ಪಿಯು ವಿದ್ಯಾರ್ಥಿಗಳಿಗೆ ಮೊಬೈಲ್‌, ಲ್ಯಾಪ್‌ಟಾಪ್‌ ಬ್ಯಾನ್

0
391

ಸರ್ಕಾರಿ, ಅನುದಾನಿತ, ಖಾಸಗಿ ಪಿಯು ಕಾಲೇಜುಗಳಲ್ಲಿ ಇನ್ಮುಂದೆ ವಿದ್ಯಾರ್ಥಿಗಳು ಮೊಬೈಲ್‌ ಮತ್ತು ಲ್ಯಾಪ್‌ಟಾಪ್‌ ಬಳಸುವಂತಿಲ್ಲ ಎಂದು ಪಿಯು ಬೋರ್ಡ್‌ ಆದೇಶ ಹೊರಡಿಸಿದೆ.

ಬೆಂಗಳೂರು: ಸರ್ಕಾರಿ, ಅನುದಾನಿತ, ಖಾಸಗಿ ಪಿಯು ಕಾಲೇಜುಗಳಲ್ಲಿ ಇನ್ಮುಂದೆ ವಿದ್ಯಾರ್ಥಿಗಳು ಮೊಬೈಲ್‌ ಮತ್ತು ಲ್ಯಾಪ್‌ಟಾಪ್‌ ಬಳಸುವಂತಿಲ್ಲ ಎಂದು ಪಿಯು ಬೋರ್ಡ್‌ ಆದೇಶ ಹೊರಡಿಸಿದೆ.

ಸಿಎಂ ಸೂಚನೆ ಮೇರೆಗೆ ಪ್ರಥಮ ಪಿಯುಸಿ ಹಾಗೂ ದ್ವೀತಿಯ ಪಿಯುಸಿ ವಿದ್ಯಾರ್ಥಿಗಳಿಗೆ ಮೊಬೈಲ್ ಮತ್ತು ಲ್ಯಾಪ್‌ಟಾಪ್‌ ಬ್ಯಾನ್ ಆದೇಶ ಜಾರಿಗೆ ತರುವಂತೆ ಎಲ್ಲ ಉಪ ನಿರ್ದೇಶಕರಿಗೆ ಪಿಯು ಬೋರ್ಡ್‌ ಸುತ್ತೋಲೆ ಹೊರಡಿಸಿದೆ.

ಪದವಿಪೂರ್ವ ಶಿಕ್ಷಣ ಇಲಾಖೆ ವ್ಯಾಪ್ತಿಯ ಎಲ್ಲ ಸರ್ಕಾರಿ, ಅನುದಾನಿತ ಹಾಗೂ ಅನುದಾನರಹಿತ ಪದವಿ ಪೂರ್ವ ಕಾಲೇಜುಗಳ ಪ್ರಥಮ ಹಾಗೂ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳು ಕಾಲೇಜಿನ ಸಮಯದಲ್ಲಿ ಮೊಬೈಲ್‌, ಲ್ಯಾಪ್‌ಟಾಪ್ ಇಟ್ಟುಕೊಳ್ಳುವುದನ್ನು ಶೈಕ್ಷಣಿಕ ಹಿತದೃಷ್ಟಿಯಿಂದ ಸಂಪೂರ್ಣವಾಗಿ ನಿಷೇಧಿಸುವ ಆದೇಶವನ್ನು ಹೊರಡಿಸಿದೆ. ಹಾಗಾಗಿ ಎಲ್ಲ ಪದವಿ ಪೂರ್ವ ಕಾಲೇಜುಗಳಲ್ಲಿ ಕಡ್ಡಾಯವಾಗಿ ಅಳವಡಿಸಿಕೊಳ್ಳುವಂತೆ ಹೇಳಲಾಗಿದೆ.

ಆದೇಶದ ವಿರುದ್ಧ ಅಸಮಾಧಾನ

ವಾಣಿಜ್ಯ ಶಾಸ್ತ್ರ, ವಿಜ್ಞಾನ ವಿಭಾಗದ ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್ ಅವಶ್ಯಕವಾಗಿದೆ. ಆದರೆ, ಅವರಿಗೂ ಲ್ಯಾಪ್‌ಟಾಪ್ ನಿಷೇಧ ಮಾಡಲಾಗಿದೆ. ಮೊಬೈಲ್ ಬ್ಯಾನ್ ಓಕೆ, ಆದರೆ, ಲ್ಯಾಪ್‌ಟಾಪ್ ಬ್ಯಾನ್ ಯಾಕೆ ಎಂದು ಪಿಯು ಬೋರ್ಡ್​ ಹೊಸ ರೂಲ್ಸ್​ ವಿರುದ್ಧ ವಿದ್ಯಾರ್ಥಿಗಳ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. (ದಿಗ್ವಿಜಯ ನ್ಯೂಸ್)