ಪೇಟಿಎಂ ಪೇಮೆಂಟ್ಸ್ ಬ್ಯಾಂಕ್‌ನ ಹೊಸ ಆ್ಯಪ್‌ ಬಿಡುಗಡೆ

0
444

ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ ಲಿಮಿಟೆಡ್ (ಪಿಪಿಬಿ), ತನ್ನ 4.30 ಕೋಟಿ ಗ್ರಾಹಕರಿಗೆ ಸರಳ, ಸುಲಭ ಮತ್ತು ನಿರಂತರ ಬ್ಯಾಂಕಿಂಗ್ ಸೇವೆಗಳನ್ನು ಒದಗಿಸಲು ಹೊಸ ಮೊಬೈಲ್ ಬ್ಯಾಂಕಿಂಗ್ ಆ್ಯಪ್ ಬಿಡುಗಡೆ ಮಾಡಿದೆ.

ಬೆಂಗಳೂರು: ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ ಲಿಮಿಟೆಡ್ (ಪಿಪಿಬಿ), ತನ್ನ 4.30 ಕೋಟಿ ಗ್ರಾಹಕರಿಗೆ ಸರಳ, ಸುಲಭ ಮತ್ತು ನಿರಂತರ ಬ್ಯಾಂಕಿಂಗ್ ಸೇವೆಗಳನ್ನು ಒದಗಿಸಲು ಹೊಸ ಮೊಬೈಲ್ ಬ್ಯಾಂಕಿಂಗ್ ಆ್ಯಪ್ ಬಿಡುಗಡೆ ಮಾಡಿದೆ.

‘ಪಿಪಿಬಿಯಲ್ಲಿ ಉಳಿತಾಯ ಖಾತೆ ಹೊಂದಿರುವ ಗ್ರಾಹಕರು ಇನ್ನು ಮುಂದೆ ಈ ಆ್ಯಪ್ ಮೂಲಕ ತಮ್ಮ ಖಾತೆಯ ವಿವರ ತಿಳಿದುಕೊಳ್ಳಬಹುದು. ಡೆಬಿಟ್ ಕಾರ್ಡ್ ಮತ್ತು ಡಿಜಿಟಲ್ ಡೆಬಿಟ್ ಕಾರ್ಡುಗಳಿಗೆ ಮನವಿ ಸಲ್ಲಿಸಬಹುದು. ದಿನದ 24 ಗಂಟೆ ಸಹಾಯವಾಣಿ ಕಾರ್ಯನಿರ್ವಹಿಸಲಿದೆ’ ಎಂದು ಬ್ಯಾಂಕ್‍ನ ಸಿಇಒ ಸತೀಶ್‍ ಕುಮಾರ್ ಗುಪ್ತ ತಿಳಿಸಿದ್ದಾರೆ.  ಹೊಸ ಆ್ಯಪ್‍ನಲ್ಲಿ ಪೇಟಿಎಂ ಪೇಮೆಂಟ್ಸ್ ಬ್ಯಾಂಕ್‍ನ ಗ್ರಾಹಕರ ಖಾತೆಗಳ ಮಾಹಿತಿ/ ಸೇವೆಗಳು ಮಾತ್ರ ಸಿಗಲಿವೆ.