ಪ್ರಣವ್‌ ಮುಖರ್ಜಿ ‘ಭಾರತ ರತ್ನ’

0
869

ಮಾಜಿ ರಾಷ್ಟ್ರಪತಿ ಪ್ರಣವ್‌ ಮುಖರ್ಜಿ ಅವರಿಗೆ ದೇಶದ ಅತ್ಯುನ್ನತ ಗೌರವ ‘ಭಾರತ ರತ್ನ’ ಘೋಷಿಸಲಾಗಿದೆ. ಸಮಾಜ ಸೇವಕ ನಾನಾಜಿ ದೇಶಮುಖ್‌ ಮತ್ತು ಸಂಗೀತ ಸಾಮ್ರಾಟ ಡಾ. ಭೂಪೆನ್‌ ಹಜಾರಿಕಾ ಅವರಿಗೂ ಮರಣೋತ್ತರವಾಗಿ ಭಾರತ ರತ್ನ ಗೌರವ ನೀಡಲು ನಿರ್ಧರಿಸಲಾಗಿದೆ.

ನವದೆಹಲಿ (ಪಿಟಿಐ): ಮಾಜಿ ರಾಷ್ಟ್ರಪತಿ ಪ್ರಣವ್‌ ಮುಖರ್ಜಿ ಅವರಿಗೆ ದೇಶದ ಅತ್ಯುನ್ನತ ಗೌರವ ‘ಭಾರತ ರತ್ನ’ ಘೋಷಿಸಲಾಗಿದೆ. ಸಮಾಜ ಸೇವಕ ನಾನಾಜಿ ದೇಶಮುಖ್‌ ಮತ್ತು ಸಂಗೀತ ಸಾಮ್ರಾಟ ಡಾ. ಭೂಪೆನ್‌ ಹಜಾರಿಕಾ ಅವರಿಗೂ ಮರಣೋತ್ತರವಾಗಿ ಭಾರತ ರತ್ನ ಗೌರವ ನೀಡಲು ನಿರ್ಧರಿಸಲಾಗಿದೆ. 

ಪ್ರಣವ್‌ಅವರನ್ನು ಅಭಿನಂದಿಸಿದ ಮೊದಲಿಗರಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರೂ ಒಬ್ಬರು. ‘ಪ್ರಣವ್‌ ಅವರ ಬುದ್ಧಿಮತ್ತೆ ಮತ್ತು ವಿವೇಕಕ್ಕೆ ಸಾಟಿಯಾಗಬಲ್ಲವರು ವಿರಳ. ಅವರಿಗೆ ಭಾರತ ರತ್ನ ಗೌರವ ಅರ್ಪಣೆಯಾದದ್ದು ಖುಷಿ ಕೊಟ್ಟಿದೆ’ ಎಂದು ಪ್ರಧಾನಿ ಹೇಳಿದ್ದಾರೆ. 

 ಕಾಂಗ್ರೆಸ್‌ ಪಕ್ಷದ ಅತ್ಯಂತ ಹಿರಿಯ ನಾಯಕರಾದ ಪ್ರಣವ್‌ ದಶಕಗಳ ಕಾಲ ಆ ಪಕ್ಷದಲ್ಲಿದ್ದರು. ಭಾರತದ ರಾಷ್ಟ್ರಪತಿಯಾಗಿ 2012ರಿಂದ 2017ರವರೆಗೆ ಸೇವೆ ಸಲ್ಲಿಸಿದ್ದಾರೆ. ಐದು ದಶಕಗಳ ರಾಜಕೀಯ ಜೀವನದಲ್ಲಿ ಅವರು ಕೇಂದ್ರದ ಹಣಕಾಸು, ರಕ್ಷಣೆ ಮತ್ತು ವಿದೇಶಾಂಗ ಸಚಿವರಾಗಿ ಕೆಲಸ ಮಾಡಿದ್ದಾರೆ. 

 ಸಮಾಜ ಸೇವಕ ನಾನಾಜಿ ದೇಶಮುಖ್‌ ಅವರು ಜನತಾ ಪಾರ್ಟಿ ಮತ್ತು ಬಿಜೆಪಿಯ ಸ್ಥಾಪಕ ಸದಸ್ಯ. ಮಧ್ಯಪ್ರದೇಶ ಮತ್ತು ಉತ್ತರ ಪ್ರದೇಶದ 500 ಗ್ರಾಮಗಳ ಸಾಮಾಜಿಕ ಪರಿವರ್ತನೆಯಲ್ಲಿ ಅವರು ಮಹತ್ವದ ಪಾತ್ರ ವಹಿಸಿದ್ದರು. ತಮ್ಮ 93ನೇ ವಯಸ್ಸಿನಲ್ಲಿ 2010ರಲ್ಲಿ ಅವರು ನಿಧನರಾದರು. 

ಸಂಗೀತ ಸಾಮ್ರಾಟ ಎಂದೇ ಪರಿಗಣಿಸಲಾಗುವ ಡಾ. ಭೂಪೇನ್‌ ಹಜಾರಿಕಾ ಅವರು ಅಸ್ಸಾಂನವರು. ಸಂಗೀತ ನಾಟಕ ಅಕಾಡೆಮಿ ಮತ್ತು ಪದ್ಮಭೂಷಣ ಪ್ರಶಸ್ತಿ ಪುರಸ್ಕೃತರು. ದೇಶದ ಎರಡನೇ ಅತ್ಯುನ್ನತ ನಾಗರಿಕ ಗೌರವವಾದ ‘ಪದ್ಮಭೂಷಣ’ವನ್ನು 2012ರಲ್ಲಿ ಅವರಿಗೆ ಮರಣೋತ್ತರವಾಗಿ ನೀಡಲಾಗಿತ್ತು. 2011ರಲ್ಲಿ ತಮ್ಮ 85ನೇ ವಯಸ್ಸಿನಲ್ಲಿ ಅವರು ನಿಧನರಾದರು.