ಪಾಕಿಸ್ತಾನ: 12 ಶಾಲೆಗಳಿಗೆ ಬೆಂಕಿ ಹಚ್ಚಿದ ಉಗ್ರರು

0
17

ಪಾಕಿಸ್ತಾನದ ಗಿಲ್ಗಿಟ್‌–ಬಾಲ್ಟಿಸ್ತಾನ ಪ್ರದೇಶದ ಚಿಲಾಸ್‌ ಪಟ್ಟಣದಲ್ಲಿ ಹೆಣ್ಣು ಮಕ್ಕಳ ಶಾಲೆಗಳು ಸೇರಿದಂತೆ 12 ಶಾಲೆಗಳಿಗೆ ಉಗ್ರರು ಬೆಂಕಿ ಹಚ್ಚಿದ್ದಾರೆ.

ಕರಾಚಿ‌‌/ಇಸ್ಲಾಮಾಬಾದ್‌(ಪಿಟಿಐ): ಇತ್ತೀಚೆಗೆ ಪಾಕಿಸ್ತಾನದ ಗಿಲ್ಗಿಟ್‌–ಬಾಲ್ಟಿಸ್ತಾನ ಪ್ರದೇಶದ ಚಿಲಾಸ್‌ ಪಟ್ಟಣದಲ್ಲಿ ಹೆಣ್ಣು ಮಕ್ಕಳ ಶಾಲೆಗಳು ಸೇರಿದಂತೆ 12 ಶಾಲೆಗಳಿಗೆ ಉಗ್ರರು ಬೆಂಕಿ ಹಚ್ಚಿದ್ದಾರೆ.

‘ಬೆಂಕಿಗಾಹುತಿಯಾಗಿರುವ ಶಾಲೆಗಳಲ್ಲಿ ಆರು ಶಾಲೆಗಳು ಹೆಣ್ಣು
ಮಕ್ಕಳ ಶಾಲೆಗಳಾಗಿವೆ. ದುಷ್ಕರ್ಮಿಗಳ ಪತ್ತೆಗಾಗಿ ಭದ್ರತಾ ಪಡೆಗಳು ತೀವ್ರ ಶೋಧ ನಡೆಸುತ್ತಿವೆ’ ಎಂದು ಪೊಲೀಸ್‌ ಅಧಿಕಾರಿಗಳು ತಿಳಿಸಿದ್ದಾರೆ.

‘ಶಾಲೆಗಳ ಮೇಲೆ ಬಾಂಬ್‌ ದಾಳಿ ನಡೆಸಿರುವ ಕುರಿತು ಯಾವುದೇ ಪುರಾವೆ
ಗಳು ಲಭಿಸಿಲ್ಲ’ ಎಂದೂ ತಿಳಿಸಿದ್ದಾರೆ.

 

ಯಾವುದೇ ಉಗ್ರ ಸಂಘಟನೆಗಳು ದಾಳಿಯ ಹೊಣೆ ಹೊತ್ತುಕೊಂಡಿಲ್ಲ. ಉಗ್ರರು ಶಾಲೆಗಳ ಮೇಲೆ ಪದೇ ಪದೇ ದಾಳಿ ನಡೆಸುತ್ತಿದ್ದು, ಸೂಕ್ತ ಭದ್ರತೆ ಒದಗಿಸಬೇಕು ಎಂದು ಆಗ್ರಹಿಸಿ ಸ್ಥಳೀಯರು ಪ್ರತಿಭಟನೆ ನಡೆಸಿದ್ದಾರೆ.

ವಾಯವ್ಯ ಪಾಕಿಸ್ತಾನದಲ್ಲಿ ಈ ಹಿಂದೆ ತಾಲಿಬಾನ್‌ ಉಗ್ರರು ನೂರಾರು ಶಾಲೆಗಳ ಮೇಲೆ ದಾಳಿ ನಡೆಸಿದ್ದರು. ಹೆಣ್ಣು ಮಕ್ಕಳ ಶಾಲೆಗಳನ್ನು ಗುರಿಯಾಗಿಸಿ ಇಲ್ಲಿ ಈ ಹಿಂದೆಯೂ ದಾಳಿಗಳು ನಡೆದಿದ್ದವು.