ಪ್ಯಾರಿಸ್‌ ಮಾಸ್ಟರ್ಸ್‌ ಟೆನಿಸ್‌ ಟೂರ್ನಿ :ಪ್ರಶಸ್ತಿ ಗೆದ್ದ ಕಚನೊವ್‌

0
209

ರಷ್ಯಾದ 22 ವರ್ಷ ವಯಸ್ಸಿನ ಆಟಗಾರ ಕರೆನ್‌ ಕಚನೊವ್‌, ನವೆಂಬರ್ 4 ರ ಭಾನುವಾರ ರಾತ್ರಿ ಸರ್ಬಿಯಾದ ನೊವಾಕ್‌ ಜೊಕೊವಿಚ್‌ಗೆ ಆಘಾತ ನೀಡಿ ಪ್ಯಾರಿಸ್‌ ಮಾಸ್ಟರ್ಸ್‌ ಟೆನಿಸ್‌ ಟೂರ್ನಿಯ ಕಿರೀಟ ಮುಡಿಗೇರಿ ಸಿಕೊಂಡರು.

ಪ್ಯಾರಿಸ್‌ (ರಾಯಿಟರ್ಸ್‌): ರಷ್ಯಾದ 22 ವರ್ಷ ವಯಸ್ಸಿನ ಆಟಗಾರ ಕರೆನ್‌ ಕಚನೊವ್‌, ನವೆಂಬರ್ 4 ರ  ಭಾನುವಾರ ರಾತ್ರಿ ಸರ್ಬಿಯಾದ ನೊವಾಕ್‌ ಜೊಕೊವಿಚ್‌ಗೆ ಆಘಾತ ನೀಡಿ ಪ್ಯಾರಿಸ್‌ ಮಾಸ್ಟರ್ಸ್‌ ಟೆನಿಸ್‌ ಟೂರ್ನಿಯ ಕಿರೀಟ ಮುಡಿಗೇರಿ ಸಿಕೊಂಡರು.

ಪುರುಷರ ಸಿಂಗಲ್ಸ್‌ ವಿಭಾಗದ ಫೈನಲ್‌ ಪಂದ್ಯದಲ್ಲಿ ಕರೆನ್‌ 7–5, 6–4ರ ನೇರ ಸೆಟ್‌ಗಳಿಂದ ಗೆದ್ದರು. ಈ ಹೋರಾಟ ಒಂದು ಗಂಟೆ 37 ನಿಮಿಷ ನಡೆಯಿತು.

ಐದನೇ ಪ್ರಶಸ್ತಿಯ ಕನಸಿನೊಂದಿಗೆ ಕಣಕ್ಕಿಳಿದಿದ್ದ ಜೊಕೊವಿಚ್‌ಗೆ ಮೊದಲ ಸೆಟ್‌ನಲ್ಲೇ ಹಿನ್ನಡೆ ಎದುರಾಯಿತು. ಶರವೇಗದ ಸರ್ವ್‌ ಮತ್ತು ಆಕರ್ಷಕ ಹಿಂಗೈ ಹೊಡೆತಗಳ ಮೂಲಕ ಮಿಂಚಿದ ಕಚನೊವ್‌ 3–1ರ ಮುನ್ನಡೆ ಗಳಿಸಿದರು. ನಂತರವೂ ಗರ್ಜಿಸಿದ ಅವರು ಸೆಟ್‌ ಗೆದ್ದು ಸಂಭ್ರಮಿಸಿದರು.

ಎರಡನೇ ಸೆಟ್‌ನ ಶುರುವಿನಲ್ಲಿ ಜೊಕೊವಿಚ್‌ ಮಿಂಚಿದರು. ವಿಶ್ವ ಕ್ರಮಾಂಕ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿ ರುವ ಸರ್ಬಿಯಾದ ಆಟಗಾರ 2–1ರ ಮುನ್ನಡೆ ಪಡೆದಿದ್ದರು.  ನಂತರ ಕರೆನ್‌ ಪಾರಮ್ಯ ಮೆರೆದರು. ಕ್ರಾಸ್‌ಕೋರ್ಟ್‌ ಸ್ಮ್ಯಾಷ್‌ಗಳ ಮೂಲಕ ಗೇಮ್‌ ಜಯಿಸಿ ಜೊಕೊವಿಚ್‌ ಅವರ ಪ್ರಶಸ್ತಿಯ ಕನಸಿಗೆ ತಣ್ಣೀರು ಸುರಿದರು.