ಪಿ.ಸಿ. ಘೋಷ್‌ ಮೊದಲ ಲೋಕಪಾಲ

0
581

ಸುಪ್ರೀಂ ಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಪಿನಾಕಿ ಚಂದ್ರ ಘೋಷ್ ಅವರನ್ನು ದೇಶದ ಮೊದಲ ಲೋಕಪಾಲರನ್ನಾಗಿ ನೇಮಕ ಮಾಡಿ ಕೇಂದ್ರ ಸರ್ಕಾರವು ಮಂಗಳವಾರ ಆದೇಶ ಹೊರಡಿಸಿದೆ.

ನವದೆಹಲಿ (ಪಿಟಿಐ): ಸುಪ್ರೀಂ ಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಪಿನಾಕಿ ಚಂದ್ರ ಘೋಷ್ ಅವರನ್ನು ದೇಶದ ಮೊದಲ ಲೋಕಪಾಲರನ್ನಾಗಿ ನೇಮಕ ಮಾಡಿ ಕೇಂದ್ರ ಸರ್ಕಾರವು 2019 ಮಾರ್ಚ್ 19 ರ ಮಂಗಳವಾರ ಆದೇಶ ಹೊರಡಿಸಿದೆ.

ಅಧ್ಯಕ್ಷರು ಹಾಗೂ ಸದಸ್ಯರು ಗರಿಷ್ಠ 5 ವರ್ಷ ಅಥವಾ 70 ವರ್ಷ ಆಗುವವರೆಗೆ ಸಮಿತಿಯಲ್ಲಿರಬಹುದು. ಆ ಪ್ರಕಾರ, ಲೋಕಪಾಲ ನ್ಯಾ.ಪಿ.ಸಿ.ಘೋಷ್ (66) ಅವರಿಗೆ ನಾಲ್ಕು ವರ್ಷಗಳ ಅಧಿಕಾರ ಅವಧಿ ಇದೆ.

ಲೋಕಪಾಲ ಸಂಸ್ಥೆಗೆ ನ್ಯಾಯಾಂಗ ಕ್ಷೇತ್ರದ ಸದಸ್ಯರು ಮತ್ತು ನ್ಯಾಯಾಂಗೇತರ ಕ್ಷೇತ್ರದ ಸದಸ್ಯರನ್ನೂ ನೇಮಕ ಮಾಡಲಾಗಿದೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಆಯ್ಕೆ ಸಮಿತಿಯ ಶಿಫಾರಸಿನ ಮೇರೆಗೆ ಈ ನೇಮಕಾತಿ ನಡೆದಿದೆ.

ನ್ಯಾಯಾಂಗ ಕ್ಷೇತ್ರದ ಸದಸ್ಯರು: ನ್ಯಾಯಮೂರ್ತಿಗಳಾದ ದಿಲೀಪ್ ಬಿ ಬೋಸ್ಲೆ, ಪ್ರದೀಪ್ ಕುಮಾರ್ ಮೊಹಾಂತಿ, ಅಭಿಲಾಷ ಕುಮಾರಿ, ಅಜಯ್ ಕುಮಾರ್ ತ್ರಿಪಾಠಿ. 

ನ್ಯಾಯಾಂಗೇತರ ಕ್ಷೇತ್ರದ ಸದಸ್ಯರು: ಸಶಸ್ತ್ರ ಸೀಮಾ ಬಲದ ಮಾಜಿ ಮುಖ್ಯಸ್ಥೆ ಅರ್ಚನಾ ರಾಮಸುಂದರಂ, ಮಹಾರಾಷ್ಟ್ರದ ಮಾಜಿ ಮುಖ್ಯ ಕಾರ್ಯದರ್ಶಿ ದಿನೇಶ್ ಕುಮಾರ್ ಜೈನ್, ಮಹೇಂದರ್ ಸಿಂಗ್ ಮತ್ತು ಡಾ.ಇಂದ್ರಜಿತ್ ಪ್ರಸಾದ್ ಗೌತಮ್.