ಪಾಕ್​ ಪ್ರಧಾನಿ ಗದ್ದುಗೆಗೆ ಇಮ್ರಾನ್​ ಖಾನ್​ ಗೂಗ್ಲಿ

0
18

ಜುಲೈ 25 ರ ಬುಧವಾರ ನಡೆದ ಪಾಕಿಸ್ತಾನದ ಸಾರ್ವತ್ರಿಕ ಚುನಾವಣೆಯ ಮತ ಎಣಿಕೆ ಪ್ರಕ್ರಿಯೆ ಮುಂದುವರಿದಿದ್ದು ಕ್ರಿಕೆಟಿಗ ಇಮ್ರಾನ್ ಖಾನ್ ನೇತೃತ್ವದ ಪಿಟಿಐ ಪಕ್ಷ ಮುನ್ನಡೆ ಕಾಯ್ದಿರಿಸಿಕೊಂಡಿದೆ.

ಇಸ್ಲಾಮಾಬಾದ್: ಜುಲೈ 25 ರ  ಬುಧವಾರ ನಡೆದ ಪಾಕಿಸ್ತಾನದ ಸಾರ್ವತ್ರಿಕ ಚುನಾವಣೆಯ ಮತ ಎಣಿಕೆ ಪ್ರಕ್ರಿಯೆ ಮುಂದುವರಿದಿದ್ದು ಕ್ರಿಕೆಟಿಗ ಇಮ್ರಾನ್ ಖಾನ್ ನೇತೃತ್ವದ ಪಿಟಿಐ ಪಕ್ಷ ಮುನ್ನಡೆ ಕಾಯ್ದಿರಿಸಿಕೊಂಡಿದೆ.

ನಿನ್ನೆಯಿಂದ ಮತ ಎಣಿಕೆ ಪ್ರಕ್ರಿಯೆ ನಡೆಯುತ್ತಿದ್ದು ಬಹುಮತಕ್ಕೆ ಬೇಕಾದ 137 ಸ್ಥಾನಗಳಿಗೆ ಇಮ್ರಾನ್​ ಕಾನ್​ನ ಪಿಟಿಐ ಪಕ್ಷ ಸಮೀಪದಲ್ಲಿದೆ. ಸದ್ಯ ಪಿಟಿಐ ಪಕ್ಷ 119 ಸ್ಥಾನಗಳಲ್ಲಿ ಬೃಹತ್​ ಮುನ್ನಡೆ ಕಾಯ್ದಿರಿಸಿಕೊಂಡಿದ್ದರೆ, ಭ್ರಷ್ಟಾಚಾರ ಪ್ರಕರಣದಲ್ಲಿ ಜೈಲು ಸೇರಿರುವ ಮಾಜಿ ಪ್ರಧಾನಿ ನವಾಜ್ ಷರೀಫ್​ರ ಪಿಎಂಎಲ್-ಎನ್ ಪಕ್ಷ ಸದ್ಯ 61 ಸ್ಥಾನಗಳಲ್ಲಿ ಮಾತ್ರ ಮುನ್ನಡೆ ಸಾಧಿಸಿ ಎರಡನೇ ಸ್ಥಾನದಲ್ಲಿದೆ. ಬಿಲಾವಲ್ ಭುಟ್ಟೊ ನಾಯಕತ್ವದ ಪಿಪಿಪಿ 40 ಸ್ಥಾನಗಳಲ್ಲಿ ಮುನ್ನಡೆ ಗಳಿಸಿ ಮೂರನೇ ಸ್ಥಾನದಲ್ಲಿದ್ದರೆ, ಇತರ ಸಣ್ಣಪಕ್ಷಗಳ ಅಭ್ಯರ್ಥಿಗಳು 50ಕ್ಕೂ ಹೆಚ್ಚು ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದ್ದಾರೆ.

ಒಟ್ಟು 272ರಲ್ಲಿ ಎರಡು ಕ್ಷೇತ್ರಗಳಲ್ಲಿ ಚುನಾವಣೆ ಮುಂದೂಡಿದ್ದರಿಂದ 270 ಸ್ಥಾನಗಳಿಗೆ ಚುನಾವಣೆ ನಡೆದಿತ್ತು. ಇದರಲ್ಲಿ ಬಹುಮತಕ್ಕೆ 137 ಸ್ಥಾನಗಳು ಅಗತ್ಯವಾಗಿವೆ.

ಮ್ಯಾಜಿಕ್​ ನಂಬರ್​ 172 
ಪಾಕಿಸ್ತಾನದ ಸಂಸತ್ 342 ಸದಸ್ಯರನ್ನು ಹೊಂದಿದೆ. ಇದರಲ್ಲಿ 272 ಸದಸ್ಯರು ಜನರಿಂದ ನೇರವಾಗಿ ಚುನಾಯಿತರಾಗುತ್ತಾರೆ. ಮಹಿಳೆಯರಿಗೆ 60, ಧಾರ್ವಿುಕ ಅಲ್ಪಸಂಖ್ಯಾತರಿಗೆ 10 ಸ್ಥಾನ ಮೀಸಲಾತಿ ಇದೆ. ಸರ್ಕಾರ ಅಸ್ತಿತ್ವಕ್ಕೆ ಬಂದ ಬಳಿಕ ಈ ಸ್ಥಾನಗಳಿಗೆ ಆಯ್ಕೆ ನಡೆಯಲಿದೆ. ಹೀಗಾಗಿ ಒಟ್ಟು 172 ಸದಸ್ಯರನ್ನು ಹೊಂದಿದ ಪಕ್ಷ ಅಧಿಕಾರಕ್ಕೆ ಬರಲಿದೆ.