ಪ್ಯಾನ್‌ ಕಾರ್ಡ್‌ ಹೊಸ ನಿಯಮಾವಳಿ ಡಿ.5ರಿಂದ ಜಾರಿ

0
981

ಆದಾಯ ತೆರಿಗೆ ಇಲಾಖೆಯು ಪ್ಯಾನ್‌ಕಾರ್ಡ್‌ಗೆ ಸಂಬಂಧಿಸಿ ಹೊಸ ನಿಯಮಾವಳಿಗಳನ್ನು ಡಿಸೆಂಬರ್‌ 5ರಿಂದ ಜಾರಿಗೊಳಿಸಲಿದೆ. ತೆರಿಗೆ ವಂಚನೆ ಹಾಗೂ ನಕಲಿ ಕಂಪನಿಗಳನ್ನು ತಡೆಯುವ ಉದ್ದೇಶದಿಂದ ಹೊಸ ನಿಯಮಗಳು ಜಾರಿಯಾಗುತ್ತಿದ್ದು, ಜನ ಸಾಮಾನ್ಯರಿಗೆ ಇದರಿಂದ ಯಾವುದೇ ತೊಂದರೆಯಾಗುವುದಿಲ್ಲ ಎಂದು ಇಲಾಖೆ ತಿಳಿಸಿದೆ.

ಹೊಸದಿಲ್ಲಿ: ಆದಾಯ ತೆರಿಗೆ ಇಲಾಖೆಯು ಪ್ಯಾನ್‌ಕಾರ್ಡ್‌ಗೆ ಸಂಬಂಧಿಸಿ ಹೊಸ ನಿಯಮಾವಳಿಗಳನ್ನು ಡಿಸೆಂಬರ್‌ 5ರಿಂದ ಜಾರಿಗೊಳಿಸಲಿದೆ. ತೆರಿಗೆ ವಂಚನೆ ಹಾಗೂ ನಕಲಿ ಕಂಪನಿಗಳನ್ನು ತಡೆಯುವ ಉದ್ದೇಶದಿಂದ ಹೊಸ ನಿಯಮಗಳು ಜಾರಿಯಾಗುತ್ತಿದ್ದು, ಜನ ಸಾಮಾನ್ಯರಿಗೆ ಇದರಿಂದ ಯಾವುದೇ ತೊಂದರೆಯಾಗುವುದಿಲ್ಲ ಎಂದು ಇಲಾಖೆ ತಿಳಿಸಿದೆ. 

ಹೊಸ ನಿಯಮದ ಪ್ರಕಾರ ವಾರ್ಷಿಕ 2.5 ಲಕ್ಷ ರೂ. ನಿವ್ವಳ ವಹಿವಾಟು ಅಥವಾ ಆದಾಯ ಹೊಂದಿರುವ ಎಲ್ಲ ಬಿಸಿನೆಸ್‌ಗಳಿಗೆ ಪ್ಯಾನ್‌ ಕಾರ್ಡ್‌ ಕಡ್ಡಾಯವಾಗಿದೆ. 

ಐಟಿಆರ್‌ ವಿನಾಯಿತಿ ಇಲ್ಲ: 

ನಕಲಿ ಕಂಪನಿಗಳನ್ನು ಹತ್ತಿಕ್ಕುವ ಸಲುವಾಗಿ ಕೇಂದ್ರ ಸರಕಾರ ಈ ಹಿಂದೆ ಹಲವು ಕ್ರಮಗಳನ್ನು ಕೈಗೊಂಡಿತ್ತು. ಲಕ್ಷಾಂತರ ನಕಲಿ ಕಂಪನಿಗಳ ನೋಂದಣಿಯನ್ನು ರದ್ದುಪಡಿಸಲಾಗಿತ್ತು. ನಂತರ 3,000 ರೂ. ತನಕ ತೆರಿಗೆ ಉತ್ತರದಾಯಿತ್ವ ಇರುವ ಕಂಪನಿಗಳಿಗೆ ಇದ್ದ ತೆರಿಗೆ ವಿನಾಯಿತಿಯ ಮಿತಿಯನ್ನೂ ರದ್ದುಪಡಿಸಿತ್ತು. 

ಆದಾಯ ತೆರಿಗೆ (12ನೇ ತಿದ್ದುಪಡಿ) ನಿಯಮ-2018 ಎಂಬ ಹೆಸರಿನ ಹೊಸ ನಿಯಮಾವಳಿಯ ಮುಖ್ಯಾಂಶಗಳು ಇಂತಿವೆ. 

1. 2018ರ ಡಿಸೆಂಬರ್‌ 5ರಂದು ಜಾರಿಯಾಗುವ ಪ್ಯಾನ್‌ಕಾರ್ಡ್‌ನ ಹೊಸ ನಿಯಮಾವಳಿಗಳು ಯಾವುದೇ ಸಂಸ್ಥೆ, ಬಿಸಿನೆಸ್‌ ನಡೆಸದಿರುವ ವೈಯಕ್ತಿಕ ತೆರಿಗೆಪಾವತಿದಾರರಿಗೆ ಅನ್ವಯಿಸುವುದಿಲ್ಲ. 

2. ಕಂಪನಿ ಅಥವಾ ಸಂಸ್ಥೆಗಳ ವ್ಯವಸ್ಥಾಪಕ ನಿರ್ದೇಶಕ, ನಿರ್ದೇಶಕ, ಪಾಲುದಾರ, ಟ್ರಸ್ಟಿ, ಸ್ಥಾಪಕ, ಸಿಇಒ, ಪದಾಧಿಕಾರಿಗಳು ಪ್ಯಾನ್‌ ಕಾರ್ಡ್‌ ಹೊಂದಬೇಕು. 

3. ವಾರ್ಷಿಕ 5 ಲಕ್ಷ ರೂ.ಗಿಂತ ಒಳಗೆ ವಹಿವಾಟು, ಆದಾಯ ಹೊಂದಿದ್ದರೂ, ಅಂಥ ಕಂಪನಿ, ಉದ್ದಿಮೆ ಘಟಕಗಳು ಪ್ಯಾನ್‌ ಕಾರ್ಡ್‌ ಹೊಂದಿರಬೇಕಾಗುತ್ತದೆ. 

4. ಒಂದು ವೇಳೆ ಪೋಷಕರ ಪೈಕಿ ತಂದೆಯಿಂದ ದೂರವಾಗಿರುವ ಹಾಗೂ ತಾಯಿಯ ಜತೆ ಇರುವವರು (ಸಿಂಗಲ್‌ ಮದರ್‌) ಪ್ಯಾನ್‌ ಕಾರ್ಡ್‌ಗೆ ಅರ್ಜಿ ಸಲ್ಲಿಸುವ ಸಂದರ್ಭ ತಂದೆಯ ಹೆಸರನ್ನು ಕಡ್ಡಾಯವಾಗು ಬಳಸಬೇಕಿಲ್ಲ. ಯಾಯಿಯ ಹೆಸರನ್ನು ನಮೂದಿಸಿದರೆ ಸಾಕು. 

5. ಅಕ್ರಮ ಹಣಕಾಸು ವರ್ಗಾವಣೆ, ಕಪ್ಪು ಹಣ ಚಲಾವಣೆ ಪತ್ತೆ ಹಚ್ಚಲು ಸರಕಾರಕ್ಕೆ ಇದು ಸಹಕಾರಿ.