ಪಾಕ್​ ಸೇನಾಧಿಕಾರಿಗಳಿಗೆ ಮಿಲಿಟರಿ ತರಬೇತಿ ಸ್ಥಗಿತಗೊಳಿಸಿದ ಅಮೆರಿಕ

0
12

ಭಯೋತ್ಪಾದನೆ ನಿಯಂತ್ರಣದಲ್ಲಿ ಪಾಕಿಸ್ತಾನ ವಿಫಲವಾದ ಕಾರಣ ಕಳೆದ ತಿಂಗಳು 7,945 ಕೋಟಿ ರೂ. ಅನುದಾನ ಕಡಿತಗೊಳಿಸಿದ್ದ ಅಮೆರಿಕ, ಪ್ರಸ್ತುತ ಪಾಕ್ ಮಿಲಿಟರಿ ಅಧಿಕಾರಿಗಳಿಗೆ ನೀಡಲಾಗುತ್ತಿದ್ದ ತರಬೇತಿ ಮತ್ತು ಶಿಕ್ಷಣವನ್ನು ಕಡಿತಗೊಳಿಸಿದೆ.

ವಾಷಿಂಗ್ಟನ್: ಭಯೋತ್ಪಾದನೆ ನಿಯಂತ್ರಣದಲ್ಲಿ ಪಾಕಿಸ್ತಾನ ವಿಫಲವಾದ ಕಾರಣ ಕಳೆದ ತಿಂಗಳು 7,945 ಕೋಟಿ ರೂ. ಅನುದಾನ ಕಡಿತಗೊಳಿಸಿದ್ದ ಅಮೆರಿಕ, ಪ್ರಸ್ತುತ ಪಾಕ್ ಮಿಲಿಟರಿ ಅಧಿಕಾರಿಗಳಿಗೆ ನೀಡಲಾಗುತ್ತಿದ್ದ ತರಬೇತಿ ಮತ್ತು ಶಿಕ್ಷಣವನ್ನು ಕಡಿತಗೊಳಿಸಿದೆ.

ಪಾಕಿಸ್ತಾನದ ಮಿಲಿಟರಿ ಅಧಿಕಾರಿಗಳಿಗೆ ರಷ್ಯಾದಲ್ಲಿ ತರಬೇತಿ ನೀಡುವ ಸಂಬಂಧ ಪಾಕ್​ ಮತ್ತು ರಷ್ಯಾ ಇತ್ತೀಚೆಗೆ ಒಪ್ಪಂದಕ್ಕೆ ಸಹಿ ಹಾಕಿದ್ದರು. ಇದರ ಬೆನ್ನಲ್ಲೇ ಅಮೆರಿಕ ಪಾಕ್​ ಅಧಿಕಾರಿಗಳಿಗೆ ತರಬೇತಿ ನೀಡುವುದನ್ನು ಸ್ಥಗಿತಗೊಳಿಸುವ ನಿರ್ಧಾರ ಪ್ರಕಟಿಸಿದೆ.

ಅಂತಾರಾಷ್ಟ್ರೀಯ ಮಿಲಿಟರಿ ಎಜುಕೇಷನ್ ಮತ್ತು ಟ್ರೇನಿಂಗ್ (ಐಎಂಇಟಿ)ನಿಂದ ಪಾಕಿಸ್ತಾನವನ್ನು ಅಮೆರಿಕ ಹೊರಗಿಟ್ಟಿದೆ. ಅಮೆರಿಕದ ಈ ಕ್ರಮದಿಂದ ಮುಂದಿನ ಶೈಕ್ಷಣಿಕ ವರ್ಷ ತರಬೇತಿಗಾಗಿ ಅಣಿಯಾಗಿದ್ದ 66 ಪಾಕ್ ಮಿಲಿಟರಿ ಅಧಿಕಾರಿಗಳಿಗೆ ತರಬೇತಿ ಶಾಲೆಗೆ ದಾಖಲಾತಿ ಸಿಗುವುದಿಲ್ಲ ಎಂದು ವರದಿಯಾಗಿದೆ.

ಪಾಕಿಸ್ತಾನದ ಅಧಿಕಾರಿಗಳಿಗೆ 1960 ರಿಂದಲೂ ಅಮೆರಿಕದಲ್ಲಿ ತರಬೇತಿ ನೀಡಲಾಗುತ್ತಿದೆ. 1990ರಲ್ಲಿ ತರಬೇತಿ ಕಾರ್ಯಕ್ರಮವನ್ನು ರದ್ದುಗೊಳಿಸಲಾಗಿತ್ತು. 2001ರ ಸೆಪ್ಟೆಂಬರ್​ 11ರ ಭಯೋತ್ಪಾದಕ ದಾಳಿಯ ನಂತರ ಅಮೆರಿಕ ಪಾಕ್​ ಅಧಿಕಾರಿಗಳಿಗೆ ನೀಡುವ ತರಬೇತಿಯನ್ನು ಮುಂದುವರಿಸಿತ್ತು.

ಚೀನಾ, ಪಾಕ್ ಮೇಲೆ ಅವಲಂಬನೆ

ಅಮೆರಿಕದ ಈ ಖಡಕ್ ಕ್ರಮದಿಂದ ಪಾಕ್ ಅನಿವಾರ್ಯವಾಗಿ ಚೀನಾ ಮತ್ತು ರಷ್ಯಾ ಮೇಲೆ ಹೆಚ್ಚು ಅವಲಂಬಿತವಾಗಲಿದೆ. ಮಿಲಿಟರಿ ಶಸ್ತ್ರ ಪೂರೈಕೆ, ಅಧಿಕಾರಿಗಳಿಗೆ ತರಬೇತಿ ಸೇರಿ ಅನೇಕ ಸಮರ ತಂತ್ರಗಳಿಗೆ ಚೀನಾ ಹಾಗೂ ರಷ್ಯಾದ ಸೇನೆ ಮೇಲೆ ಅವಲಂಬಿತವಾಗಲಿದೆ. ಇದು ದ್ವಿಪಕ್ಷೀಯ ಸಂಬಂಧಗಳ ಮೇಲೆ ನಕಾರಾತ್ಮಕ ಪರಿಣಾಮ ಬೀರಲಿದೆ ಎಂದು ಅಮೆರಿಕದ ಮಾಜಿ ವಿಶೇಷ ಪ್ರತಿನಿಧಿ ಡಾನ್ ಫೆಲ್ಡ್​ಮನ್ ಹೇಳಿದ್ದಾರೆ. (ಏಜೆನ್ಸೀಸ್​)