ಪರಿಸರವಾದಿ ಚಾಂದಿ ಪ್ರಸಾದ್ ಭಟ್ ಗೆ ‘ಇಂದಿರಾ ಗಾಂಧಿ ರಾಷ್ಟ್ರೀಯ ಸಮಗ್ರತೆ ಪ್ರಶಸ್ತಿ’

0
26

ಪರಿಸರವಾದಿ ಮತ್ತು ಗಾಂಧಿವಾದಿ ಚಾಂದಿ ಪ್ರಸಾದ್ ಭಟ್ ಅವರನ್ನು 2017ಮತ್ತು 2018 ರ ‘ಇಂದಿರಾ ಗಾಂಧಿ ರಾಷ್ಟ್ರೀಯ ಸಮಗ್ರತೆ ಪ್ರಶಸ್ತಿ’ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.

ನವದೆಹಲಿ:  ಪರಿಸರವಾದಿ ಮತ್ತು ಗಾಂಧಿವಾದಿ ಚಾಂದಿ ಪ್ರಸಾದ್ ಭಟ್ ಅವರನ್ನು 2017 ಮತ್ತು 2018 ರ ‘ ‘ಇಂದಿರಾ ಗಾಂಧಿ ರಾಷ್ಟ್ರೀಯ ಸಮಗ್ರತೆ ಪ್ರಶಸ್ತಿ’ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.

ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರಿಗೆ ಅತ್ಯಂತ ಪ್ರಿಯವಾಗಿದ್ದ ರಾಷ್ಟ್ರೀಯ ಸಮಗ್ರತೆಯನ್ನು ಎತ್ತಿಹಿಡಿಯುವ ಉದ್ದೇಶದಿಂದ ಅವರ ಜನ್ಮ ಶತಮಾನೋತ್ಸವದ ಸ್ಮರಣಾರ್ಥ ದೇಶದ ಅಭಿವೃಧ್ಧಿಗೆ ಉತ್ತಮ ಸೇವೆ ಸಲ್ಲಿಸುವ ವ್ಯಕ್ತಿ ಮತ್ತು ಸಂಸ್ಥೆಗಳಿಗೆ ಈ ಪ್ರಶಸ್ತಿ ನೀಡಲಾಗುತ್ತಿದೆ. 

ಮಾಜಿ ಪ್ರಧಾನ ಮಂತ್ರಿಯ ನೆನಪಿಗಾಗಿ ಕಾಂಗ್ರೆಸ್ ಈ ಪ್ರಶಸ್ತಿಯನ್ನು ಸ್ಥಾಪಿಸಿತು ಮತ್ತು ಅಕ್ಟೋಬರ್ 31 ರಂದು ಜವಾಹರ್ ಭವನದಲ್ಲಿ ನಡೆಯುವ ಸಮಾರಂಭದಲ್ಲಿ ಇದನ್ನು ಪ್ರದಾನ ಮಾಡಲಾಗುವುದು.

ಈ ಪ್ರಶಸ್ತಿಯು 10 ಲಕ್ಷ  ನಗದನ್ನು ಒಳಗೊಂಡಿದೆ. 
 
ಪರಿಸರವಾದಿ ಮತ್ತು ಗಾಂಧಿವಾದಿ ಚಾಂದಿ ಪ್ರಸಾದ್ ಭಟ್  ಅವರು  ಈ ಮೊದಲು ಅವರಿಗೆ 1982 ರಲ್ಲಿ ಸಮುದಾಯ ನಾಯಕತ್ವಕ್ಕಾಗಿ ರಾಮನ್ ಮ್ಯಾಗ್ಸೆಸೆ ಪ್ರಶಸ್ತಿ, ನಂತರ 2005 ರಲ್ಲಿ ಪದ್ಮಭೂಷಣ ಪ್ರಶಸ್ತಿ ನೀಡಲಾಯಿತು. ಅವರು ಗಾಂಧಿ ಶಾಂತಿ ಪ್ರಶಸ್ತಿಯನ್ನು ಸಹ ಪಡೆದಿದ್ದಾರೆ.