ಪೆಸಿಫಿಕ್‌ ಸಾಗರ ದಾಟಿದ ಜಪಾನಿ ಅಂಧ ನಾವಿಕ “ಮಿಟುಶಿರೊ ಇವಾಮೊಟು”

0
318

ಜಪಾನಿ ಅಂಧ ನಾವಿಕರೊಬ್ಬರು ಪೆಸಿಫಿಕ್‌ ಸಾಗರವನ್ನು ಯಶಸ್ವಿಯಾಗಿ ದಾಟಿ ದಾಖಲೆ ಮಾಡಿದ್ದಾರೆ.

ಟೋಕಿಯೊ (ಎಎಫ್‌ಪಿ): ಜಪಾನಿ ಅಂಧ ನಾವಿಕರೊಬ್ಬರು ಪೆಸಿಫಿಕ್‌ ಸಾಗರವನ್ನು ಯಶಸ್ವಿಯಾಗಿ ದಾಟಿ ದಾಖಲೆ ಮಾಡಿದ್ದಾರೆ.

ಸ್ಯಾನ್‌ ಡಿಯಾಗೊ ನಿವಾಸಿ 52 ವರ್ಷದ ಮಿಟುಶಿರೊ ಇವಾಮೊಟು 40 ಅಡಿ ಉದ್ದದ ಹಾಯಿದೋಣಿ ಮೂಲಕ ಫುಕುಶಿಮಾ ಬಂದರು ತಲುಪಿ ಪ್ರಯಾಣ ಪೂರ್ಣಗೊಳಿಸಿದ್ದಾರೆ. ಅವರು ಇದೇ ವರ್ಷದ ಫೆಬ್ರುವರಿ 24ರಂದು ಕ್ಯಾಲಿಫೋರ್ನಿಯಾದಿಂದ ಯಾನ ಆರಂಭಿಸಿದ್ದರು.

ಸಮುದ್ರಯಾನದ ವೇಳೆ ಅಮೆರಿಕದ ನಾವಿಕ ಡೌಗ್‌ ಸ್ಮಿತ್‌ ಅವರು ಗಾಳಿಯ ಚಲನವಲನಗಳ ಕುರಿತು ಇವಾಮೊಟು ಅವರಿಗೆ ಮೌಖಿಕವಾಗಿ ಮಾಹಿತಿ ನೀಡಿದ್ದರು. ಸಮುದ್ರದಲ್ಲಿ 14,000 ಕಿ.ಮೀ ಸಂಚರಿಸಿ ಅವರು ಮನೆಗೆ ಹಿಂದಿರುಗಿದ್ದಾರೆ.

ಆರು ವರ್ಷದ ಹಿಂದೆಯೇ ಇವಾಮೊಟು ಈ ಸಾಹಸಕ್ಕೆ ಮುಂದಾಗಿದ್ದರು. ಆದರೆ ಆಗ ಅವರ ದೋಣಿ ತಿಮಿಂಗಲದ ಹೊಡೆತಕ್ಕೆ ಸಿಲುಕಿತ್ತು.

‘ನಾನೀಗ ಮನೆಗೆ ಬಂದಿದ್ದೇನೆ. ನನ್ನ ಕನಸು ಈಡೇರಿದೆ’ ಎಂದು ಅವರು ಸಂತಸ ವ್ಯಕ್ತಪಡಿಸಿದ್ದಾರೆ.

 16 ನೇ ವಯಸ್ಸಿನಲ್ಲಿ ತನ್ನ ಕಣ್ಣುಗಳನ್ನು ಕಳೆದುಕೊಂಡ ಇವಾಮೊಟೊ, ಚಾರಿಟಿಗಾಗಿ ಹಣವನ್ನು ಸಂಗ್ರಹಿಸಲು ಪ್ರಯಾಣ ಮಾಡಿದರು, ಅವರ ವೆಬ್ಸೈಟ್ ಪ್ರಕಾರ, ಕುರುಡು ಕಾಯಿಲೆಗಳನ್ನು ತಡೆಗಟ್ಟಲು ಪ್ರಯತ್ನಗಳು ಸೇರಿವೆ.