‘ಪಾರ್ಕರ್‌ ಸೋಲಾರ್‌’ ಪ್ರೋಬ್‌ ಶುಕ್ರ ಗ್ರಹದತ್ತ

0
681

ಸೂರ್ಯನ ವಾತಾವರಣವನ್ನು ಅಧ್ಯಯನ ಮಾಡುವ ಸಲುವಾಗಿ ನಾಸಾ ಕಳುಹಿಸಿದ ಪಾರ್ಕರ್‌ ಸೋಲಾರ್‌ ಪ್ರೋಬ್‌ ನೌಕೆಯು ಶುಕ್ರಗ್ರಹದತ್ತ ಮುನ್ನುಗ್ಗುತ್ತಿದ್ದು, ಅದರಿಂದ 2,500 ಕಿ.ಮೀ ಅಂತರದಲ್ಲಿ ತನ್ನ ಯಾನ ಮುಂದುವರಿಸಿದೆ.

ವಾಷಿಂಗ್ಟನ್‌ (ಪಿಟಿಐ): ಸೂರ್ಯನ ವಾತಾವರಣವನ್ನು ಅಧ್ಯಯನ ಮಾಡುವ ಸಲುವಾಗಿ ನಾಸಾ ಕಳುಹಿಸಿದ ಪಾರ್ಕರ್‌ ಸೋಲಾರ್‌ ಪ್ರೋಬ್‌ ನೌಕೆಯು ಶುಕ್ರಗ್ರಹದತ್ತ ಮುನ್ನುಗ್ಗುತ್ತಿದ್ದು, ಅದರಿಂದ 2,500 ಕಿ.ಮೀ ಅಂತರದಲ್ಲಿ ತನ್ನ ಯಾನ ಮುಂದುವರಿಸಿದೆ.

ಶುಕ್ರಗ್ರಹದ ಗುರುತ್ವಾಕರ್ಷಣೆ ಶಕ್ತಿಯು ಈ ನೌಕೆಯು ಸೂರ್ಯನ ವಾತಾವರಣಕ್ಕೆ ಮತ್ತಷ್ಟು ಹತ್ತಿರ ತಲುಪಲು ನೆರವಾಗುತ್ತದೆ ಎಂದು ನಾಸಾ ತಿಳಿಸಿದೆ.

ಸುಮಾರು 62 ಲಕ್ಷ ಕಿ.ಮೀ. ದೂರದ ಸೂರ್ಯನ ಹೊರಭಾಗ ಕರೋನಾ ಪ್ರವೇಶಿಸಿ ಅಧ್ಯಯನ ನಡೆಸುವ ಪ್ರಯತ್ನ ಇದಾಗಿದೆ. ಸೌರಮಾರುತದ ಇರುವಿಕೆಯನ್ನು 60 ವರ್ಷಗಳ ಹಿಂದೆಯೇ ಪ್ರತಿಪಾದಿ
ಸಿದ್ದ ಖಗೋಳ ವಿಜ್ಞಾನಿ ‘ಯುಗೀನ್‌ ಪಾರ್ಕರ್‌’ ಗೌರವಾರ್ಥ ಅವರ ಹೆಸರನ್ನೇ ನೌಕೆಗೆ ಇಡಲಾಗಿದೆ.