ಪೋರ್ಚುಗಲ್ ತಂಡದಿಂದ ರೊನಾಲ್ಡೊ ಔಟ್!

0
691

ವಿಶ್ವ ಫುಟ್​ಬಾಲ್ ತಾರೆ ಕ್ರಿಶ್ಚಿಯಾನೊ ರೊನಾಲ್ಡೊ ವಿರುದ್ಧ ಅಮೆರಿಕದಲ್ಲಿ ಮಹಿಳೆಯ ಮೇಲೆ ಅತ್ಯಾಚಾರ ಮಾಡಿದ ಆರೋಪ ದಾಖಲಾದ ಬೆನ್ನಲ್ಲಿಯೇ ಅವರನ್ನು ಪೋರ್ಚುಗಲ್ ಫುಟ್​ಬಾಲ್ ತಂಡದಿಂದ ಕೈಬಿಡಲಾಗಿದೆ.

ಲಿಸ್ಬನ್: ವಿಶ್ವ ಫುಟ್​ಬಾಲ್ ತಾರೆ ಕ್ರಿಶ್ಚಿಯಾನೊ ರೊನಾಲ್ಡೊ ವಿರುದ್ಧ ಅಮೆರಿಕದಲ್ಲಿ ಮಹಿಳೆಯ ಮೇಲೆ ಅತ್ಯಾಚಾರ ಮಾಡಿದ ಆರೋಪ ದಾಖಲಾದ ಬೆನ್ನಲ್ಲಿಯೇ ಅವರನ್ನು ಪೋರ್ಚುಗಲ್ ಫುಟ್​ಬಾಲ್ ತಂಡದಿಂದ ಕೈಬಿಡಲಾಗಿದೆ. ಅಕ್ಟೋಬರ್ 11ರಂದು ಪೋಲೆಂಡ್ ವಿರುದ್ಧ ಯುಇಎಫ್​ಎ ನೇಷನ್ಸ್ ಲೀಗ್ ಮುಖಾಮುಖಿ, ಅದಾದ ಮೂರು ದಿನಗಳ ಬಳಿಕ ಸ್ಕಾಟ್ಲೆಂಡ್ ವಿರುದ್ಧ ಗ್ಲಾಸ್ಗೋದಲ್ಲಿ ಅಂತಾರಾಷ್ಟ್ರೀಯ ಸೌಹಾರ್ದ ಪಂದ್ಯವನ್ನು ಪೋರ್ಚುಗಲ್ ಆಡಲಿದೆ. ಈ ಎರಡೂ ಪಂದ್ಯಗಳಿಗೆ ಪ್ರಕಟಿಸಲಾಗಿರುವ ತಂಡದಲ್ಲಿ ರೊನಾಲ್ಡೊ ಸ್ಥಾನ ಪಡೆದಿಲ್ಲ. ಅದಲ್ಲದೆ, ಮುಂದಿನ ನವೆಂಬರ್​ನಲ್ಲಿ ನಡೆಯಲಿರುವ ಪಂದ್ಯಕ್ಕೂ ರೊನಾಲ್ಡೊರನ್ನು ಆಯ್ಕೆ ಮಾಡುವುದಿಲ್ಲ ಎಂದು ಕೋಚ್ ಫೆರ್ನಾಂಡೋ ಸ್ಯಾಂಟೋಸ್ ಹೇಳಿದ್ದಾರೆ.