸ್ಯತ್ವ ನೋಂದಣಿ ಪ್ರಕ್ರಿಯೆಗೆ ಚಾಲನೆ

0
143

ಅಸಂಘಟಿತ ವಲಯದ ಕಾರ್ಮಿಕರಿಗಾಗಿ ಘೋಷಿಸಿರುವ ‘ಪ್ರಧಾನಮಂತ್ರಿ ಶ್ರಮ್ ಯೋಗಿ ಮಾನ್ ಧನ್ ಯೋಜನೆ’ಯ ( ಪಿಎಂಎಸ್‌ವೈಎಂ) ಅನುಷ್ಠಾನ ಪ್ರಕ್ರಿಯೆ ಆರಂಭವಾಗಿದೆ. ಯೋಜನೆಯ ಸದಸ್ಯತ್ವ ನೋಂದಣಿ ಪ್ರಕ್ರಿಯೆಗೆ ಚಾಲನೆ ನೀಡಲಾಗಿದೆ ಎಂದು ಕೇಂದ್ರ ಕಾರ್ಮಿಕ ಸಚಿವಾಲಯ ತಿಳಿಸಿದೆ. ಈ ಹೊತ್ತಿನಲ್ಲಿ ಯೋಜನೆಗೆ ನೋಂದಾಯಿಸಿಕೊಳ್ಳುವುದು ಹೇಗೆ ಎನ್ನುವುದರ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ.

ನವದೆಹಲಿ :  ಅಸಂಘಟಿತ ವಲಯದ ಕಾರ್ಮಿಕರಿಗಾಗಿ ಘೋಷಿಸಿರುವ ‘ಪ್ರಧಾನಮಂತ್ರಿ ಶ್ರಮ್ ಯೋಗಿ ಮಾನ್ ಧನ್ ಯೋಜನೆ’ಯ ( ಪಿಎಂಎಸ್‌ವೈಎಂ) ಅನುಷ್ಠಾನ ಪ್ರಕ್ರಿಯೆ ಆರಂಭವಾಗಿದೆ. ಯೋಜನೆಯ ಸದಸ್ಯತ್ವ ನೋಂದಣಿ ಪ್ರಕ್ರಿಯೆಗೆ ಚಾಲನೆ ನೀಡಲಾಗಿದೆ ಎಂದು ಕೇಂದ್ರ ಕಾರ್ಮಿಕ ಸಚಿವಾಲಯ ತಿಳಿಸಿದೆ. ಈ ಹೊತ್ತಿನಲ್ಲಿ ಯೋಜನೆಗೆ ನೋಂದಾಯಿಸಿಕೊಳ್ಳುವುದು ಹೇಗೆ ಎನ್ನುವುದರ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ.

ಯಾರಿಗೆ ಅನ್ವಯಿಸುತ್ತದೆ: ತಳ್ಳುಗಾಡಿ ಎಳೆಯುವವರು, ಬೀದಿ ವ್ಯಾಪಾರಿಗಳು, ಬಿಸಿಯೂಟ ಯೋಜನೆಯ ನೌಕರರು, ಭೂರಹಿತ ಕಾರ್ಮಿಕರು, ಕೃಷಿ ಕಾರ್ಮಿಕರು, ಹಮಾಲಿಗಳು, ಚರ್ಮಕಾರರು, ಕಟ್ಟಡ ಕಾರ್ಮಿಕರು, ಬೀಡಿ ಕಟ್ಟುವವರು, ಕೈಮಗ್ಗದ ಕೆಲಸಗಾರರು ಸೇರಿ ಇನ್ನು ಕೆಲವರಿಗೆ ಯೋಜನೆ ಅನ್ವಯಿಸುತ್ತದೆ.

ಯಾರು ಅನರ್ಹರು: ರಾಷ್ಟ್ರೀಯ ಪಿಂಚಣಿ ಯೋಜನೆ, ಕಾರ್ಮಿಕರ ರಾಜ್ಯ ವಿಮಾ ನಿಗಮ ಅಥವಾ ಉದ್ಯೋಗಿಗಳ ಭವಿಷ್ಯ ನಿಧಿ ಯೋಜನೆ ಮಾಡಿಸಿದ್ದರೆ ಅಂತಹ ಕಾರ್ಮಿಕರು ಈ ವ್ಯಾಪ್ತಿಗೆ ಬರುವುದಿಲ್ಲ. ತೆರಿಗೆದಾರರಿಗೂ ಈ ಯೋಜನೆ ಲಭ್ಯವಿಲ್ಲ.

ಅರ್ಹತೆಗಳೇನು: ಮಾಸಿಕ  15 ಸಾವಿರಕ್ಕಿಂತ ಕಡಿಮೆ ಆದಾಯ ಹೊಂದಿರುವ ಅಸಂಘಟಿತ ವಲಯದ 18 ರಿಂದ 40 ವರ್ಷದೊಳಗಿನ ಕಾರ್ಮಿಕರು ಈ ಯೋಜನೆಗೆ ಅರ್ಹರು. ಯೋಜನೆಯ ಸದಸ್ಯತ್ವ ಪಡೆದ ಕಾರ್ಮಿಕರು ಪ್ರತಿ ತಿಂಗಳೂ ಸಣ್ಣ ಮೊತ್ತದ ಹಣವನ್ನು 60 ವರ್ಷಗಳ ವರೆಗೆ ಪಾವತಿಸಿದರೆ, ನಂತರದಲ್ಲಿ ಅವರಿಗೆ ಪ್ರತಿ ತಿಂಗಳು  3 ಸಾವಿರ ಪಿಂಚಣಿ ಸಿಗಲಿದೆ.

ಸೇರ್ಪಡೆ ಹೇಗೆ: ಯೋಜನೆಯಲ್ಲಿ ನೋಂದಾಯಿಸಿಕೊಳ್ಳಲು ಸಮೀಪದ ಸಾಮಾನ್ಯ ಸೇವಾ ಕೇಂದ್ರಗಳಿಗೆ (ಸಿಎಸ್‌ಸಿ) ಭೇಟಿ ನೀಡಬೇಕು. ನೋಂದಣಿಗೆ ಬ್ಯಾಂಕ್ ಖಾತೆ / ಜನ್ ಧನ್ ಖಾತೆ ಮತ್ತು ಆಧಾರ್ ಸಂಖ್ಯೆ ಕಡ್ಡಾಯ. ಪಿಂಚಣಿಯ ಮೊದಲ ಕಂತನ್ನು ಕಾರ್ಮಿಕರು ನಗದು ರೂಪದಲ್ಲಿ ಪಾವತಿಸಬೇಕು. ನಂತರದಲ್ಲಿ ಪ್ರತಿ ತಿಂಗಳು ಬ್ಯಾಂಕ್ ಖಾತೆ ಮೂಲಕ ನಿಗದಿತ ಮೊತ್ತ ಸ್ವಯಂಚಾಲಿತವಾಗಿ ಕಡಿತ ಆಗುತ್ತದೆ. ಸರ್ಕಾರದ ಎಲ್ಲ ಕಾರ್ಮಿಕ ಕಚೇರಿಗಳು, ಎಲ್‌ಐಸಿ ಕೇಂದ್ರಗಳು, ಪಿಎಫ್ ಹಾಗೂ ಇಎಸ್ ಐ ಕಚೇರಿಗಳಲ್ಲಿ ಯೋಜನೆಯ ಬಗ್ಗೆ ಕಾರ್ಮಿಕರಿಗೆ ಸಂಪೂರ್ಣ ಮಾಹಿತಿ ಸಿಗುತ್ತದೆ.

ಹೊರಬರಲು  ಅವಕಾಶ: ಕಾರ್ಮಿಕ 10 ವರ್ಷಗಳಿಗೆ ಮೊದಲು ಪಂಚಣಿ ಯೋಜನೆಯಿಂದ ಹೊರಬರಲು ನಿರ್ಧರಿಸಿದರೆ ಆತ ಪಾವತಿಸಿರುವ ಮಾಸಿಕ ಪಿಂಚಣಿ ಕೊಡುಗೆಯ ಸಂಪೂರ್ಣ ಮೊತ್ತವನ್ನು ಉಳಿತಾಯ ಖಾತೆಯ ಬಡ್ಡಿ ದರದೊಂದಿಗೆ ಹಿಂದಿರುಗಿಸಲಾಗುತ್ತದೆ.

ಕಾರ್ಮಿಕನೊಬ್ಬ ನಿಯಮಿತವಾಗಿ ಪಿಂಚಣಿ ಪಾವತಿಸಿ 60 ವರ್ಷಗಳಿಗೆ ಮೊದಲು ಮೃತಪಟ್ಟರೆ/ ಅಂಗವೈಕಲ್ಯತೆ ಹೊಂದಿದರೆ ಅವರ ಪತ್ನಿ ಪಿಂಚಣಿ ಪಾವತಿ ಮುಂದುವರಿಸಬಹುದು. ಯೋಜನೆ ಮುಂದುವರಿಸದಿದ್ದಲ್ಲಿ ಮಾಸಿಕ ಪಿಂಚಣಿ ಕೊಡುಗೆಯ ಸಂಪೂರ್ಣ ಮೊತ್ತವನ್ನು ಉಳಿತಾಯ ಖಾತೆಯ ಬಡ್ಡಿ ದರದೊಂದಿಗೆ ಹಿಂದೆ ಪಡೆಯಬಹುದು.