ಪಾಕ್‌ ಪ್ರಧಾನಿಯಾಗಿ ಇಮ್ರಾನ್ ಖಾನ್‌ ಆಯ್ಕೆ, ನಾಳೆ(ಆಗಸ್ಟ್ 18 ರಂದು) ಪ್ರಮಾಣ ವಚನ

0
42

ಮಾಜಿ ಕ್ರಿಕೆಟರ್‌ ಮತ್ತು ರಾಜಕಾರಣಿ ಇಮ್ರಾನ್‌ ಖಾನ್‌ ಏಕಪಕ್ಷೀಯ ಸ್ಪರ್ಧೆಯಲ್ಲಿ ಪ್ರತಿಸ್ಫರ್ಧಿ ಶಹಬಾಜ್ ಶರೀಫ್‌ ಅವರನ್ನು ಸೋಲಿಸಿ ಪಾಕಿಸ್ತಾನದ ಪ್ರಧಾನಿಯಾಗಿ ಆಯ್ಕೆಯಾಗಿದ್ದಾರೆ.

ಇಸ್ಲಾಮಾಬಾದ್‌: ಮಾಜಿ ಕ್ರಿಕೆಟರ್‌ ಮತ್ತು ರಾಜಕಾರಣಿ ಇಮ್ರಾನ್‌ ಖಾನ್‌ ಏಕಪಕ್ಷೀಯ ಸ್ಪರ್ಧೆಯಲ್ಲಿ ಪ್ರತಿಸ್ಫರ್ಧಿ ಶಹಬಾಜ್ ಶರೀಫ್‌ ಅವರನ್ನು ಸೋಲಿಸಿ ಪಾಕಿಸ್ತಾನದ ಪ್ರಧಾನಿಯಾಗಿ ಆಯ್ಕೆಯಾಗಿದ್ದಾರೆ.

ವಿರೋಧ ಪಕ್ಷಗಳ ಮೈತ್ರಿ ಕೂಟದಿಂದ ಪ್ರಧಾನಮಂತ್ರಿ ಅಭ್ಯರ್ಥಿಯಾಗಿ ಪಿಎಂಎಲ್‌-ಎನ್‌ ಪಕ್ಷದ ಶಹಬಾಜ್​ ಶರೀಫ್‌ರನ್ನು ನಾಮನಿರ್ದೇಶನ ಮಾಡಲು ವಿಫಲವಾಗಿ ಮೈತ್ರಿಕೂಟ ಮುರಿದುಬಿದ್ದ ಹಿನ್ನೆಲೆಯಲ್ಲಿ ಇಮ್ರಾನ್‌ ಖಾನ್‌ ನಿರಾಯಾಸವಾಗಿ ಪಾಕ್‌ನ ಮುಂದಿನ ಪ್ರಧಾನಿಯಾಗಲಿದ್ದಾರೆ.

ಪಾಕಿಸ್ತಾನದಲ್ಲಿ ಬಿಲಾವಾಲ್ ಭುಟ್ಟೋ ಜರ್ದಾರಿ ಅವರ ನೇತೃತ್ವದ ಪಾಕಿಸ್ತಾನ ಪೀಪಲ್ಸ್ ಪಕ್ಷವು 54 ಸೀಟುಗಳೊಂದಿಗೆ ಮತದಾನದಿಂದ ಹೊರಗುಳಿದ ನಂತರ 15 ನೇ ರಾಷ್ಟ್ರೀಯ ಅಸೆಂಬ್ಲಿ ಚುನಾವಣೆಯು ಕೇವಲ ಔಪಚಾರಿಕ ಚುನಾವಣೆಯಾಗಿದೆ.

65 ವರ್ಷದ ಇಮ್ರಾನ್‌ ಖಾನ್‌ ನೇತೃತ್ವದ ಪಾಕಿಸ್ತಾನ್‌ ತೆಹ್ರೀಕ್‌ ಇ ಇನ್ಸಾಫ್‌(PTI) ಪಕ್ಷವು ಚುನಾವಣೆಯಲ್ಲಿ 176 ಮತಗಳನ್ನು ಗಳಿಸಿದ್ದರೆ, ಮಾಜಿ ಪ್ರಧಾನಿ ನವಾಜ್‌ ಷರೀಫ್‌ ನೇತೃತ್ವದ ಪಾಕಿಸ್ತಾನ್‌ ಮುಸ್ಲಿಂ ಲೀಗ್‌ ಪಕ್ಷ ಕೇವಲ 96 ಮತಗಳನ್ನು ಪಡೆಯಿತು. ಒಟ್ಟಾರೆ 342 ಸೀಟುಗಳಿರುವ ಸಂಸತ್ತಿನಲ್ಲಿ ಸರ್ಕಾರ ರಚನೆಗೆ 172 ಮತಗಳು ಅಗತ್ಯವಿತ್ತು.

ಇನ್ನು ಇಮ್ರಾನ್‌ ಖಾನ್‌ ಅವರು ನಾಳೆ ನಡೆಯಲಿರುವ ಸಮಾರಂಭದಲ್ಲಿ ಪಾಕಿಸ್ತಾನದ ನೂತನ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. (ಏಜೆನ್ಸೀಸ್)