ಪಿಎಫ್‌ ಖಾತೆಗೆ ಶೇ 8.55 ಬಡ್ಡಿ

0
34

‘ಉದ್ಯೋಗಿಗಳ ಭವಿಷ್ಯನಿಧಿ ಸಂಘಟನೆಯ (ಇಪಿಎಫ್‌ಒ) ಚಂದಾದಾರರ ಖಾತೆಗಳಿಗೆ 2017–18ನೆ ಹಣಕಾಸು ವರ್ಷಕ್ಕೆ ಶೇ 8.55ರಷ್ಟು ಬಡ್ಡಿ ಪಾವತಿಸಲು ಕಾರ್ಮಿಕ ಸಚಿವಾಲಯ ಸೂಚಿಸಿದೆ.

ನವದೆಹಲಿ: ‘ಉದ್ಯೋಗಿಗಳ ಭವಿಷ್ಯನಿಧಿ ಸಂಘಟನೆಯ (ಇಪಿಎಫ್‌ಒ) ಚಂದಾದಾರರ ಖಾತೆಗಳಿಗೆ 2017–18 ನೇ ಹಣಕಾಸು ವರ್ಷಕ್ಕೆ ಶೇ 8.55ರಷ್ಟು ಬಡ್ಡಿ  ಪಾವತಿಸಲು ಕಾರ್ಮಿಕ ಸಚಿವಾಲಯ ಸೂಚಿಸಿದೆ.

5 ಕೋಟಿ ಚಂದಾದಾರರ ಖಾತೆಗಳಿಗೆ ಈ ಬಡ್ಡಿ ಪಾವತಿಸಲು ‘ಇಪಿಎಫ್‌ಒ’ದ 120ಕ್ಕೂ ಹೆಚ್ಚು ಕಚೇರಿಗಳಿಗೆ ಆದೇಶಿಸಲಾಗಿದೆ. ಈ ಬಡ್ಡಿ ದರಕ್ಕೆ ಹಣಕಾಸು ಸಚಿವಾಲಯವು ಈಗಾಗಲೇ ತನ್ನ ಅನುಮೋದನೆ ನೀಡಿದ್ದರೂ, ಚುನಾವಣಾ ನೀತಿ ಸಂಹಿತೆ ಜಾರಿ ಕಾರಣಕ್ಕೆ ಅದನ್ನು ಕಾರ್ಯಗತಗೊಳಿಸಿರಲಿಲ್ಲ. ಈ ಬಡ್ಡಿ ದರವು ಐದು ವರ್ಷಗಳಲ್ಲಿನ ಕನಿಷ್ಠ ಮಟ್ಟವಾಗಿದೆ.