ಪಿಎಚ್‌.ಡಿ ಪ್ರವೇಶ: ಪರೀಕ್ಷೆ ಮತ್ತು ಸಂದರ್ಶನ ಕಡ್ಡಾಯ : ಯುಜಿಸಿ

0
90

ಎಂ.ಫಿಲ್‌ ಮತ್ತು ಪಿಎಚ್.ಡಿ ಮಾಡಲು ಬಯಸುವವರಿಗೆ ಇನ್ನು ಪ್ರವೇಶ ಪರೀಕ್ಷೆ ಮತ್ತು ಸಂದರ್ಶನ ಕಡ್ಡಾಯವಾಗಲಿದೆ. ಇದಕ್ಕಾಗಿ ಪ್ರವೇಶ ಪ್ರಕ್ರಿಯೆ ನಿಯಮಾವಳಿಗಳಲ್ಲಿ ವಿಶ್ವವಿದ್ಯಾಲಯ ಅನುದಾನ ಆಯೋಗ (ಯುಜಿಸಿ) ಶೀಘ್ರ ಬದಲಾವಣೆ ತರಲಿದೆ.

ನವದೆಹಲಿ: ಎಂ.ಫಿಲ್‌ ಮತ್ತು ಪಿಎಚ್.ಡಿ ಮಾಡಲು ಬಯಸುವವರಿಗೆ ಇನ್ನು ಪ್ರವೇಶ ಪರೀಕ್ಷೆ ಮತ್ತು ಸಂದರ್ಶನ ಕಡ್ಡಾಯವಾಗಲಿದೆ. ಇದಕ್ಕಾಗಿ ಪ್ರವೇಶ ಪ್ರಕ್ರಿಯೆ ನಿಯಮಾವಳಿಗಳಲ್ಲಿ ವಿಶ್ವವಿದ್ಯಾಲಯ ಅನುದಾನ ಆಯೋಗ (ಯುಜಿಸಿ) ಶೀಘ್ರ ಬದಲಾವಣೆ ತರಲಿದೆ.

ಪ್ರವೇಶ ಪರೀಕ್ಷೆ ಮತ್ತು ಸಂದರ್ಶನ ಒಳಗೊಂಡ ಎರಡು ಹಂತದ ಪ್ರಕ್ರಿಯೆಯನ್ನು ಯುಜಿಸಿ ಕಡ್ಡಾಯಗೊಳಿಸಲಿದೆ. ಎಲ್ಲ ಉನ್ನತ ಶಿಕ್ಷಣ ಸಂಸ್ಥೆಗಳಿಗೆ ಈ ನಿಯಮಗಳು ಅನ್ವಯಿಸಲಿವೆ.

ಪರಿಷ್ಕೃತ ನಿಯಮಗಳ ಪ್ರಕಾರ, ರಾಷ್ಟ್ರೀಯ ಅರ್ಹತಾ ಪರೀಕ್ಷೆಯಲ್ಲಿ (ಎನ್‌ಇಟಿ) ಉತ್ತೀರ್ಣರಾದ ಸಂಶೋಧಕರು ಮತ್ತು ಎಂ.ಫಿಲ್‌. ಪದಿವೀಧರರೂ ಪ್ರವೇಶ ಪರೀಕ್ಷೆ ಮತ್ತು ಸಂದರ್ಶನದಲ್ಲಿ ಉತ್ತೀರ್ಣರಾಗಬೇಕಾಗುತ್ತದೆ. ಎಂ.ಫಿಲ್‌ ಮತ್ತು ಪಿ.ಎಚ್‌ಡಿಗೆ ರಾಷ್ಟ್ರಮಟ್ಟದ ಪ್ರವೇಶ ಪರೀಕ್ಷೆ ನಡೆಸಲು ಉದ್ದೇಶಿಸಲಾಗಿದೆ. ಏಕರೂಪದ ಪ್ರವೇಶ ಪ್ರಕ್ರಿಯೆ ಮತ್ತು ಸುಧಾರಣೆ ತರುವುದು ಪ್ರಸ್ತಾಪಿತ ಬದಲಾವಣೆ ಉದ್ದೇಶವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಆದರೆ, ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಎಂ.ಫಿಲ್‌., ಪಿಎಚ್‌.ಡಿ. ಸ್ಥಾನಗಳನ್ನು ಸಾಮಾನ್ಯ ಪ್ರವೇಶ ಪರೀಕ್ಷೆ ಮೂಲಕ ಭರ್ತಿ ಮಾಡುವ ನಿರ್ಧಾರವನ್ನು ರಾಜ್ಯಗಳೇ ಕೈಗೊಳ್ಳಬಹುದಾಗಿದೆ ಎಂದು ತಿಳಿಸಿದ್ದಾರೆ.