ಪಾಕ್-ಭಾರತ ಸಂಜೋತಾ ಎಕ್ಸ್​ಪ್ರೆಸ್​ ರೈಲು ಸಂಚಾರ ಸ್ಥಗಿತಗೊಳಿಸಿದ ಪಾಕಿಸ್ತಾನ

0
943

ಪಾಕ್​-ಭಾರತ ನಡುವಿನ ಸಂಜೋತಾ ಎಕ್ಸ್​ಪ್ರೆಸ್​ ರೈಲು ಸಂಚಾರ ಅನಿರ್ದಿಷ್ಟಾವಧಿ ಕಾಲದವರೆಗೆ ಸ್ಥಗಿತಗೊಂಡಿದೆ.ಪುಲ್ವಾಮಾ ಉಗ್ರದಾಳಿ, ಅದಕ್ಕೆ ಪ್ರತಿಯಾಗಿ ಭಾರತದ ದಾಳಿಯಿಂದಾಗಿ ಎರಡೂ ದೇಶಗಳ ನಡುವೆ ಬಿಕ್ಕಟ್ಟಿನ ಪರಿಸ್ಥಿತಿ ಉಂಟಾಗಿರುವ ಹಿನ್ನೆಲೆಯಲ್ಲಿ ರೈಲು ಸಂಚಾರ ಸ್ಥಗಿತಗೊಳಿಸಲು ಪಾಕಿಸ್ತಾನ ವಿದೇಶಾಂಗ ವ್ಯವಹಾರಗಳ ಸಚಿವಾಲಯ ಸೂಚನೆ ನೀಡಿದ್ದು, ಮತ್ತೊಂದು ಸೂಚನೆಯವರೆಗೂ ಸಂಜೋತ್​ ರೈಲು ಸಂಚಾರ ಇರುವುದಿಲ್ಲ ಎಂದು ಇಸ್ಲಾಮಾಬಾದ್​ ಅಧಿಕಾರಿಗಳು ತಿಳಿಸಿದ್ದಾರೆ.

ನವದೆಹಲಿ: ಪಾಕ್​-ಭಾರತ ನಡುವಿನ ಸಂಜೋತಾ ಎಕ್ಸ್​ಪ್ರೆಸ್​ ರೈಲು ಸಂಚಾರ ಅನಿರ್ದಿಷ್ಟಾವಧಿ ಕಾಲದವರೆಗೆ ಸ್ಥಗಿತಗೊಂಡಿದೆ.

ಪುಲ್ವಾಮಾ ಉಗ್ರದಾಳಿ, ಅದಕ್ಕೆ ಪ್ರತಿಯಾಗಿ ಭಾರತದ ದಾಳಿಯಿಂದಾಗಿ ಎರಡೂ ದೇಶಗಳ ನಡುವೆ ಬಿಕ್ಕಟ್ಟಿನ ಪರಿಸ್ಥಿತಿ ಉಂಟಾಗಿರುವ ಹಿನ್ನೆಲೆಯಲ್ಲಿ ರೈಲು ಸಂಚಾರ ಸ್ಥಗಿತಗೊಳಿಸಲು ಪಾಕಿಸ್ತಾನ ವಿದೇಶಾಂಗ ವ್ಯವಹಾರಗಳ ಸಚಿವಾಲಯ ಸೂಚನೆ ನೀಡಿದ್ದು, ಮತ್ತೊಂದು ಸೂಚನೆಯವರೆಗೂ ಸಂಜೋತ್​ ರೈಲು ಸಂಚಾರ ಇರುವುದಿಲ್ಲ ಎಂದು ಇಸ್ಲಾಮಾಬಾದ್​ ಅಧಿಕಾರಿಗಳು ತಿಳಿಸಿದ್ದಾರೆ.

ಭಾರತ ಮತ್ತು ಪಾಕಿಸ್ತಾನ ನಡುವೆ ಉದ್ವಿಘ್ನ ಪರಿಸ್ಥಿತಿ ಇರುವುದರಿಂದ ಇಂದಿನಿಂದಲೇ ಸಂಜೋತ್​ ರೈಲು ಸಂಚಾರ ನಿಲ್ಲಿಸಲಾಗಿದೆ. ಪರಿಸ್ಥಿತಿ ಸರಿಯಾದ ಬಳಿಕ ಭದ್ರತೆಯನ್ನು ನೋಡಿಕೊಂಡು ಮತ್ತೆ ಸಂಚಾರ ಪ್ರಾರಂಭಿಸಲಾಗುವುದು ಎಂದು ಹೇಳಿಕೆ ನೀಡಿರುವ ಪಾಕ್​, ರೈಲು ಸಂಚಾರ ಪ್ರಾರಂಭವಾಗುವ ದಿನಾಂಕವನ್ನು ತಿಳಿಸಿಲ್ಲ.

ಸಂಜೋತಾ​ ರೈಲು ವಾರಕ್ಕೆ ಎರಡು ಬಾರಿ ಸಂಚಾರ ಮಾಡುತ್ತಿತ್ತು. ಲಾಹೋರ್​ನಿಂದ ಸೋಮವಾರ ಮತ್ತು ಗುರುವಾರ ಹೊರಡುತ್ತಿತ್ತು. ಇಂದು ಕೂಡ ಲಾಹೋರ್​ನಿಂದ ಹೊರಡಲಿತ್ತು. 16 ಜನ ಪ್ರಯಾಣಿಕರೂ ಇದ್ದರು. ಆದರೆ, ಅಷ್ಟರಲ್ಲಾಗಲೇ ಸಂಚಾರ ನಿಷೇಧ ಆದೇಶ ಬಂದಿದ್ದರಿಂದ ಪ್ರಯಾಣಿಕರು ಅಲ್ಲಿಯೇ ಉಳಿಯಬೇಕಾಯಿತು.

ಸಂಜೋತಾ​ ರೈಲು ಸ್ಥಗಿತದ ಬಗ್ಗೆ ತಮಗೆ ಪಾಕಿಸ್ತಾನ ಮುಂಚಿತವಾಗಿ ಮಾಹಿತಿ ನೀಡಿಲ್ಲ ಎಂದು ಭಾರತೀಯ ರೈಲ್ವೆ ಇಲಾಖೆ ತಿಳಿಸಿದೆ. ಅಲ್ಲದೆ, ಭಾರತದಿಂದಲೂ ಪಾಕಿಸ್ತಾನಕ್ಕೆ ಮಾ.4ರಿಂದ ರೈಲು ಸೇವೆ ನಿಲ್ಲಿಸಲು ಯೋಜನೆ ರೂಪಿಸಿದೆ.