ಪರ್ವತದ ಹಿಂದೆ ಅಡಗಿದರೂ ಶತ್ರು ಮೇಲೆ “ಬ್ರಹ್ಮೋಸ್”ದಾಳಿ

0
31

ವಿಶ್ವದಲ್ಲೆ ಅತಿವೇಗದ ಸೂಪರ್​ಸಾನಿಕ್ ಕ್ರೂಸ್ (ಭೂಮಿಯಿಂದ ಆಕಾಶಕ್ಕೆ ಚಿಮ್ಮುವ) ಕ್ಷಿಪಣಿ ಎಂಬ ಹೆಗ್ಗಳಿಕೆಯ ದೇಶೀಯ ನಿರ್ವಿುತ

‘ಬ್ರಹ್ಮೋಸ್ ’ನ ಮತ್ತಷ್ಟು ಸುಧಾರಿತ ಆವೃತ್ತಿಯನ್ನು ಅಭಿವೃದ್ಧಿಪಡಿಸಲಾಗುತ್ತಿದೆ. ಪರ್ವತ ಶ್ರೇಣಿಗಳಲ್ಲಿ ಗುಡ್ಡಗಾಡುಗಳ ಹಿಂದೆ ಅವಿತುಕೊಂಡು ದಾಳಿ ನಡೆಸುವ ಶತ್ರುಪಡೆಯ ಬಂಕರ್​ಗಳನ್ನು ಕ್ಷಣಮಾತ್ರದಲ್ಲಿ ಹುಡುಕಿ ಧ್ವಂಸಗೊಳಿಸುವ ಸಾಮರ್ಥ್ಯವನ್ನು ಸುಧಾರಿತ ಬ್ರಹ್ಮೋಸ್ ಕ್ಷಿಪಣಿ ಹೊಂದಿರಲಿದೆ.

ನವದೆಹಲಿ : ವಿಶ್ವದಲ್ಲೆ ಅತಿವೇಗದ ಸೂಪರ್​ಸಾನಿಕ್ ಕ್ರೂಸ್ (ಭೂಮಿಯಿಂದ ಆಕಾಶಕ್ಕೆ ಚಿಮ್ಮುವ) ಕ್ಷಿಪಣಿ ಎಂಬ ಹೆಗ್ಗಳಿಕೆಯ ದೇಶೀಯ ನಿರ್ವಿುತ

‘ಬ್ರಹ್ಮೋಸ್ ’ನ ಮತ್ತಷ್ಟು ಸುಧಾರಿತ ಆವೃತ್ತಿಯನ್ನು ಅಭಿವೃದ್ಧಿಪಡಿಸಲಾಗುತ್ತಿದೆ. ಪರ್ವತ ಶ್ರೇಣಿಗಳಲ್ಲಿ ಗುಡ್ಡಗಾಡುಗಳ ಹಿಂದೆ ಅವಿತುಕೊಂಡು ದಾಳಿ ನಡೆಸುವ ಶತ್ರುಪಡೆಯ ಬಂಕರ್​ಗಳನ್ನು ಕ್ಷಣಮಾತ್ರದಲ್ಲಿ ಹುಡುಕಿ ಧ್ವಂಸಗೊಳಿಸುವ ಸಾಮರ್ಥ್ಯವನ್ನು ಸುಧಾರಿತ ಬ್ರಹ್ಮೋಸ್ ಕ್ಷಿಪಣಿ ಹೊಂದಿರಲಿದೆ.

ನಿರಂತರವಾಗಿ ಗುರಿಯತ್ತ ನಿರ್ದೇಶನ ಪಡೆದು ದಾಳಿ ಮಾಡುವುದು ಕ್ರೂಸ್ ಕ್ಷಿಪಣಿಗಳ ಸಾಮಾನ್ಯ ಲಕ್ಷಣ. ಆದರೆ ಸುಧಾರಿತ ಆವೃತ್ತಿಯಲ್ಲಿ ಲಂಬ ಮಾರ್ಗವನ್ನು (90 ಡಿಗ್ರಿ) ಅಳವಡಿಸುವ ಮೂಲಕ ಪರ್ವತಗಳ ಹಿಂದೆ ಅಡಗಿರುವ ಗುರಿಯನ್ನು ಸುಲಭವಾಗಿ ಬ್ರಹ್ಮೋಸ್ ಪತ್ತೆ ಮಾಡಿ ದಾಳಿ ಮಾಡಲಿದೆ ಎಂದು ಬ್ರಹ್ಮೋಸ್ ಏರೋಸ್ಪೇಸ್ ಸಿಇಒ ಡಾ. ಸುಧೀರ್ ಮಿಶ್ರಾ ತಿಳಿಸಿದ್ದಾರೆ. ಲಂಬ ಮಾರ್ಗದಲ್ಲಿ ಗುರಿಯತ್ತ ಎರಗುವ ಮುನ್ನ 14 ಕಿ.ಮೀ. ಏರುವ ಸಾಮರ್ಥ್ಯ ಬ್ರಹ್ಮೋಸ್​ಗೆ ಇರಲಿದೆ. ಕ್ಷಿಪಣಿಯನ್ನು ಮತ್ತಷ್ಟು ಲಘುವಾಗಿಸಲು ಕೂಡ ವಿಜ್ಞಾನಿಗಳು ಪರಿಶೀಲನೆ ನಡೆಸಿದ್ದಾರೆ ಎಂದು ಮಿಶ್ರಾ ಹೇಳಿದ್ದಾರೆ. ಮುಂದಿನ ವರ್ಷ ಸುಧಾರಿತ ಬ್ರಹ್ಮೋಸ್ ಕ್ಷಿಪಣಿಯ ಪರೀಕ್ಷೆಗಳನ್ನು ನಡೆಸಲಾಗುವುದು.