ಪೇಟಿಎಂ ಪೇಮೆಂಟ್ಸ್ ಬ್ಯಾಂಕ್‌ಗೆ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿಯಾಗಿ (ಸಿಇಒ) ಸತೀಶ್ ಕುಮಾರ್ ಗುಪ್ತ ನೇಮಕ

0
470

ಪೇಟಿಎಂ ಪೇಮೆಂಟ್ಸ್ ಬ್ಯಾಂಕ್‌ನ ವ್ಯವಸ್ಥಾಪಕ ನಿರ್ದೇಶಕ ಮತ್ತು ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿಯಾಗಿ (ಸಿಇಒ) ಸತೀಶ್ ಕುಮಾರ್ ಗುಪ್ತ ಅವರು ಅಧಿಕಾರವಹಿಸಿಕೊಂಡಿದ್ದಾರೆ.

ಬೆಂಗಳೂರು: ಪೇಟಿಎಂ ಪೇಮೆಂಟ್ಸ್ ಬ್ಯಾಂಕ್‌ನ ವ್ಯವಸ್ಥಾಪಕ ನಿರ್ದೇಶಕ ಮತ್ತು ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿಯಾಗಿ (ಸಿಇಒ) ಸತೀಶ್ ಕುಮಾರ್ ಗುಪ್ತ ಅವರು ಅಧಿಕಾರವಹಿಸಿಕೊಂಡಿದ್ದಾರೆ. ಪೇಟಿಎಂ ಪೇಮೆಂಟ್ಸ್ ಬ್ಯಾಂಕ್, ಶೂನ್ಯ ಠೇವಣಿ ಖಾತೆ ಮತ್ತು ಡಿಜಿಟಲ್ ವಹಿವಾಟುಗಳ ಸೇವೆಯನ್ನು  ಶುಲ್ಕರಹಿತವಾಗಿ ಒದಗಿಸುತ್ತಿದೆ.

ಪೇಟಿಎಂ ಪೇಮೆಂಟ್ಸ್ ಬ್ಯಾಂಕ್‌ ಸ್ಥಾಪನೆಗೆ ಲೈಸೆನ್ಸ್ ನೀಡಿದ ವರ್ಷ : ಆಗಸ್ಟ್ 2015

ಪೇಟಿಎಂ  ಸ್ಥಾಪಕರು : ವಿಜಯಶೇಖರ್ ಶರ್ಮಾ

ಪೇಟಿಎಂ ಸ್ಥಾಪನೆಯಾದ ವರ್ಷ : 2010

ಪೇಟಿಎಂ ಕೇಂದ್ರ ಕಚೇರಿ : ಉತ್ತರಪ್ರದೇಶ ರಾಜ್ಯದ ನೊಯಿಡಾ ದಲ್ಲಿದೆ