ಪಾಕ್ ವಾಯು ನಿರ್ಬಂಧ ತೆರವು: 220 ವಿಮಾನಗಳ ಸಂಚಾರಕ್ಕೆ ನೆರವಾದ ಕ್ರಮ

0
17

ಭಾರತದ ನಾಗರಿಕ ವಿಮಾನಗಳಿಗೆ ಪಾಕಿಸ್ತಾನ ತನ್ನ ವಾಯುಮಾರ್ಗವನ್ನು ಮುಕ್ತಗೊಳಿಸಿದೆ. ಜುಲೈ16 ರ.ಮಂಗಳವಾರ ಮಧ್ಯರಾತ್ರಿ 12.41ರಿಂದ ಭಾರತದ ವಿಮಾನಗಳಿಗೆ ವಿಧಿಸಿದ್ದ ನಿರ್ಬಂಧ ತೆರವುಗೊಳಿಸುತ್ತಿರುವುದಾಗಿ ಪಾಕ್ ಅಧಿಕಾರಿಗಳು ತಿಳಿಸಿದ್ದಾರೆ.

ಇಸ್ಲಾಮಾಬಾದ್: ಭಾರತದ ನಾಗರಿಕ ವಿಮಾನಗಳಿಗೆ ಪಾಕಿಸ್ತಾನ ತನ್ನ ವಾಯುಮಾರ್ಗವನ್ನು ಮುಕ್ತಗೊಳಿಸಿದೆ. ಮಂಗಳವಾರ ಮಧ್ಯರಾತ್ರಿ 12.41ರಿಂದ ಭಾರತದ ವಿಮಾನಗಳಿಗೆ ವಿಧಿಸಿದ್ದ ನಿರ್ಬಂಧ ತೆರವುಗೊಳಿಸುತ್ತಿರುವುದಾಗಿ ಪಾಕ್ ಅಧಿಕಾರಿಗಳು ತಿಳಿಸಿದ್ದಾರೆ. ಪಾಕ್ ವಿಮಾನಗಳಿಗೆ ಹೇರಿದ್ದ ನಿರ್ಬಂಧವನ್ನು ಭಾರತ ಕಳೆದ ಮೇ 31ರಂದು ಹಿಂಪಡೆದಿತ್ತು.

ಪುಲ್ವಾಮಾ ದಾಳಿಗೆ ಪ್ರತೀಕಾರವಾಗಿ ಫೆ.26ರಂದು ಭಾರತೀಯ ವಾಯುಪಡೆ ಪಾಕ್​ನ ಬಾಲಾಕೋಟ್​ನ ಜೈಷ್ ಉಗ್ರರ ನೆಲೆಗಳ ಮೇಲೆ ದಾಳಿ ನಡೆಸಿದ ಬಳಿಕ ಭಾರತದ ವಿಮಾನಗಳಿಗೆ ನಿರ್ಬಂಧ ಹೇರಿತ್ತು. ಆದರೆ, ಪಾಕ್ ತನ್ನ 11 ವಾಯುಯಾನ ಮಾರ್ಗಗಳಲ್ಲಿ ಎರಡು ಮಾರ್ಗಗಳಲ್ಲಿ ಭಾರತದ ವಿಮಾನಗಳು ಸಂಚರಿಸಬಹುದು ಎಂದು ಹೇಳಿತ್ತು.

ಭಾರತದ ಸುಮಾರು 220 ವಿಮಾನಗಳು ಪಾಕ್ ವಾಯು ಪ್ರದೇಶದ ಮೂಲಕ ಸಂಚಾರ ಮಾಡುತ್ತಿದ್ದವು. ಆದರೆ, ಈ ನಿರ್ಬಂಧದಿಂದಾಗಿ ಬೇರೆ ಮಾರ್ಗದಲ್ಲಿ ಸಂಚರಿಸುತ್ತಿದ್ದವು. ಇದರಿಂದ ಜೂನ್​ವರೆಗೆ ಒಟ್ಟು -ಠಿ;548 ಕೋಟಿ ಹೆಚ್ಚುವರಿ ಖರ್ಚು ಹೊರೆ ಭಾರತದ ವಿಮಾನಯಾನ ಸಂಸ್ಥೆಗಳ ಮೇಲೆ ಬಿತ್ತು. ವಾಯುಯಾನ ಸಂಸ್ಥೆಗಳಾದ ಏರ್​ಇಂಡಿಯಾ -ಠಿ;491 ಕೋಟಿ, ಸ್ಪೈಸ್ ಜೆಟ್ ಠಿ;30.73 ಕೋಟಿ, ಇಂಡಿಗೋ-ಠಿ;25.01 ಕೋಟಿ ಮತ್ತು ಗೋಏರ್ -ಠಿ;2.10 ಕೋಟಿ ನಷ್ಟ ಅನುಭವಿಸಿವೆ. ಇಂಡಿಗೋದ ದೆಹಲಿ-ಇಸ್ತಾಂಬುಲ್ ಹೊಸ ವಿಮಾನ ಮಾರ್ಗಕ್ಕೂ ಪಾಕ್ ನಿರ್ಬಂಧ ತೊಡಕಾಗಿತ್ತು. ಬಳಿಕ ಮಾರ್ಚ್​ನಲ್ಲಿ ಅರಬ್ಬಿ ಸಮುದ್ರದ ಮೂಲಕ ಸಂಚಾರ ಪ್ರಾರಂಭಿಸಿದ ಈ ವಿಮಾನ ಕತಾರ್​ನ ದೋಹಾದಲ್ಲಿ ಇಳಿದು ಇಂಧನ ತುಂಬಿಸಿಕೊಂಡು ಮತ್ತೆ ಪ್ರಯಾಣ ಬೆಳೆಸುತ್ತಿತ್ತು.