ಪೆನಾಲ್ಟಿ ಶೂಟ್ ಔಟ್‌ನಲ್ಲಿ ಸೋತು ಹೊರಬಿದ್ದ ಸ್ಪೇನ್

0
22

ಪೆನಾಲ್ಟಿ ಶೂಟ್‌ ಔಟ್‌ ಒತ್ತಡ ನಿಭಾಯಿಸುವಲ್ಲಿ ವಿಫಲಗೊಂಡ ಮಾಜಿ ಚಾಂಪಿಯನ್‌ ಸ್ಪೇನ್‌ ತಂಡ, ರೋಚಕ ಪ್ರಿ ಕ್ವಾರ್ಟರ್‌ ಫೈನಲ್‌ ಪಂದ್ಯದಲ್ಲಿ ಆತಿಥೇಯ ರಷ್ಯಾ ಎದುರು ಆಘಾತ ಅನುಭವಿಸಿ ಸ್ಪರ್ಧೆಯಿಂದ ಹೊರ ಬಿದ್ದಿದೆ.

ಮಾಸ್ಕೊ: ಪೆನಾಲ್ಟಿ ಶೂಟ್‌ ಔಟ್‌ ಒತ್ತಡ ನಿಭಾಯಿಸುವಲ್ಲಿ ವಿಫಲಗೊಂಡ ಮಾಜಿ ಚಾಂಪಿಯನ್‌ ಸ್ಪೇನ್‌ ತಂಡ, ರೋಚಕ ಪ್ರಿ ಕ್ವಾರ್ಟರ್‌ ಫೈನಲ್‌ ಪಂದ್ಯದಲ್ಲಿ ಆತಿಥೇಯ ರಷ್ಯಾ ಎದುರು ಆಘಾತ ಅನುಭವಿಸಿ ಸ್ಪರ್ಧೆಯಿಂದ ಹೊರ ಬಿದ್ದಿದೆ. 

ಇಲ್ಲಿನ ಇತಿಹಾಸ ಪ್ರಸಿದ್ಧ ಲುಜ್ನಿಕಿ ಕ್ರೀಡಾಂಗಣದಲ್ಲಿ ಜುಲೈ 1 ರ ಭಾನುವಾರ ನಡೆದ ಹೈ ವೋಲ್ಟೇಜ್‌ ಪಂದ್ಯದಲ್ಲಿ ಮಿಂಚಿದ ರಷ್ಯಾ, ಪೆನಾಲ್ಟಿ ಶೂಟ್‌ಔಟ್‌ನಲ್ಲಿ 4-3 ಗೋಲ್‌ಗಳಿಂದ ಸ್ಪೇನ್‌ಗೆ ಸೋಲುಣಿಸಿತು. ಇದಕ್ಕೂ ಮುನ್ನ ಪಂದ್ಯದ 120 ನಿಮಿಷಗಳ ಆಟದಲ್ಲಿ ಇತ್ತಂಡಗಳು 1-1 ಗೋಲ್‌ಗಳ ಸಮಬಲ ಸಾಧಿಸಿದ್ದವು. 

ಪೆನಾಲ್ಟಿ ಶೂಟ್‌ಔಟ್‌ನಲ್ಲಿ ರಷ್ಯಾ ಪರ ಫ್ಯೊಡೊರ್‌ ಸ್ಮೊಲೊವ್‌, ಸೆರ್ಗಿ ಇಗ್ನಾಷೆವಿಚ್‌, ಅಲೆಕ್ಸಾಂಡರ್‌ ಗೊಲೊವಿನ್‌ ಮತ್ತು ಡೆನಿಸ್‌ ಚೆರಿಷೇವ್‌ ಗೋಲ್‌ ದಾಖಲಿಸಿದರೆ, ಸ್ಪೇನ್‌ ಪರ ಆ್ಯಂಡ್ರೆಸ್‌ ಇನಿಯೆಸ್ತಾ, ಗೆರಾರ್ಡ್‌ ಪೀಕೆ, ಸೆರ್ಗಿಯೊ ರಾಮೊಸ್‌ ಯಶಸ್ಸು ಕಂಡರೂ ಜಾರ್ಜ್‌ ಕೊಕೆ ಮತ್ತು ಇಯಾಗೊ ಆಸ್ಪಾಸ್‌ ವೈಫಲ್ಯ ಕಂಡರು.