ಪಿಎನ್‌ಬಿ ವಂಚನೆ ಪ್ರಕರಣದ ಆರೋಪಿ “ಮೆಹುಲ್‌ ಚೋಕ್ಸಿ” ಬಂಧಿಸುವಂತೆ ಆಂಟಿಗುವಾಗೆ ಭಾರತದ ಮನವಿ

0
25

ಪಂಜಾಬ್‌ ನ್ಯಾಷನಲ್‌ ಬ್ಯಾಂಕ್‌(ಪಿಎನ್‌ಬಿ) ವಂಚನೆ ಪ್ರಕರಣದ ಆರೋಪಿ ಮೆಹುಲ್‌ ಜೋಕ್ಸಿಯನ್ನು ವಶಕ್ಕೆ ಪಡೆಯುವಂತೆ ಆಂಟಿಗುವಾ ಸರಕಾರವನ್ನು ಭಾರತ ಕೋರಿದೆ.

ಹೊಸದಿಲ್ಲಿ: ಪಂಜಾಬ್‌ ನ್ಯಾಷನಲ್‌ ಬ್ಯಾಂಕ್‌(ಪಿಎನ್‌ಬಿ) ವಂಚನೆ ಪ್ರಕರಣದ ಆರೋಪಿ ಮೆಹುಲ್‌ ಜೋಕ್ಸಿಯನ್ನು ವಶಕ್ಕೆ ಪಡೆಯುವಂತೆ ಆಂಟಿಗುವಾ ಸರಕಾರವನ್ನು ಭಾರತ ಕೋರಿದೆ. 

ಪಿಎನ್‌ಬಿ ವಂಚನೆ ಬಳಿಕ ಭಾರತದಿಂದ ಪಲಾಯನವಾಗಿದ್ದ ಜೋಕ್ಸಿ ಈಗ ಆಂಟಿಗುವಾದಲ್ಲಿ ಇದ್ದಾರೆ ಎನ್ನಲಾಗಿದೆ. ಅವರನ್ನು ವಶಕ್ಕೆ ಪಡೆಯುವಂತೆ ಮತ್ತು ಚಲನವಲನಗಳ ಮೇಲೆ ನಿಗಾ ಇಡುವಂತೆ ಕೇಂದ್ರ ಸರಕಾರವು ಆಂಟಿಗುವಾ ಮತ್ತು ಬರ್ಬುಡಾ ಸರಕಾರವನ್ನು ಕೋರಿದೆ. 

”ಚೋಕ್ಸಿಯನ್ನು ಭಾರತಕ್ಕೆ ವಾಪಸ್‌ ಕರೆದೊಯ್ಯುವ ನಿಟ್ಟಿನಲ್ಲಿ ಆಂಟಿಗುವಾದಲ್ಲಿನ ಭಾರತದ ಹೈಕಮಿಷನರ್‌ ಅವರು ಅಲ್ಲಿನ ಸರಕಾರದ ಜತೆ ಮಾತುಕತೆ ನಡೆಸಿದ್ದಾರೆ. ಈ ಸಂಬಂಧಿ ವಿವರಗಳು ಸದ್ಯದಲ್ಲೇ ಭಾರತಕ್ಕೆ ರವಾನೆಯಾಗಲಿವೆ,” ಎಂದು ಮೂಲಗಳು ಹೇಳಿವೆ. 

”ಜೋಕ್ಸಿ ವಿರುದ್ಧ ಗಂಭೀರ ಆರೋಪಗಳಿರುವುದು ನಮ್ಮ ಗಮನಕ್ಕೆ ಬಂದಿಲ್ಲ. ಆ ಬಗ್ಗೆ ವಿವರ ನೀಡಿದರೆ, ಜೋಕ್ಸಿ ಪೌರತ್ವದ ಅರ್ಜಿಯನ್ನು ರದ್ದು ಮಾಡುತ್ತೇವೆ,” ಎಂದು ಇತ್ತೀಚೆಗಷ್ಟೇ ಆಂಟಿಗುವಾ ಸರಕಾರ ಹೇಳಿತ್ತು.