ಪುದುಚೇರಿ ಮಾಜಿ ಸಿ.ಎಂ “ಆರ್‌.ವಿ. ಜಾನಕಿರಾಮನ್‌” ಇನ್ನಿಲ್ಲ

0
31

ಡಿಎಂಕೆ ಹಿರಿಯ ನಾಯಕ, ಮಾಜಿ ಮುಖ್ಯಮಂತ್ರಿ ಆರ್‌.ವಿ. ಜಾನಕಿರಾಮನ್‌ (79) ಜೂನ್ 10 ರ ಸೋಮವಾರ ನಿಧನರಾದರು.

ಪುದುಚೇರಿ (ಪಿಟಿಐ): ಡಿಎಂಕೆ ಹಿರಿಯ ನಾಯಕ, ಮಾಜಿ ಮುಖ್ಯಮಂತ್ರಿ ಆರ್‌.ವಿ. ಜಾನಕಿರಾಮನ್‌ (79) ಜೂನ್ 10 ರ ಸೋಮವಾರ ನಿಧನರಾದರು.

ವಯೋಸಹಜಕಾಯಿಲೆಯಿಂದ  ಬಳಲುತ್ತಿದ್ದ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅದರೆ ಚಿಕಿತ್ಸೆಗೆ ಸ್ಪಂದಿಸದೆ ಅವರು ಮೃತಪಟ್ಟಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಮೃತರ ಅಂತ್ಯಕ್ರಿಯೆ ಮಂಗಳವಾರ ಅವರ ಸ್ವಗ್ರಾಮ ಅಲತ್ತೂರು ಗ್ರಾಮದಲ್ಲಿ ನಡೆಯಲಿದೆ.  ಟ್ಯಾಕ್ಸಿ ಚಾಲಕರಾಗಿ ವೃತ್ತಿ ಬದುಕು ಆರಂಭಿಸಿದ ಅವರು, 1985ರಲ್ಲಿ ನೆಲ್ಲಿಥೋಪೆ ವಿಧಾನ ಸಭಾ ಕ್ಷೇತ್ರದಿಂದ ಗೆಲುವು ಸಾಧಿಸುವ ಮೂಲಕ ರಾಜಕೀಯ ಪ್ರವೇಶಿಸಿದರು. ಇದೇ ಕ್ಷೇತ್ರದಿಂದ ಸತತ ಐದು ಬಾರಿ ಗೆಲುವು ಸಾಧಿಸಿದ ಹೆಗ್ಗಳಿಕೆ ಇವರದು. 

1996ರಿಂದ 2000ರ ಅವಧಿಯಲ್ಲಿ ಡಿಎಂಕೆ ಮತ್ತು ಟಿಎಂಸಿ ಸಮ್ಮಿಶ್ರ ಸರ್ಕಾರದ ಮುಖ್ಯಮಂತ್ರಿಯಾಗಿದ್ದರು. 

ಪ್ರಸ್ತುತ ಮುಖ್ಯಮಂತ್ರಿ ವಿ.ನಾರಾಯಣಸ್ವಾಮಿ ಸೇರಿದಂತೆ ಗಣ್ಯರು ಅಂತಿಮ ನಮನ ಸಲ್ಲಿಸಿದರು.