ಪಿಎಂಸಿ ಬ್ಯಾಂಕ್ ವಿತ್ ಡ್ರಾ ಮಿತಿ 50 ಸಾವಿರಕ್ಕೆ ಹೆಚ್ಚಿಸಿದ ಆರ್ ಬಿಐ

0
10

ಅವ್ಯವಹಾರ ಆರೋಪಗಳು ಕೇಳಿಬಂದ ಹಿನ್ನೆಲೆಯಲ್ಲಿ ಪಂಜಾಬ್ ಮತ್ತು ಮಹಾರಾಷ್ಟ್ರ ಸಹಕಾರಿ ಬ್ಯಾಂಕ್ ಲಿಮಿಟೆಡ್(ಪಿಎಂಸಿ) ಮೇಲೆ ಭಾರತೀಯ ರಿಸರ್ವ್ ಬ್ಯಾಂಕ್ ವಿಧಿಸಿದ್ದ ವಿತ್ ಡ್ರಾ ಮಿತಿಯನ್ನು 50 ಸಾವಿರಕ್ಕೆ ಹೆಚ್ಚಿಸಿದ್ದು, ಇದರಿಂದ ಶೇ.78 ರಷ್ಟು ಗ್ರಾಹಕರ ತಮ್ಮ ಖಾತೆಯಿಂದ ಸಂಪುರ್ಣ ಹಣ ಹಿಂಪಡೆಯಬಹುದಾಗಿದೆ.

ಮುಂಬೈ: ಅವ್ಯವಹಾರ ಆರೋಪಗಳು ಕೇಳಿಬಂದ ಹಿನ್ನೆಲೆಯಲ್ಲಿ ಪಂಜಾಬ್ ಮತ್ತು ಮಹಾರಾಷ್ಟ್ರ ಸಹಕಾರಿ ಬ್ಯಾಂಕ್ ಲಿಮಿಟೆಡ್(ಪಿಎಂಸಿ) ಮೇಲೆ ಭಾರತೀಯ ರಿಸರ್ವ್ ಬ್ಯಾಂಕ್ ವಿಧಿಸಿದ್ದ ವಿತ್ ಡ್ರಾ ಮಿತಿಯನ್ನು 50 ಸಾವಿರಕ್ಕೆ ಹೆಚ್ಚಿಸಿದ್ದು, ಇದರಿಂದ ಶೇ.78 ರಷ್ಟು ಗ್ರಾಹಕರ ತಮ್ಮ ಖಾತೆಯಿಂದ ಸಂಪುರ್ಣ ಹಣ ಹಿಂಪಡೆಯಬಹುದಾಗಿದೆ.

ಎಟಿಎಂನಲ್ಲೂ 50 ಸಾವಿರ ರೂಪಾಯಿ ವರೆಗೆ ಹಣ ಡ್ರಾ ಮಾಡಲು ಆರ್ ಬಿಐ ಅವಕಾಶ ನೀಡಿದ್ದು, ಪಿಎಂಸಿ ಗ್ರಾಹಕರು ಸುಲಭವಾಗಿ ತಮ್ಮ ಹಣ ಪಡೆಯಬಹುದು.

ಬ್ಯಾಂಕ್ ಗ್ರಾಹಕರ ಹಿತ ಕಾಪಾಡಲು ಎಲ್ಲಾ ರೀತಿಯ ಕ್ರಮ ಕೈಗೊಳ್ಳುವುದಾಗಿ ಆರ್ ಬಿಐ ಪ್ರಕಟಣೆಯಲ್ಲಿ ತಿಳಿಸಿದೆ.
 
ಅವ್ಯವಹಾರದ ವಾಸನೆ ಬಡಿದ ಹಿನ್ನೆಲೆಯಲ್ಲಿ ಆರ್‌ಬಿಐ ಬ್ಯಾಂಕಿನ ಆಡಳಿತವನ್ನು ನೇರ ತನ್ನ ನಿರ್ದೇಶನದಡಿಗೆ ತೆಗೆದುಕೊಂಡಿತ್ತು. ಜತೆಗೆ ಗ್ರಾಹಕರಿಗೆ ವಿತ್‌ಡ್ರಾವಲ್‌ ಮಿತಿಗಳನ್ನು ಹೇರಲಾಗಿತ್ತು. ಬಳಿಕ ಅದನ್ನು ತುಸು ಸಡಿಲಿಸುತ್ತ ಬಂದಿದ್ದು, ಅಕ್ಟೋಬರ್.14ರಂದು ಈ ಮಿತಿಯನ್ನು 40 ಸಾವಿರ ರೂ.ಗಳಿಗೆ ಏರಿಸಿತ್ತು.

ಬಹು-ರಾಜ್ಯ ಸಹಕಾರಿ ಬ್ಯಾಂಕ್ ಎಂದೇ ಖ್ಯಾತಿ ಪಡೆದಿರುವ ಪಿಎಂಸಿ ಬ್ಯಾಂಕ್, ಕರ್ನಾಟಕ, ಮಹಾರಾಷ್ಟ್ರ ದೆಹಲಿ, ಗೋವಾ, ಗುಜರಾತ್, ಆಂಧ್ರ ಪ್ರದೇಶ ಮತ್ತು ಮಧ್ಯ ಪ್ರದೇಶದಲ್ಲಿ ತನ್ನ ಶಾಖೆಗಳನ್ನು ಹೊಂದಿದೆ.