ಪ್ಯಾಕೇಜ್ಡ್‌ ಉತ್ಪನ್ನ: ಗಡುವು ವಿಸ್ತರಣೆ

0
21

ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಜಾರಿ ಮುಂಚಿನ ಮಾರಾಟವಾಗದ ಪ್ಯಾಕೇಜ್ಡ್‌ ಉತ್ಪನ್ನಗಳನ್ನು ಪರಿಷ್ಕೃತ ದರಗಳ ಅನ್ವಯ ಮಾರಾಟ ಮಾಡುವ ಗಡುವನ್ನು ಜುಲೈ 31ರವರೆಗೆ ವಿಸ್ತರಿಸಲಾಗಿದೆ.

ನವದೆಹಲಿ: ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಜಾರಿ ಮುಂಚಿನ ಮಾರಾಟವಾಗದ ಪ್ಯಾಕೇಜ್ಡ್‌ ಉತ್ಪನ್ನಗಳನ್ನು ಪರಿಷ್ಕೃತ ದರಗಳ ಅನ್ವಯ ಮಾರಾಟ ಮಾಡುವ ಗಡುವನ್ನು ಜುಲೈ 31ರವರೆಗೆ ವಿಸ್ತರಿಸಲಾಗಿದೆ.

2017ರ ಜುಲೈ 1ರಂದು ದೇಶದಾದ್ಯಂತ ಜಿಎಸ್‌ಟಿ ಜಾರಿಯಾದ ಬಳಿಕ ಪ್ಯಾಕೇಜ್ಡ್‌ ಉತ್ಪನ್ನಗಳ ಮೇಲೆ ಪರಿಷ್ಕೃತ ಗರಿಷ್ಠ ಮಾರಾಟ ಬೆಲೆ (ಎಂಆರ್‌ಪಿ) ವಿವರ ಅಂಟಿಸಿ ಮಾರಾಟ ಮಾಡಲು ಆರಂಭದಲ್ಲಿ  ಸೆಪ್ಟೆಂಬರ್‌ವರೆಗೆ ಗಡುವು ನೀಡಲಾಗಿತ್ತು. ಆ ಬಳಿಕ ಹಲವಾರು ಬಾರಿ ಜಿಎಸ್‌ಟಿ ದರಗಳನ್ನು ಪರಿಷ್ಕರಿಸಲಾಗಿತ್ತು. ಈ ಗಡುವನ್ನು ಕೂಡ ಮೇಲಿಂದ ಮೇಲೆ ವಿಸ್ತರಿಸಲಾಗಿತ್ತು.

ಸರಕುಗಳ ತಯಾರಕರು, ಆಮದುದಾರರ ಕೋರಿಕೆ ಮೇರೆಗೆ ಈ ಗಡುವನ್ನು ಈಗ ಮತ್ತೆ ವಿಸ್ತರಿಸಲಾಗಿದೆ ಎಂದು ಗ್ರಾಹಕರ ವ್ಯವಹಾರ ಸಚಿವಾಲಯ ತಿಳಿಸಿದೆ.

ವಿವರ ಕಡ್ಡಾಯ: ಇಂತಹ ಉತ್ಪನ್ನಗಳ ಮೇಲೆ ಕೆಲ ವಿವರಗಳನ್ನು ನಮೂದಿಸುವುದನ್ನು ಕಡ್ಡಾಯ ಮಾಡಲಾಗಿದೆ.

ಸರಕು ತಯಾರಾದ ದೇಶ, ಬಳಸಬಹುದಾದ ಕಾಲಮಿತಿ ಅಥವಾ ಉತ್ಪನ್ನ ನಿರುಪಯುಕ್ತವಾಗುವ ದಿನ ಮತ್ತಿತರ ವಿವರಗಳನ್ನು ಇಂತಹ ಉತ್ಪನ್ನಗಳ ಮೇಲೆ ನಮೂದಿಸಬೇಕಾಗುತ್ತದೆ.

ಮಾರಾಟವಾಗದ ಪ್ಯಾಕೇಜ್ಡ್‌ ಸರಕುಗಳ ಮೇಲೆ ಜಿಎಸ್‌ಟಿ ಮುಂಚಿನ ಎಲ್ಲ ತೆರಿಗೆ ದರ ಒಳಗೊಂಡ ಗರಿಷ್ಠ ಮಾರಾಟ ದರ (ಎಂಆರ್‌ಪಿ) ನಮೂದಿಸಬೇಕಾಗುತ್ತದೆ. ಜಿಎಸ್‌ಟಿಯಿಂದಾಗಿ ಕೆಲ ಉತ್ಪನ್ನಗಳ ಬೆಲೆಯು ಏರಿಳಿತವಾಗಿರುವುದರಿಂದ ‘ಎಂಆರ್‌ಪಿ’ ನಮೂದಿಸುವುದನ್ನೂ ಕಡ್ಡಾಯಮಾಡಲಾಗಿದೆ.