ಪಿಎಫ್‌: ಮೂಲ ವೇತನದಲ್ಲಿ ವಿಶೇಷ ಭತ್ಯೆ ಸೇರ್ಪಡೆ

0
494

ಉದ್ಯೋಗಿಗಳ ವೇತನದಲ್ಲಿ ಭವಿಷ್ಯ ನಿಧಿಯ ಕೊಡುಗೆ ಕಡಿತಗೊಳಿಸುವಾಗ ವಿಶೇಷ ಭತ್ಯೆಗಳನ್ನು ಮೂಲ ವೇತನದಲ್ಲಿ ಸೇರ್ಪಡೆ ಮಾಡಬೇಕು ಎಂದು ಸುಪ್ರೀಂಕೋರ್ಟ್‌ ತಿಳಿಸಿದೆ.

ನವದೆಹಲಿ: ಉದ್ಯೋಗಿಗಳ ವೇತನದಲ್ಲಿ ಭವಿಷ್ಯ ನಿಧಿಯ ಕೊಡುಗೆ ಕಡಿತಗೊಳಿಸುವಾಗ ವಿಶೇಷ ಭತ್ಯೆಗಳನ್ನು ಮೂಲ ವೇತನದಲ್ಲಿ ಸೇರ್ಪಡೆ ಮಾಡಬೇಕು ಎಂದು ಸುಪ್ರೀಂಕೋರ್ಟ್‌ ತಿಳಿಸಿದೆ.

ಭವಿಷ್ಯ ನಿಧಿ ಕಡಿತದಲ್ಲಿ ಮೂಲ ವೇತನದ ಜತೆ ವಿಶೇಷ ಭತ್ಯೆಗಳನ್ನು ಪರಿಗಣಿಸಬೇಕು ಎಂದು ಭವಿಷ್ಯ ನಿಧಿ ಕಮಿಷನರ್‌ ಕೈಗೊಂಡಿದ್ದ ನಿರ್ಧಾರವನ್ನು ಅನೇಕ ಕಂಪನಿಗಳು ಸುಪ್ರೀಂಕೋರ್ಟ್‌ನಲ್ಲಿ ಪ್ರಶ್ನಿಸಿದ್ದವು.

ನ್ಯಾಯಮೂರ್ತಿ ಅರುಣ್‌ ಮಿಶ್ರಾ ಮತ್ತು ನವೀನ್‌ ಸಿನ್ಹಾ ಅವರಿದ್ದ ಪೀಠವು ಕಂಪನಿಗಳ ಈ ನಿಲುವನ್ನು ತಳ್ಳಿ ಹಾಕಿದೆ.
ಎಲ್ಲ ಉದ್ಯೋಗಿಗಳಿಗೆ ಇದರ ಪ್ರಯೋಜನ ದೊರೆಯುವುದಿಲ್ಲ. ಮೂಲ ವೇತನ ಮತ್ತು ಭತ್ಯೆಗಳ ಒಟ್ಟಾರೆ ಮೊತ್ತ  15 ಸಾವಿರ ಇದ್ದವರಿಗೆ ಮಾತ್ರ ಇದು ಅನ್ವಯವಾಗಲಿದೆ.