‘ಪ್ರತಿ 11 ಸೆಕೆಂಡ್‌ಗೆ ತಾಯಿ ಅಥವಾ ಶಿಶು ಸಾವು’ : ವಿಶ್ವಸಂಸ್ಥೆ ವರದಿ

0
16

’ಜನ್ಮ ಎನ್ನುವುದು ಜಗತ್ತಿನ ಎಲ್ಲೆಡೆಯೂ ಸಂತೋಷದ ಸಂಗತಿಯೇ ಆಗಿದೆ. ಆದರೆ, ಪ್ರತಿ 11 ಸೆಕೆಂಡ್‌ಗೆ ಒಂದು ದುರಂತ ಸಂಭವಿಸುತ್ತಿದೆ. ಮಗು ಅಥವಾ ತಾಯಿ ಸಾವಿಗೀಡಾಗುತ್ತಿದೆ ಎಂದು ವಿಶ್ವಸಂಸ್ಥೆ ಬಿಡುಗಡೆ ಮಾಡಿದ ಅಂಕಿ ಅಂಶಗಳ ವರದಿ ಆತಂಕ ಮೂಡಿಸಿವೆ.

ಜಿನಿವಾ(ಎಎಫ್‌ಪಿ): ತಾಯಿ, ಮಗುವಿನ ಮರಣ ಪ್ರಮಾಣ ಇತ್ತೀಚೆಗಿನ ವರ್ಷಗಳಲ್ಲಿ ಕಡಿಮೆಯಾಗುತ್ತಿದೆ ಎಂಬ ಅಭಿಪ್ರಾಯ ಸಾಮಾನ್ಯವಾಗಿದ್ದರೂ, ವಿಶ್ವಸಂಸ್ಥೆ ಬಿಡುಗಡೆ ಮಾಡಿದ ಅಂಕಿ ಅಂಶಗಳ ವರದಿ ಆತಂಕ ಮೂಡಿಸಿವೆ.

’ಜನ್ಮ ಎನ್ನುವುದು ಜಗತ್ತಿನ ಎಲ್ಲೆಡೆಯೂ ಸಂತೋಷದ ಸಂಗತಿಯೇ ಆಗಿದೆ. ಆದರೆ, ಪ್ರತಿ 11 ಸೆಕೆಂಡ್‌ಗೆ ಒಂದು ದುರಂತ ಸಂಭವಿಸುತ್ತಿದೆ. ಮಗು ಅಥವಾ ತಾಯಿ ಸಾವಿಗೀಡಾಗುತ್ತಿರುವುದು ದುಃಖದ ವಿಷಯ’ ಎಂದು ವಿಶ್ವಸಂಸ್ಥೆ ಮಕ್ಕಳ ವಿಭಾಗದ ಮುಖ್ಯಸ್ಥ ಹೆನ್ರಿಟ್ಟಾ ಫೋರ್‌ ತಿಳಿಸಿದ್ದರೆ.

ಗುಣಮಟ್ಟದ ಮತ್ತು ಕೈಗೆಟುಕುವ ಆರೋಗ್ಯ ಸೇವೆಯಿಂದಾಗಿ ಗರ್ಭಿಣಿ ಮತ್ತು ನವಜಾತ ಶಿಶುಗಳ ಸಾವಿನ ಪ್ರಮಾಣ ಪ್ರತಿವರ್ಷ ಕಡಿಮೆಯಾಗುತ್ತಿದೆ ಎಂಬುದಾಗಿ ವಿಶ್ವಸಂಸ್ಥೆಯ ಈ ಹಿಂದಿನ ಎರಡು ವರದಿಗಳಲ್ಲಿ ಉಲ್ಲೇಖವಾಗಿತ್ತು.

ಐದು ವರ್ಷದೊಳಗಿನ ಮಕ್ಕಳ ಸಾವಿನ ಸಂಖ್ಯೆ ಅರ್ಧದಷ್ಟು ಕಡಿಮೆಯಾಗಿದೆ. ಆದರೆ, ಹುಟ್ಟಿದ ಮೊದಲ ತಿಂಗಳಲ್ಲಿಯೇ ಮಕ್ಕಳು ಸಾವನ್ನಪ್ಪುವುದು ಹೆಚ್ಚು.ಕಳೆದ ವರ್ಷ ಹೀಗೆ ಪ್ರತಿದಿನ 7 ಸಾವಿರ ಮಕ್ಕಳು ಸಾವಿಗೀಡಾಗಿದ್ದಾರೆ. ತಡೆಗಟ್ಟಬಹುದಾದ ಕಾಯಿಲೆಗಳಿಂದಲೂ 28 ಲಕ್ಷ ಮಹಿಳೆ ಮತ್ತು ಮಕ್ಕಳು ಪ್ರತಿವರ್ಷ ಸಾವನ್ನಪುತ್ತಿರುವುದು ಮತ್ತಷ್ಟು ಬೇಸರದ ಸಂಗತಿ ಎಂದು ವರದಿ ವಿಶ್ಲೇಷಿಸಿದೆ.