ಪೋಖರಣ್​ನಲ್ಲಿ ವಾಯು ಶಕ್ತಿ ಸಮರಾಭ್ಯಾಸ

0
687

ಭಾರತೀಯ ವಾಯುಪಡೆಯ ‘ವಾಯು ಶಕ್ತಿ- 2019’ ಸಮರಾಭ್ಯಾಸ ರಾಜಸ್ಥಾನದ ಜೈಸಲ್ಮೇರ್ ಜಿಲ್ಲೆಯ ಪೋಖರಣ್ ಬಳಿಯ ಭಾರತ- ಪಾಕ್ ಗಡಿಯಲ್ಲಿ ಫೆಬ್ರುವರಿ 16 ರ ಶನಿವಾರ ಆರಂಭಗೊಂಡಿದೆ. ಜಮ್ಮು- ಕಾಶ್ಮೀರದ ಪುಲ್ವಾಮಾದಲ್ಲಿ ಎರಡು ದಿನಗಳ ಹಿಂದೆ ನಡೆದ ಉಗ್ರರ ದಾಳಿ ಬೆನ್ನಿಗೆ ವಾಯುಪಡೆಯ ಸಮರಾಭ್ಯಾಸ ಗಡಿಯಂಚಿನಲ್ಲಿ ನಡೆಯುತ್ತಿರುವುದು ಪಾಕ್​ನಲ್ಲಿ ಆತಂಕ ಹುಟ್ಟಿಸಿದೆ ಎನ್ನಲಾಗಿದೆ.

ಜೈಸಲ್ಮೇರ್: ಭಾರತೀಯ ವಾಯುಪಡೆಯ ‘ವಾಯು ಶಕ್ತಿ- 2019’ ಸಮರಾಭ್ಯಾಸ ರಾಜಸ್ಥಾನದ ಜೈಸಲ್ಮೇರ್ ಜಿಲ್ಲೆಯ ಪೋಖರಣ್ ಬಳಿಯ ಭಾರತ- ಪಾಕ್ ಗಡಿಯಲ್ಲಿ ಶನಿವಾರ ಆರಂಭಗೊಂಡಿದೆ. ಜಮ್ಮು- ಕಾಶ್ಮೀರದ ಪುಲ್ವಾಮಾದಲ್ಲಿ ಎರಡು ದಿನಗಳ ಹಿಂದೆ ನಡೆದ ಉಗ್ರರ ದಾಳಿ ಬೆನ್ನಿಗೆ ವಾಯುಪಡೆಯ ಸಮರಾಭ್ಯಾಸ ಗಡಿಯಂಚಿನಲ್ಲಿ ನಡೆಯುತ್ತಿರುವುದು ಪಾಕ್​ನಲ್ಲಿ ಆತಂಕ ಹುಟ್ಟಿಸಿದೆ ಎನ್ನಲಾಗಿದೆ.

ಪೋಖರಣ್ ಫೈರಿಂಗ್ ರೇಂಜ್​ನಲ್ಲಿ ಮುಂಜಾನೆ 5.20ರಿಂದ ಲೋಹದ ಹಕ್ಕಿಗಳ ಕಲರವ ಆರಂಭವಾಯಿತು. ಈ ಸಮರಾಭ್ಯಾಸಕ್ಕೂ ಮುನ್ನ ಫುಲ್ ಡ್ರೆಸ್ ರಿಹರ್ಸಲ್ (ಎಫ್​ಡಿಆರ್) ಕವಾಯತು ಏರ್ ಚೀಫ್ ಮಾರ್ಷಲ್ ಅನಿಲ್ ಖೋಸ್ಲಾ ಸಮ್ಮುಖದಲ್ಲಿ ಗುರುವಾರ ನಡೆದಿತ್ತು. ಫೈರ್ ಪವರ್ ಡೆಮಾನ್​ಸ್ಟ್ರೇಷನ್ (ಎಫ್​ಪಿಡಿ) 7ನೇ ಆವೃತಿಯಲ್ಲಿ ಹಗಲು ಮತ್ತು ರಾತ್ರಿ ವೇಳೆ ನಡೆಯುವ ಕಾರ್ಯಾಚರಣೆಗಳ ಪ್ರಾತ್ಯಕ್ಷಿಕೆ ನಡೆದವು. ಫೆ. 19ರವರೆಗೆ ನಡೆಯುವ ಈ ವಿಮಾನಗಳ ಯುದ್ಧದ ತಾಲೀಮಿನ ನೇರ ಪ್ರಸಾರ ದೂರದರ್ಶನ ವಾಹಿನಿ, ಐಎಎಫ್ ಅಧಿಕೃತ ಫೇಸ್​ಬುಕ್ ಪುಟ m.facebook.com/IndianAirForce ಹಾಗೂ ವೆಬ್​ಸೈಟ್ http://webcast.gov.in/iaf ನಲ್ಲಿ ವೀಕ್ಷಿಸಬಹುದು. 

3 ವರ್ಷಕ್ಕೊಮ್ಮೆ ತಾಲೀಮು

ವಾಯುಪಡೆ ಪ್ರತಿ ಮೂರು ವರ್ಷಕ್ಕೊಮ್ಮೆ ಇಂತಹ ಸಮರಾಭ್ಯಾಸವನ್ನು ನಡೆಸುತ್ತಿದ್ದು, ಇದರಲ್ಲಿ ವಾಯುಸೇನೆಯ ಸಮಗ್ರ ಯುದ್ಧ ಕೌಶಲ ಮತ್ತು ಸಾಮರ್ಥ್ಯ ಪ್ರದರ್ಶಿತವಾಗಲಿದೆ. ವಾಯುಪಡೆಯ ಯುದ್ಧ ವಿಮಾನ, ಸರಕು ಸಾಗಣೆ ವಿಮಾನ, ಹೆಲಿಕಾಪ್ಟರ್​ಗಳು ಮತ್ತು ಇವುಗಳ ಕಾರ್ಯಚರಣೆಗೆ ಪೂರಕವಾದ ವ್ಯವಸ್ಥೆಗಳು ಇಲ್ಲಿ ಅನಾವರಣಗೊಳ್ಳುತ್ತದೆ.