ಮಾಜಿ ನಾಯಕ ಮಿಸ್ಬಾ ಉಲ್ ಹಕ್ ಅವರನ್ನು ಪಾಕಿಸ್ಥಾನ ಕ್ರಿಕೆಟ್ ತಂಡದ ಮುಖ್ಯ ಕೋಚ್ ಹಾಗೂ ಆಯ್ಕೆಗಾರರ ಸಮಿತಿಯ ಅಧ್ಯಕ್ಷನನ್ನಾಗಿ ನೇಮಿಸಲಾಗಿದೆ. ಮಾಜಿ ವೇಗಿ ವಕಾರ್ ಯೂನಿಸ್ ನೂತನ ಬೌಲಿಂಗ್ ಕೋಚ್ ಆಗಿದ್ದಾರೆ. ಇವರಿಬ್ಬರದು 3 ವರ್ಷಗಳ ಒಪ್ಪಂದವಾಗಿದೆ.
ಲಾಹೋರ್: ಮಾಜಿ ನಾಯಕ ಮಿಸ್ಬಾ ಉಲ್ ಹಕ್ ಅವರನ್ನು ಪಾಕಿಸ್ಥಾನ ಕ್ರಿಕೆಟ್ ತಂಡದ ಮುಖ್ಯ ಕೋಚ್ ಹಾಗೂ ಆಯ್ಕೆಗಾರರ ಸಮಿತಿಯ ಅಧ್ಯಕ್ಷನನ್ನಾಗಿ ನೇಮಿಸಲಾಗಿದೆ. ಮಾಜಿ ವೇಗಿ ವಕಾರ್ ಯೂನಿಸ್ ನೂತನ ಬೌಲಿಂಗ್ ಕೋಚ್ ಆಗಿದ್ದಾರೆ. ಇವರಿಬ್ಬರದು 3 ವರ್ಷಗಳ ಒಪ್ಪಂದವಾಗಿದೆ.
ಮಿಸ್ಬಾ ಪಾಕಿಸ್ಥಾನ ಕ್ರಿಕೆಟಿನ 30ನೇ ಮುಖ್ಯ ಕೋಚ್ ಆಗಿದ್ದಾರೆ. ಕೋಚ್ ಒಬ್ಬನಿಗೆ ಆಯ್ಕೆ ಸಮಿತಿಯ ಅಧ್ಯಕ್ಷತೆಯ ಹೊಣೆಗಾರಿಕೆ ನೀಡಿದ್ದು ಇದೇ ಮೊದಲು. ಶ್ರೀಲಂಕಾ ವಿರುದ್ಧದ 3 ಪಂದ್ಯಗಳ ಏಕದಿನ ಹಾಗೂ ಟಿ-20 ತವರು ಸರಣಿ ಇವರಿಬ್ಬರ ಪಾಲಿಗೆ ಮೊದಲ ಪರೀಕ್ಷೆ ಆಗಲಿದೆ.
ಪಾಕಿಸ್ಥಾನದ ಅತ್ಯಂತ ಯಶಸ್ವಿ ಟೆಸ್ಟ್ ನಾಯಕನೆಂಬ ಹೆಗ್ಗಳಿಕೆ ಹೊಂದಿರುವ ಮಿಸ್ಬಾ, 56 ಟೆಸ್ಟ್ಗಳಲ್ಲಿ 26 ಗೆಲುವು ಕಂಡಿದ್ದಾರೆ. 75 ಟೆಸ್ಟ್, 162 ಏಕದಿನ ಹಾಗೂ 39 ಟಿ20 ಅಂತಾರಾಷ್ಟ್ರೀಯ ಪಂದ್ಯಗಳನ್ನಾಡಿದ ಅನುಭವ ಹೊಂದಿದ್ದಾರೆ.
ಕಳೆದ ವಿಶ್ವಕಪ್ನಲ್ಲಿ ಪಾಕಿಸ್ಥಾನ ನಾಕೌಟ್ ತಲಪುವಲ್ಲಿ ವಿಫಲವಾದ ಕಾರಣ ಕೋಚ್ ಮಿಕ್ಕಿ ಆರ್ಥರ್ ಅವರ ಒಡಂಬಡಿಕೆಯನ್ನು ವಿಸ್ತರಿಸಿರಲಿಲ್ಲ. ಬೌಲಿಂಗ್ ಕೋಚ್ ಅಜರ್ ಮಹಮೂದ್ ಮತ್ತು ಬ್ಯಾಟಿಂಗ್ ಕೋಚ್ ಗ್ರ್ಯಾಂಟ್ ಫ್ಲವರ್ ಅವರಿಗೂ ಗೇಟ್ಪಾಸ್ ನೀಡಲಾಗಿತ್ತು.