ಪಾಕ್ ಶಿವದೇಗುಲ ಭೇಟಿಗೆ 139 ಜನರಿಗೆ ವೀಸಾ ನೀಡಿಕೆ

0
581

ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದ ಚಕ್​ವಾಲ್ ಜಿಲ್ಲೆಯಲ್ಲಿರುವ ಕಟಾಸ್ ರಾಜ್ ಧಾಮ್ ಶಿವ ದೇವಾಲಯಕ್ಕೆ ಭೇಟಿ ನೀಡಲು ಭಾರತದ 139 ಭಕ್ತರಿಗೆ ಪಾಕಿಸ್ತಾನ ವೀಸಾ ನೀಡಿದೆ.

ನವದೆಹಲಿ: ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದ ಚಕ್​ವಾಲ್ ಜಿಲ್ಲೆಯಲ್ಲಿರುವ ಕಟಾಸ್ ರಾಜ್ ಧಾಮ್ ಶಿವ ದೇವಾಲಯಕ್ಕೆ ಭೇಟಿ ನೀಡಲು ಭಾರತದ 139 ಭಕ್ತರಿಗೆ ಪಾಕಿಸ್ತಾನ ವೀಸಾ ನೀಡಿದೆ.

ಡಿ. 9ರಿಂದ 15ರವರೆಗೆ ಭಕ್ತರು ದೇಗುಲಕ್ಕೆ ಭೇಟಿ ನೀಡಬಹುದಾಗಿದೆ. ಭಾರತ ಮತ್ತು ಪಾಕ್ ಹೊಂದಿರುವ ದ್ವಿಪಕ್ಷೀಯ ಒಪ್ಪಂದದ ಅನ್ವಯ ಪಾಕಿಸ್ತಾನ ವೀಸಾ ನೀಡಿದೆ ಎನ್ನಲಾಗಿದೆ. ಈ ದ್ವಿಪಕ್ಷೀಯ ಒಪ್ಪಂದದ ಪ್ರಕಾರ ಭಾರತದ ಸಿಖ್ ಮತ್ತು ಹಿಂದು ಧರ್ಮೀಯರು ಪಾಕ್​ನಲ್ಲಿರುವ ಧಾರ್ವಿುಕ ಕೇಂದ್ರಗಳಿಗೆ ಭೇಟಿ ನೀಡಬಹುದು. ಭಾರತದಲ್ಲಿರುವ ಮುಸ್ಲಿಂ ಕೇಂದ್ರಗಳಿಗೆ ಪಾಕಿಸ್ತಾನಿ ಭಕ್ತರು ಭೇಟಿ ನೀಡಬಹುದಾಗಿದೆ.

ಕಳೆದ ತಿಂಗಳು ಪಾಕಿಸ್ತಾನ ಭಾರತದ 3,800 ಸಿಖ್ ಧರ್ವಿುಯರಿಗೆ ಪಂಜಾಬ್ ಪ್ರಾಂತ್ಯದ ಕರ್ತಾರ್​ಪುರದಲ್ಲಿರುವ ದರ್ಬಾರ್ ಸಾಹೀಬ್ ಧಾರ್ವಿುಕ ಕೇಂದ್ರಕ್ಕೆ ಭೇಟಿ ನೀಡಲು ವೀಸಾ ನೀಡಿತ್ತು. ಇದಕ್ಕೂ ಮುನ್ನ ಪಾಕ್​ನ ಸುಕ್ಕೂರ್​ನ ಶಾದಾನಿ ದರ್ಬಾರ್​ನಲ್ಲಿರುವ ಪ್ರಖ್ಯಾತ ಹಿಂದೂ ದೇವಾಲಯಕ್ಕೆ ತೆರಳಲು 220 ಭಕ್ತರಿಗೆ ಪಾಕ್ ವೀಸಾ ನೀಡಿತ್ತು. ಕಟಾಸ್ ಎಂಬ ಸರೋವರದ ದಡದ ಮೇಲೆ ಶಿವ ದೇಗುಲವಿದೆ. ಪಾಕ್​ನಲ್ಲಿರುವ ಹಿಂದೂಗಳ ಏಕೈಕ ಪವಿತ್ರ ಯಾತ್ರಾ ಸ್ಥಳ ಇದಾಗಿದೆ.