ಪದ್ಮಶ್ರೀಗೆ ಭಜರಂಗ್, ವಿನೇಶ್ ಹೆಸರು ಶಿಫಾರಸು

0
628

ದೇಶದ ಅತ್ಯುನ್ನತ ಕ್ರೀಡಾ ಗೌರವವಾದ ಖೇಲ್​ರತ್ನ ಪ್ರಶಸ್ತಿಯಿಂದ ವಂಚಿತರಾದ ಕುಸ್ತಿಪಟುಗಳಾದ ಭಜರಂಗ್ ಪೂನಿಯಾ ಮತ್ತು ವಿನೇಶ್ ಪೋಗಟ್ ಹೆಸರನ್ನು ದೇಶದ 4ನೇ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ಪದ್ಮಶ್ರೀಗೆ ಶಿಫಾರಸು ಮಾಡಲಾಗಿದೆ.

ನವದೆಹಲಿ: ದೇಶದ ಅತ್ಯುನ್ನತ ಕ್ರೀಡಾ ಗೌರವವಾದ ಖೇಲ್​ರತ್ನ ಪ್ರಶಸ್ತಿಯಿಂದ ವಂಚಿತರಾದ ಕುಸ್ತಿಪಟುಗಳಾದ ಭಜರಂಗ್ ಪೂನಿಯಾ ಮತ್ತು ವಿನೇಶ್ ಪೋಗಟ್ ಹೆಸರನ್ನು ದೇಶದ 4ನೇ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ಪದ್ಮಶ್ರೀಗೆ ಶಿಫಾರಸು ಮಾಡಲಾಗಿದೆ.

ಭಾರತೀಯ ಕುಸ್ತಿ ಒಕ್ಕೂಟ ಇವರಿಬ್ಬರ ಹೆಸರನ್ನು ಸೂಚಿಸಿರಲಿಲ್ಲ. ಆದರೆ ಕೇಂದ್ರ ಕ್ರೀಡಾ ಸಚಿವಾಲಯ ಸ್ವತಃ ಆಸಕ್ತಿ ತೋರಿ ಇವರಿಬ್ಬರ ಹೆಸರನ್ನು ಪದ್ಮಶ್ರೀ ಪ್ರಶಸ್ತಿಗಾಗಿ ಗೃಹ ಸಚಿವಾಲಯಕ್ಕೆ ಶಿಫಾರಸು ಮಾಡಿದೆ. ಈ ಮೂಲಕ ಭಜರಂಗ್ ಪೂನಿಯಾ ಮತ್ತು ವಿನೇಶ್ ಖೇಲ್​ರತ್ನ ಸಿಗದೆ ಅನುಭವಿಸಿದ್ದ ನಿರಾಸೆಯನ್ನು ಹೋಗಲಾಡಿಸಲು ಪ್ರಯತ್ನಿಸಿದೆ.

ಕ್ರೀಡಾ ಸಾಧಕರಿಗೆ ಖೇಲ್​ರತ್ನಕ್ಕೆ ಮುನ್ನ ಪದ್ಮಶ್ರೀ ಗೌರವ ಒಲಿದ ದೃಷ್ಟಾಂತಗಳು ಹಲವಾರು ಇವೆ. ವೇಟ್​ಲಿಫ್ಟಿಂಗ್ ವಿಶ್ವ ಚಾಂಪಿಯನ್ ಮೀರಾಬಾಯಿ ಚಾನು ಇಂಥ ಸಾಧಕಿಯಲ್ಲೊಬ್ಬರು. ಈ ವರ್ಷ ಕಾಮನ್ವೆಲ್ತ್ ಮತ್ತು ಏಷ್ಯನ್ ಗೇಮ್ಸ್​ನಲ್ಲಿ ಸ್ವರ್ಣ ಪದಕ ಗೆದ್ದು ಬೀಗಿದ್ದ ಪೈಲ್ವಾನ್ ಭಜರಂಗ್ ಖೇಲ್​ರತ್ನ ಸಿಗದಿದ್ದುದಕ್ಕೆ ಬೇಸರಗೊಂಡು, ನ್ಯಾಯಾಲಯದ ಮೆಟ್ಟಿಲೇರುವ ಚಿಂತನೆ ನಡೆಸಿದ್ದರು. ಆದರೆ ಬಳಿಕ ಕ್ರೀಡಾ ಸಚಿವ ರಾಜ್ಯವರ್ಧನ್ ಸಿಂಗ್ ರಾಥೋಡ್ ಜತೆ ರ್ಚಚಿಸಿ ಈ ಯೋಚನೆ ಕೈಬಿಟ್ಟಿದ್ದರು. ವಿನೇಶ್ ಪೋಗಟ್ ಕೂಡ ಕಾಮನ್ವೆಲ್ತ್ ಮತ್ತು ಏಷ್ಯನ್ ಗೇಮ್್ಸ ನಲ್ಲಿ ಸ್ವರ್ಣ ಪದಕ ಜಯಿಸಿದ್ದರು. -ಏಜೆನ್ಸೀಸ್