ಪೆಟ್ರೋಲ್‌, ಡೀಸೆಲ್ ಬೆಲೆ 2.5 ರೂಪಾಯಿ ಕಡಿತ; ಎನ್‌ಡಿಎ ಆಡಳಿತ ರಾಜ್ಯಗಳಿಂದಲೂ ಬೆಲೆ ಇಳಿಕೆ

0
1028

ಗಗನಮುಖಿಯಾಗಿರುವ ತೈಲ ಬೆಲೆಗಳು ಕೇಂದ್ರ ಸರಕಾರವನ್ನು ಇಕ್ಕಟ್ಟಿಗೆ ಸಿಲುಕಿಸಿದೆ. ಇದಕ್ಕೆ ಪರಿಹಾರ ಹುಡುಕಲು ಮುಂದಾಗಿರುವ ಕೇಂದ್ರ ಸರಕಾರ ಪೆಟ್ರೋಲ್‌ ಮತ್ತು ಡೀಸೆಲ್‌ ಬೆಲೆಯನ್ನು 2.50 ರೂಪಾಯಿ ಕಡಿತ ಮಾಡಿದೆ.

ಹೊಸದಿಲ್ಲಿ: ಗಗನಮುಖಿಯಾಗಿರುವ ತೈಲ ಬೆಲೆಗಳು ಕೇಂದ್ರ ಸರಕಾರವನ್ನು ಇಕ್ಕಟ್ಟಿಗೆ ಸಿಲುಕಿಸಿದೆ. ಇದಕ್ಕೆ ಪರಿಹಾರ ಹುಡುಕಲು ಮುಂದಾಗಿರುವ ಕೇಂದ್ರ ಸರಕಾರ ಪೆಟ್ರೋಲ್‌ ಮತ್ತು ಡೀಸೆಲ್‌ ಬೆಲೆಯನ್ನು 2.50 ರೂಪಾಯಿ ಕಡಿತ ಮಾಡಿದೆ. 

ಕೇಂದ್ರ ಸರಕಾರದ ನಿರ್ಧಾರದ ಬೆನ್ನಲ್ಲೇ ಮಹಾರಾಷ್ಟ್ರ, ಛತ್ತೀಸ್‌ಗಢ, ಜಾರ್ಖಂಡ್‌, ಗುಜರಾತ್, ಉತ್ತರ ಪ್ರದೇಶ, ಮಧ್ಯಪ್ರದೇಶ ಸೇರಿದಂತೆ ಎನ್‌ಡಿಎ ಆಡಳಿತದ ರಾಜ್ಯಗಳು ಬೆಲೆ ಇಳಿಕೆ ಮಾಡಲು ಸಮ್ಮತಿಸಿವೆ. 

ಕೇಂದ್ರದ ಅಬಕಾರಿ ಸುಂಕವನ್ನು 1.50 ರೂಪಾಯಿ ಕಡಿಮೆ ಮಾಡಲಾಗಿದ್ದು, ತೈಲ ಕಂಪನಿಗಳು 1 ರೂಪಾಯಿ ಕಡಿಮೆ ಮಾಡಲು ನಿರ್ಧರಿಸಲಾಗಿದೆ ಎಂದು ಕೇಂದ್ರ ಹಣಕಾಸು ಸಚಿವ  ಅರುಣ್‌ ಜೇಟ್ಲಿ  ತಿಳಿಸಿದರು. 

ತಕ್ಞಣದಿಂದಲೇ ಪರಿಷ್ಕೃತ ದರಗಳು ಜಾರಿಗೆ ಬರಲಿವೆ. ಬೆಲೆ ಇಳಿಕೆಯಿಂದ ಕೇಂದ್ರ ಸರಕಾರಕ್ಕೆ 25 ಸಾವಿರ ಕೋಟಿ ರೂಪಾಯಿ ಹೊರೆ ಬೀಳಲಿದೆ ಎಂದು ಅವರು ಹೇಳಿದರು. 

ಕೇಂದ್ರ ಸರಕಾರ ಈಗ 2.50 ರೂಪಾಯಿ ಕಡಿತಗೊಳಿಸಿದ್ದು, ರಾಜ್ಯಗಳು ಕೂಡ 2.50 ರೂಪಾಯಿ ಕಡಿತ ಮಾಡುವಂತೆ ಮನವಿ ಮಾಡಲಾಗುವುದು. ಈ ಸಂಬಂಧ ಎಲ್ಲ ರಾಜ್ಯ ಸರಕಾರಗಳಿಗೂ ಪತ್ರ ಬರೆಯಲಾಗುವುದು ಎಂದು ಸಚಿವರು ಸ್ಪಷ್ಟಪಡಿಸಿದರು. 

ಹೊಸದಿಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅರುಣ್‌ ಜೇಟ್ಲಿ, ಅಮೆರಿಕದಲ್ಲಿ ಬಡ್ಡಿ ದರ ಏರಿಕೆ ಮಾಡಿದ್ದರಿಂದ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲ ಬೆಲೆ ಏರಿಕೆಯಾಗಿದೆ. ಇದರಿಂದ ಭಾರಿ ಪರಿಣಾಮ ಬೀರಿದೆ ಎಂದು ಜೇಟ್ಲಿ ವಿವರಿಸಿದರು.