ಪಿಡಿಒಗಳಿಗೆ ಮುಂಬಡ್ತಿ : ರಾಜ್ಯ ಸರ್ಕಾರದ ತೀರ್ಮಾನ

0
1208

ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗೆ(ಪಿಡಿಒ) ಗ್ರಾಮೀಣಾಭಿವೃದ್ಧಿ ಮತ್ತು ಪಂಚಾ ಯತ್​ರಾಜ್ ಇಲಾಖೆ ಸಹಾಯಕ ನಿರ್ದೇಶಕರ ಹುದ್ದೆಗೆ ಬಡ್ತಿ ನೀಡಲು ಸರ್ಕಾರ ಮುಂದಾಗಿದೆ. ಈ ಸಂಬಂಧ ಎಲ್ಲ ಜಿಲ್ಲಾ ಪಂಚಾಯಿತಿ ಸಿಇಒಗಳಿಗೆ ಗ್ರಾಮೀಣಾಭಿವೃದ್ಧಿ ಇಲಾಖೆ ಪತ್ರ ಬರೆದಿದೆ.

ಬೆಂಗಳೂರು: ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗೆ(ಪಿಡಿಒ) ಗ್ರಾಮೀಣಾಭಿವೃದ್ಧಿ ಮತ್ತು ಪಂಚಾ ಯತ್​ರಾಜ್ ಇಲಾಖೆ ಸಹಾಯಕ ನಿರ್ದೇಶಕರ ಹುದ್ದೆಗೆ ಬಡ್ತಿ ನೀಡಲು ಸರ್ಕಾರ ಮುಂದಾಗಿದೆ. ಈ ಸಂಬಂಧ ಎಲ್ಲ ಜಿಲ್ಲ್ಲಾ ಪಂಚಾಯಿತಿ ಸಿಇಒಗಳಿಗೆ ಗ್ರಾಮೀಣಾಭಿವೃದ್ಧಿ ಇಲಾಖೆ ಪತ್ರ ಬರೆದಿದೆ. ಪಿಡಿಒ ವೃಂದದ ಹಳೆಯ ಮತ್ತು ಹೊಸ ಜ್ಯೇಷ್ಠತಾ ಕ್ರ.ಸಂ. 420/1223 ರಿಂದ 500/1329ರವರೆಗಿನ ಅಧಿಕಾರಿಗಳಿಗೆ ಮುಂಬಡ್ತಿ ಅವಕಾಶವಿದೆ. ಈ ಕ್ರಮ ಸಂಖ್ಯೆಯಲ್ಲಿ ತಮ್ಮ ಕಚೇರಿ ವ್ಯಾಪ್ತಿಯಲ್ಲಿ ಕಾರ್ಯ ನಿರ್ವ ಹಿಸುತ್ತಿರುವ ಅಧಿಕಾರಿಗಳ ವಿವರ ಸಹಿತ ಪ್ರಸ್ತಾವನೆ ಸಲ್ಲಿಸಬೇಕು. ಪ್ರತಿ ಅಧಿ ಕಾರಿಯ 2017-18ನೇ ಸಾಲಿನ ಮೂಲ ಕಾರ್ಯನಿರ್ವಹಣಾ ವರದಿ ಜತೆ ಸದರಿ ನೌಕರರ ವಿರುದ್ಧ ನಡೆಯುತ್ತಿರುವ, ನಡೆಸಲು ಉದ್ದೇಶಿಸಲಾಗಿರುವ ಅಥವಾ ಮುಕ್ತಾಯ ಗೊಂಡಿರುವ ಇಲಾಖಾ ವಿಚಾರಣೆ ಮಾಹಿತಿ ಹಾಗೂ ಆದೇಶದ ಪ್ರತಿ ನೀಡಬೇಕು. ಈ ನೌಕರರ ವಿರುದ್ಧ ಲೋಕಾಯುಕ್ತ ಪ್ರಕರಣ ಬಾಕಿಯಿದ್ದರೆ ವಿವರ ನೀಡಬೇಕೆಂದು ಸಿಇಒಗಳಿಗೆ ತಿಳಿಸಲಾಗಿದೆ.