ಪಾಕ್​ ಮಾಜಿ ಪ್ರಧಾನಿ ನವಾಜ್​ ಷರೀಫ್​ಗೆ 10 ವರ್ಷ ಜೈಲು ಶಿಕ್ಷೆ

0
25

ಭ್ರಷ್ಟಾಚಾರ ಆರೋಪಕ್ಕೆ ಗುರಿಯಾಗಿ ಪ್ರಧಾನಿ ಹುದ್ದೆ ಕಳೆದುಕೊಂಡಿರುವ ಪಾಕಿಸ್ತಾನದ ನವಾಜ್ ಷರೀಫ್​ಗೆ ಪಾಕಿಸ್ತಾನದ ಕೋರ್ಟ್​ 10 ವರ್ಷಗಳ ಜೈಲು ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.

ಇಸ್ಲಾಮಾಬಾದ್​: ಭ್ರಷ್ಟಾಚಾರ ಆರೋಪಕ್ಕೆ ಗುರಿಯಾಗಿ ಪ್ರಧಾನಿ ಹುದ್ದೆ ಕಳೆದುಕೊಂಡಿರುವ ಪಾಕಿಸ್ತಾನದ ನವಾಜ್ ಷರೀಫ್​ಗೆ ಪಾಕಿಸ್ತಾನದ ಕೋರ್ಟ್​ 10 ವರ್ಷಗಳ ಜೈಲು ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.

ಪಾಕಿಸ್ತಾನದ ರಾಷ್ಟ್ರೀಯ ಹೊಣೆಗಾರಿಕೆ ಸಂಸ್ಥೆ (ಎನ್​ಎಬಿ) ನ್ಯಾಯಾಲಯ ಲಂಡನ್​ನ ಎವೆನ್​ಫೀಲ್ಡ್ ಪ್ರಾಪರ್ಟೀಸ್ ಭ್ರಷ್ಟಾಚಾರ ಪ್ರಕರಣದಲ್ಲಿ ತನ್ನ ತೀರ್ಪು ಪ್ರಕಟಿಸಿದೆ. ಪನಾಮ ಪೇಪರ್ಸ್​ ಹಗರಣ ಬೆಳಕಿಗೆ ಬಂದ ನಂತರ ನವಾಜ್​ ಷರೀಫ್​ ವಿರುದ್ಧ ಒಟ್ಟು ​ಮೂರು ಭ್ರಷ್ಟಾಚಾರ ಪ್ರಕರಣನ್ನು ದಾಖಲಿಸಲಾಗಿತ್ತು. ಅದರಲ್ಲಿ 1 ಪ್ರಕರಣದ ತೀರ್ಪು ಜುಲೈ 6 ರ ಶುಕ್ರವಾರ ಪ್ರಕಟವಾಗಿದ್ದು, ಉಳಿದ 2 ಪ್ರಕರಣಗಳ ವಿಚಾರಣೆ ಪ್ರಗತಿಯಲ್ಲಿದೆ.

ಲಂಡನ್​ನ ಎವೆನ್​ಫೀಲ್ಡ್ ಪ್ರಾಪರ್ಟೀಸ್ ಭ್ರಷ್ಟಾಚಾರ ಪ್ರಕರಣದಲ್ಲಿ ಷರೀಫ್​ ಪುತ್ರಿ ಮರ್ಯಮ್ ಗೆ 7 ವರ್ಷ ಜೈಲು ಶಿಕ್ಷೆ ಹಾಗೂ ಅಳಿಯ ಕ್ಯಾ. ಸಫ್ದಾರ್ ಗೆ ಒಂದು ವರ್ಷ ಜೈಲು ಶಿಕ್ಷೆ ವಿಧಿಸಲಾಗಿದೆ. ಜತೆಗೆ ನವಾಜ್​ ಷರೀಫ್​ಗೆ 10 ಮಿಲಿಯನ್​ ಅಮೆರಿಕನ್​ ಡಾಲರ್​ ಮತ್ತು ಷರೀಫ್​ ಪುತ್ರಿ ಮರ್ಯಮ್​ಗೆ 2.6 ಮಿಲಿಯನ್​ ಅಮೆರಿಕನ್​ ಡಾಲರ್​ ದಂಡ ವಿಧಿಸಲಾಗಿದೆ.

ನವಾಜ್ ಷರೀಫ್​ ಅವರ ಪತ್ನಿ ಗಂಟಲಿನ ಕ್ಯಾನ್ಸರ್​ನಿಂದ ಬಳಲುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಷರೀಫ್​ ಅವರು ಪತ್ನಿಯ ಚಿಕಿತ್ಸೆಗಾಗಿ ಕಳೆದ ವರ್ಷ ಲಂಡನ್​ಗೆ ತೆರಳಿದ್ದಾರೆ. ಪ್ರಸ್ತುತ ಅವರು ಲಂಡನ್​ನಲ್ಲಿ ವಾಸ್ತವ್ಯ ಹೂಡಿಸಿದ್ದಾರೆ.

3 ಬಾರಿ ಪಾಕ್​ ಪ್ರಧಾನಿಯಾಗಿದ್ದ ನವಾಜ್​ ಷರೀಫ್​ ಅವರು ಸುಪ್ರೀಂ ಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ಕಳೆದ ವರ್ಷ ತಮ್ಮ ಹುದ್ದೆಗೆ ರಾಜೀನಾಮೆ ಸಲ್ಲಿಸಿದ್ದರು. (ಏಜೆನ್ಸೀಸ್​)