ಪದವಿ ಪಡೆದ ವಿಶ್ವದ ಕಿರಿಯ ಎನಿಸಿಕೊಳ್ಳುತ್ತಿದ್ದಾನೆ 9 ವರ್ಷದ ಹುಡುಗ “ಲಾರೆಂಟ್ ಸೈಮನ್ಸ್”

0
32

ಬೆಲ್ಜಿಯನ್ ನಿವಾಸಿಯಾಗಿರುವ 9 ವರ್ಷದ ಹುಡುಗ ಲಾರೆಂಟ್ ಸೈಮನ್ಸ್ ವಿಶ್ವದ ಕಿರಿಯ ಪದವೀಧರನಾಗಲು ಸಜ್ಜಾಗಿದ್ದಾನೆ. ಎಲೆಕ್ಟ್ರಿಕಲ್ ಎಂಜಿನಿಯರಿಂಗ್‌ನಲ್ಲಿ ಡಿಸೆಂಬರ್‌ನಲ್ಲಿ ಪದವಿ ಪೂರ್ಣಗೊಳಿಸಲಿದ್ದಾನೆ

ಲಂಡನ್: ಬೆಲ್ಜಿಯನ್ ನಿವಾಸಿಯಾಗಿರುವ 9 ವರ್ಷದ ಹುಡುಗ ’ಲಾರೆಂಟ್ ಸೈಮನ್ಸ್” ವಿಶ್ವದ ಕಿರಿಯ ಪದವೀಧರನಾಗಲು ಸಜ್ಜಾಗಿದ್ದಾನೆ. ಎಲೆಕ್ಟ್ರಿಕಲ್ ಎಂಜಿನಿಯರಿಂಗ್‌ನಲ್ಲಿ ಡಿಸೆಂಬರ್‌ನಲ್ಲಿ ಪದವಿ ಪೂರ್ಣಗೊಳಿಸಲಿದ್ದಾನೆ.

ಟೆಲಿಗ್ರಾಫ್ ವರದಿಯ ಪ್ರಕಾರ ’ಲಾರೆಂಟ್ ನ ಐಕ್ಯೂ ಮಟ್ಟ ಕನಿಷ್ಠ 145 ಆಗಿದೆ. ತಾನು 8 ವರ್ಷದವನಿದ್ದಾಗಲೇ ಕೇವಲ 18 ತಿಂಗಳಿನಲ್ಲಿ ಪ್ರೌಢಶಿಕ್ಷಣವನ್ನು ಪೂರ್ಣಗೊಳಿಸಿದ್ದಾನೆ. ಈ ವರ್ಷದ ಆರಂಭದಲ್ಲಿ ಪದವಿ ಕೋರ್ಸ್ ಸೇರಿದಾಗ ವಿಶ್ವವಿದ್ಯಾಲಯದ ಕಿರಿಯ ವಿದ್ಯಾರ್ಥಿಯಾಗಿ ಗುರಿತಿಸಿಕೊಂಡಿದ್ದಾನೆ.

ಬೆಲ್ಜಿಯನ್ ನಿವಾಸಿಯಾಗಿರುವ ’ಲಾರೆಂಟ್ ಎಂಬ ಜೀನಿಯಸ್  ಡಿಸೆಂಬರ್ ನಲ್ಲಿ ಐಂಡ್‌ ಹೋವನ್ ಯೂನಿವರ್ಸಿಟಿ ಆಫ್ ಟೆಕ್ನಾಲಜಿಯಲ್ಲಿ ಎಲೆಕ್ಟ್ರಿಕಲ್ ಇಂಜಿನಿಯರಿಂಗ್ ಪದವಿ ಮುಗಿಸಲಿದ್ದಾರೆ. ಅವರು ವಿಶ್ವದ ಕಿರಿಯ ಪದವೀಧರರಾಗಲು ಸಜ್ಜಾಗಿದ್ದಾರೆ.

9ವರ್ಷದ ಲ್ಯೂರೆಂಟ್ ಎಲೆಕ್ಟ್ರಾನಿಕ್ ಇಂಜಿನಿಯರಿಂಗ್ ನಲ್ಲಿ ಪಿಎಚ್ ಪಡೆಯಲು ದಾಖಲಾತಿ ಮಾಡಿಕೊಂಡಿಸಿದ್ದ, ಅಲ್ಲದೇ ಮೆಡಿಸಿನ್ ನಲ್ಲಿಯೂ ಪದವಿ ಪಡೆಯುವ ಇಚ್ಛೆ ಹೊಂದಿದ್ದ ಎಂದು ಲ್ಯೂರೆಂಟ್ ತಂದೆ ಅಲೆಕ್ಸಾಂಡರ್ ಲ್ಯೂರೆಂಟ್ ಸಿಎನ್ ಎನ್ ಗೆ ನೀಡಿದ್ದ ಸಂದರ್ಶನದಲ್ಲಿ ತಿಳಿಸಿದ್ದರು.

ವಿಶ್ವಾದ್ಯಂತ ಇರುವ ಪ್ರತಿಷ್ಠಿತ ಯೂನಿರ್ವಸಿಟಿಗಳಲ್ಲಿ ಪ್ರವೇಶ ಪಡೆಯಬೇಕೆಂಬ ಆಸೆ ಲ್ಯೂರೆಂಟ್ ನದ್ದಾಗಿದೆ. ಆದರೆ ಆತ ಶಿಕ್ಷಣದ ಬಗ್ಗೆ ತುಂಬಾ ಗಂಭೀರವಾಗಿರುವುದು ನಮಗೆ ಬೇಕಾಗಿಲ್ಲ. ಆತನಿಗೆ ಏನು ಬೇಕೋ ಅದನ್ನು ಕಲಿಯಲಿ. ನಮಗೆ ಆತನ ಬಾಲ್ಯದ ಬದುಕು ಹಾಗೂ ಚುರುಕುತನವನ್ನು ಸಮತೋಲನದಲ್ಲಿ ಇರುವಂತೆ ನೋಡಿಕೊಳ್ಳುತ್ತಿದ್ದೇವೆ ಎಂದು ಅಭಿಪ್ರಾಯವ್ಯಕ್ತಪಡಿಸಿದ್ದಾರೆ.

ಲಾರೆಂಟ್ ಈ ಸಾಧನೆಯೊಂದಿಗೆ ವಿಶ್ವದ ಅತ್ಯಂತ ಕಿರಿಯ ಪದವೀಧರ ಎನ್ನುವ ಕೀರ್ತಿಗೆ ಪಾತ್ರನಾಗಲಿದ್ದು, ಮೈಕಲ್ ಕಾರ್ಲೆಯ ದಾಖಲೆಯನ್ನು ಸರಿಗಟ್ಟಲಿದ್ದಾನೆ. ಮೈಕಲ್ ಕಾರ್ಲೆಯು ಅಲಬಾನಾ ವಿಶ್ವವಿದ್ಯಾಲಯದಿಂದ ತನ್ನ 10 ನೇ ವಯಸ್ಸಿಗೆ ಪದವಿ ಪಡೆದಿದ್ದನು.