ಪಾಕ್ ವಿರುದ್ಧ ಅಮೆರಿಕ ನಿರ್ಬಂಧ: ಪ್ರಜೆಗಳನ್ನು ಹಿಂದಕ್ಕೆ ಕರೆಸಿಕೊಳ್ಳಲು ನಿರಾಕರಣೆ ಹಿನ್ನೆಲೆ

0
17

ಅಮೆರಿಕದಿಂದ ಗಡಿಪಾರಾದ ಮತ್ತು ವೀಸಾ ಅವಧಿ ಮುಗಿದಿದ್ದರೂ ನೆಲೆಸಿರುವ ಪಾಕ್ ಪ್ರಜೆಗಳನ್ನು ವಾಪಸು ಕರೆಯಿಸಿಕೊಳ್ಳಲು ನಿರಾಕರಿಸಿದ ಪಾಕಿಸ್ತಾನದ ವಿರುದ್ಧ ಅಮೆರಿಕ ನಿರ್ಬಂಧ ವಿಧಿಸಿದೆ. ಜತೆಗೆ ಪಾಕ್​ನ ರಾಯಭಾರ ಅಧಿಕಾರಿ ಸೇರಿದಂತೆ ಇನ್ನಿತರ ಉನ್ನತ ಮಟ್ಟದ ಅಧಿಕಾರಿಗಳ ವೀಸಾ ಕೂಡ ತಾತ್ಕಾಲಿಕವಾಗಿ ತಡೆಹಿಡಿಯುವುದಾಗಿ ಟ್ರಂಪ್ ಆಡಳಿತ ಖಡಕ್ ಎಚ್ಚರಿಕೆ ನೀಡಿದೆ.

ವಾಷಿಂಗ್ಟನ್: ಅಮೆರಿಕದಿಂದ ಗಡಿಪಾರಾದ ಮತ್ತು ವೀಸಾ ಅವಧಿ ಮುಗಿದಿದ್ದರೂ ನೆಲೆಸಿರುವ ಪಾಕ್ ಪ್ರಜೆಗಳನ್ನು ವಾಪಸು ಕರೆಯಿಸಿಕೊಳ್ಳಲು ನಿರಾಕರಿಸಿದ ಪಾಕಿಸ್ತಾನದ ವಿರುದ್ಧ ಅಮೆರಿಕ ನಿರ್ಬಂಧ ವಿಧಿಸಿದೆ. ಜತೆಗೆ ಪಾಕ್​ನ ರಾಯಭಾರ ಅಧಿಕಾರಿ ಸೇರಿದಂತೆ ಇನ್ನಿತರ ಉನ್ನತ ಮಟ್ಟದ ಅಧಿಕಾರಿಗಳ ವೀಸಾ ಕೂಡ ತಾತ್ಕಾಲಿಕವಾಗಿ ತಡೆಹಿಡಿಯುವುದಾಗಿ ಟ್ರಂಪ್ ಆಡಳಿತ ಖಡಕ್ ಎಚ್ಚರಿಕೆ ನೀಡಿದೆ.

ವಲಸೆ ಮತ್ತು ಪೌರತ್ವ ಕಾಯ್ದೆಯ ಸೆಕ್ಷನ್ಸ್ 243(ಬಿ) ಅನ್ವಯ ಆಂತರಿಕ ಭದ್ರತಾ ಇಲಾಖೆಯಿಂದ ನೋಟಿಸ್ ಪಡೆದಿರುವ ರಾಷ್ಟ್ರಗಳ ಪ್ರಜೆಗಳಿಗೆ ವಲಸೆ ಮತ್ತು ವಲಸೆಯೇತರ ವೀಸಾಗಳನ್ನು ತಡೆಹಿಡಿಯುವ ಅಧಿಕಾರ ವಿದೇಶಾಂಗ ಇಲಾಖೆ ಕಾರ್ಯದರ್ಶಿಗೆ ಇದೆ. ಆದರೆ ನಿರ್ಬಂಧ ಹಾಕಲಾಗಿದ್ದರೂ ರಾಯಭಾರ ಕಚೇರಿಗಳ ಕಾರ್ಯನಿರ್ವಹಣೆಯಲ್ಲಿ ಸದ್ಯ ಯಾವುದೇ ಬದಲಾವಣೆ ಇಲ್ಲ ಎಂದು ಅಮೆರಿಕ ವಿದೇಶಾಂಗ ಇಲಾಖೆ ಸ್ಪಷ್ಟಪಡಿಸಿದೆ.

ಪಾಕ್​ನಿಂದ ಸತತ ಕಡೆಗಣನೆ: ಅಮೆರಿಕ ನಿರ್ಬಂಧ ವಿಧಿಸಿರು ವುದರಿಂದ ಪಾಕ್​ಗೆ ಸಂಕಷ್ಟ ಎದುರಾಗುವ ಸಾಧ್ಯತೆ ಇದೆ ಎಂದು ಪಾಕ್​ನ ಮಾಜಿ ರಾಯಭಾರಿ ಹುಸೇನ್ ಹಕ್ಕಾನಿ ಆತಂಕ ವ್ಯಕ್ತಪಡಿಸಿದ್ದಾರೆ. ಈ ಹಿಂದೆ ಕೂಡ ಅಮೆರಿಕದ ಇಂಥ ಎಚ್ಚರಿಕೆಯನ್ನು ಪಾಕ್ ಕಡೆಗಣಿಸಿತ್ತು.

ಗಡಿಪಾರಾದ ಮತ್ತು ನಿಯಮಬಾಹಿರವಾಗಿ ನೆಲೆಸಿರುವ ಅನ್ಯ ದೇಶದ ಪ್ರಜೆಗಳನ್ನು ವಾಪಸು ಕರೆಯಿಸಿಕೊಳ್ಳದ ರಾಷ್ಟ್ರಗಳನ್ನು ಅಮೆರಿಕ ನಿರ್ಬಂಧಿತರ ಪಟ್ಟಿಗೆ ಸೇರ್ಪಡೆ ಮಾಡುತ್ತದೆ. ಟ್ರಂಪ್ ಅಧಿಕಾರಕ್ಕೆ ಬಂದ ನಂತರ ಒಟ್ಟು 8 ದೇಶಗಳನ್ನು ಈ ಪಟ್ಟಿಗೆ ಸೇರಿಸಲಾಗಿದೆ. ಘಾನಾ ಮತ್ತು ಪಾಕಿಸ್ತಾನ ಈ ವರ್ಷ ನಿರ್ಬಂಧಕ್ಕೆ ಗುರಿಯಾಗಿವೆ.