ಪಾಕಿಸ್ತಾನದ ಸ್ವಾತಂತ್ರ್ಯದ ದಿನದಂದು 30 ಭಾರತೀಯರ ಬಿಡುಗಡೆ

0
89

ಪಾಕಿಸ್ತಾನ ಆಗಸ್ಟ್ 14 ರ ಸ್ವಾತಂತ್ರ್ಯ ದಿನಾಚರಣೆ ಆಚರಿಸುತ್ತಿರುವ ಹಿನ್ನಲೆಯಲ್ಲಿ ಸೌಹಾರ್ದತೆಯ ಸಂಕೇತವಾಗಿ 27 ಮೀನುಗಾರರು ಸೇರಿದಂತೆ ಒಟ್ಟು 30 ಭಾರತೀಯರನ್ನು ಪಾಕಿಸ್ತಾನ ಆಗಸ್ಟ್ 13 ರ ಸೋಮವಾರ ಜೈಲಿನಿಂದ ಬಿಡುಗಡೆ ಮಾಡಿದೆ.

ಇಸ್ಲಾಮಾಬಾದ್ : ಪಾಕಿಸ್ತಾನ ಆಗಸ್ಟ್ 14 ರ ಸ್ವಾತಂತ್ರ್ಯ ದಿನಾಚರಣೆ ಆಚರಿಸುತ್ತಿರುವ ಹಿನ್ನಲೆಯಲ್ಲಿ ಸೌಹಾರ್ದತೆಯ ಸಂಕೇತವಾಗಿ 27 ಮೀನುಗಾರರು ಸೇರಿದಂತೆ ಒಟ್ಟು 30 ಭಾರತೀಯರನ್ನು ಪಾಕಿಸ್ತಾನ  ಆಗಸ್ಟ್ 13 ರ ಸೋಮವಾರ ಜೈಲಿನಿಂದ ಬಿಡುಗಡೆ ಮಾಡಿದೆ.

ಮಾನವೀಯ ನೆಲೆಗಳನ್ನು ರಾಜಕೀಯಗೊಳಿಸದಿರುವ ಪಾಕಿಸ್ತಾನದ ಸ್ಥಿರ ನೀತಿಗೆ ಅನುಗುಣವಾಗಿ ಭಾರತೀಯರನ್ನು ಬಿಡುಗಡೆಗೊಳಿಸಲಾಗಿದೆ. ಎಂದು ವಿದೇಶಾಂಗ ಸಚಿವಾಲಯ ವಕ್ತಾರ ಮೊಹಮ್ಮದ್ ಫೈಸಲ್ ಹೇಳಿಕೆ ನೀಡಿದ್ದಾರೆ.

ಸೌಹಾರ್ದತೆಯ ಸಂಕೇತವಾಗಿ ಭಾರತೀಯರನ್ನು ಬಿಡುಗಡೆ ಗೊಳಿಸಲಾಗಿದೆ. ಭಾರತವು ಇದೇ ರೀತಿ ನಮ್ಮೊಂದಿಗೆ ಕೈಜೋಡಿಸಲಿದೆ ಎಂಬ ಭರವಸೆ ಇದೆ ಎಂದು ಅವರು ಹೇಳಿದ್ದಾರೆ.

418 ಮೀನುಗಾರರೂ ಸೇರಿ 470ಕ್ಕಿಂತಲೂ ಹೆಚ್ಚು ಭಾರತೀಯರು ಪಾಕಿಸ್ತಾನದ ವಶದಲ್ಲಿದ್ದಾರೆ. ಎಂದು ಪಾಕ್ ಸರ್ಕಾರ ಸುಪ್ರೀಂಕೋರ್ಟ್ ಗೆ  ವರದಿ ನೀಡಿತ್ತು.

ಸದ್ಯ ಜೈಲಿನಿಂದ ಬಿಡುಗಡೆಗೊಂಡ ಭಾರತೀಯರನ್ನು ಕರಾಚಿಯ ಮಲಿರ್ ಜೈಲಿನಿಂದ ಕರೆದುಕೊಂಡು ಹೋಗಲಾಗಿದ್ದು ಅಲ್ಲಿಂದ ವಾಘಾ ಗಡಿಯಲ್ಲಿ ಭಾರತೀಯ ಅಧಿಕಾರಿಗಳಿಗೆ ಹಸ್ತಾಂತರ ಮಾಡಲಾಗುತ್ತದೆ.