“ಪುರುಷರ ಹಾಕಿ ವಿಶ್ವಕಪ್‌”ನ ಅಧಿಕೃತ ಗೀತೆಗೆ ಗುಲ್ಜಾರ್‌ ಅವರ ಸಾಹಿತ್ಯಕ್ಕೆ ರೆಹಮಾನ್‌ ಸಂಗೀತ

0
453

ಒಡಿಶಾದಲ್ಲಿ ನಡೆಯುವ ಪುರುಷರ ಹಾಕಿ ವಿಶ್ವಕಪ್‌ನ ಅಧಿಕೃತ ಗೀತೆಗಾಗಿ ಆಸ್ಕರ್‌ ಪ್ರಶಸ್ತಿ ವಿಜೇತ ಸಂಗೀತ ನಿರ್ದೇಶಕ ಎ. ಆರ್‌. ರೆಹಮಾನ್‌ ಹಾಗೂ ಗೀತ ರಚನೆಕಾರ ಗುಲ್ಜಾರ್‌ ಅವರು ಕೈಜೋಡಿಸಿದ್ದಾರೆ.

ಮುಂಬೈ (ಪಿಟಿಐ): ಒಡಿಶಾದಲ್ಲಿ ನಡೆಯುವ ಪುರುಷರ ಹಾಕಿ ವಿಶ್ವಕಪ್‌ನ ಅಧಿಕೃತ ಗೀತೆಗಾಗಿ ಆಸ್ಕರ್‌ ಪ್ರಶಸ್ತಿ ವಿಜೇತ ಸಂಗೀತ ನಿರ್ದೇಶಕ ಎ. ಆರ್‌. ರೆಹಮಾನ್‌ ಹಾಗೂ ಗೀತ ರಚನೆಕಾರ ಗುಲ್ಜಾರ್‌ ಅವರು ಕೈಜೋಡಿಸಿದ್ದಾರೆ. 

‘ಜೈ ಹಿಂದ್‌ ಹಿಂದ್‌, ಜೈ ಇಂಡಿಯಾ’ ಎಂಬ ಈ ಗೀತೆಯನ್ನು ಗುಲ್ಜಾರ್‌ ಅವರು ರಚಿಸಿದ್ದಾರೆ. ರೆಹಮಾನ್‌ ಅವರು ಸಂಗೀತ ಸಂಯೋಜಿಸಿದ್ದಾರೆ. ಈ 14ನೇ ವಿಶ್ವಕಪ್‌ ಟೂರ್ನಿಯು ನವೆಂಬರ್‌ 28ರಿಂದ ಡಿಸೆಂಬರ್‌ 15ರವರೆಗೆ ಭುವನೇಶ್ವರದಲ್ಲಿ ಜರುಗಲಿದೆ. ಒಟ್ಟು 16 ರಾಷ್ಟ್ರಗಳು ಇದರಲ್ಲಿ ಸ್ಪರ್ಧಿಸಲಿವೆ. 

‘ಹಾಕಿ ನಮ್ಮ ರಾಷ್ಟ್ರ ಕ್ರೀಡೆ. ಇದರ ವಿಶ್ವಕಪ್‌ ಅನ್ನು ನಾವು ಆಯೋಜಿಸುತ್ತಿರುವುದು ಸಂತಸದ ಸಂಗತಿ. ಇಡೀ ದೇಶವೇ ಇದನ್ನು ಎದುರು ನೋಡುತ್ತಿದೆ’ ಎಂದು ಎ. ಆರ್‌. ರೆಹಮಾನ್ ಹೇಳಿದ್ದಾರೆ. 

 ‘ನಮ್ಮೆಲ್ಲರ ಕಾತರ, ಆಕಾಂಕ್ಷೆಗಳಿಗೆ ಸೂಕ್ತವಾಗುವ ರೀತಿಯಲ್ಲಿ ಈ ಗೀತೆಯನ್ನು ಸಿದ್ಧಪಡಿಸಲಾಗಿದೆ. ರಾಷ್ಟ್ರ
ದಲ್ಲಿ ಹಾಕಿ ಕ್ರೀಡೆಯ ಮಹತ್ವವನ್ನು ಇದು ತಿಳಿಸಲಿದೆ’ ಎಂದು ಅವರು ತಿಳಿಸಿದ್ದಾರೆ. 

ಭಾರತ ಮೂರನೇ ಬಾರಿಗೆ ಹಾಕಿ ವಿಶ್ವಕಪ್‌ ಟೂರ್ನಿಯನ್ನು ಆಯೋಜಿಸುತ್ತಿದೆ. 1982ರಲ್ಲಿ ಮುಂಬೈ ಹಾಗೂ 2010ರಲ್ಲಿ ನವದೆಹಲಿಯಲ್ಲಿ ಈ ಟೂರ್ನಿ ನಡೆದಿತ್ತು.