ಪತ್ರಕರ್ತ ಗೋವೆಂದರ್‌ಗೆ 2019 ರ ವಿ.ಕೆ. ಕೃಷ್ಣ ಮೆನನ್ ಪ್ರಶಸ್ತಿ

0
47

ವಸಾಹತುಮುಕ್ತ ಪತ್ರಿಕೋದ್ಯಮಕ್ಕೆ ನೀಡಿದ ಕೊಡುಗೆಗಾಗಿ, ಭಾರತೀಯ ಮೂಲದ ಪತ್ರಕರ್ತ ಜಿ.ಡಿ. ರಾಬರ್ಟ್ ಗೋವೆಂದರ್ ಅವರಿಗೆ ಮರಣೋತ್ತರವಾಗಿ ಯು.ಕೆ 2019 ರ ‘ವಿ.ಕೆ. ಕೃಷ್ಣ ಮೆನನ್’ ಪ್ರಶಸ್ತಿ ನೀಡಲಾಗಿದೆ.

ಲಂಡನ್ (ಪಿಟಿಐ): ವಸಾಹತುಮುಕ್ತ ಪತ್ರಿಕೋದ್ಯಮಕ್ಕೆ ನೀಡಿದ ಕೊಡುಗೆಗಾಗಿ, ಭಾರತೀಯ ಮೂಲದ ಪತ್ರಕರ್ತ ಜಿ.ಡಿ. ರಾಬರ್ಟ್ ಗೋವೆಂದರ್ ಅವರಿಗೆ ಮರಣೋತ್ತರವಾಗಿ ಯು.ಕೆ 2019 ರ ‘ವಿ.ಕೆ. ಕೃಷ್ಣ ಮೆನನ್’ ಪ್ರಶಸ್ತಿ ನೀಡಲಾಗಿದೆ. 

‘ಭಾರತೀಯ ರಾಯಭಾರಿ ಹಾಗೂ ರಾಜಕಾರಣಿ ವಿ.ಕೆ. ಕೃಷ್ಣ ಮೆನನ್ ಅವರ 123ನೇ ಜನ್ಮವರ್ಷಾಚರಣೆ ವೇಳೆ ಗೋವೆಂದರ್‌ಗೆ ಪ್ರಶಸ್ತಿ ನೀಡಲು ನಿರ್ಣಯಿಸಲಾಗಿತ್ತು’ ಎಂದು ವಿ.ಕೆ. ಕೃಷ್ಣ ಮೆನನ್ ಸಂಸ್ಥೆಯ ಟೋನಿ ಸ್ಲೇಟರ್ ತಿಳಿಸಿದ್ದಾರೆ. 

ವಿ.ಕೆ. ಕೃಷ್ಣ ಮೆನನ್ ಯಾರು : ವೆಂಗಲ್ಲಿಲ್ ಕೃಷ್ಣನ್ ಕೃಷ್ಣ ಮೆನನ್ ಒಬ್ಬ ಭಾರತೀಯ ರಾಷ್ಟ್ರೀಯತಾವಾದಿ, ರಾಯಭಾರಿ ಮತ್ತು ರಾಜಕಾರಣಿಯಾಗಿದ್ದರು, ಅವರನ್ನು ಕೆಲವರು ಭಾರತದಲ್ಲಿ ಎರಡನೇ ಅತ್ಯಂತ ಶಕ್ತಿಯುತ ವ್ಯಕ್ತಿ ಎಂದು ವಿವರಿಸಿದ್ದಾರೆ, ಅವರ ಮಿತ್ರ, ಭಾರತದ ಪ್ರಥಮ ಪ್ರಧಾನ ಮಂತ್ರಿ ಜವಾಹರಲಾಲ್ ನೆಹರು. ವಿ.ಕೆ.ಕೃಷ್ಣ ಮೆನನ್ ಇನ್ಸ್ಟಿಟ್ಯೂಟ್ 2006 ರಲ್ಲಿ ಮೆನನ್ ಅವರ ಜೀವನ, ಸಮಯ ಮತ್ತು ಸಾಧನೆಗಳನ್ನು ನೆನಪಿಸಲು ಮತ್ತು ಸುಗಮಗೊಳಿಸಲು ಸ್ಥಾಪಿಸಲಾಯಿತು.

ಪತ್ರಕರ್ತ ಜಿ.ಡಿ. ರಾಬರ್ಟ್ ಗೋವೆಂದರ್ : ಗೋವೆಂದರ್ ಪತ್ರಿಕೋದ್ಯಮದ ಕ್ಷೇತ್ರದಲ್ಲಿ ಅನೇಕ ಪುಸ್ತಕಗಳನ್ನು ಬರೆದಿದ್ದರೂ, ಕಾಂಗೋಲೀಸ್ ಸ್ವಾತಂತ್ರ್ಯ ನಾಯಕನ ಕೊಲೆಯಲ್ಲಿ ಪಾಶ್ಚಾತ್ಯ ಗುಪ್ತಚರ ಸಂಸ್ಥೆಗಳ ಪಾತ್ರವನ್ನು ಬಹಿರಂಗಪಡಿಸಿದ “ದಿ ಮಾರ್ಟಿರ್ಡಮ್ ಆಫ್ ಪ್ಯಾಟ್ರಿಸ್ ಲುಮಂಬಾ” ಅವರ ಅತ್ಯುತ್ತಮ ಕಾರ್ಯವಾಗಿತ್ತು.

ದಕ್ಷಿಣ ಆಫ್ರಿಕಾದಲ್ಲಿ ಶ್ವೇತವರ್ಣೀಯರಿಗಷ್ಟೆ ಕ್ರೀಡೆಯಲ್ಲಿ ಪಾಲ್ಗೊಳ್ಳಲು ಅವಕಾಶ ನೀಡಲಾಗುತ್ತಿತ್ತು. ಇದನ್ನು ಬಹಿಷ್ಕರಿಸಬೇಕೆಂದು ಕರೆ ನೀಡಿದ ಮೊದಲ ಪತ್ರಕರ್ತ ಇವರಾಗಿದ್ದರು.  ‘ಮೆನನ್‌ ರೀತಿ ಗೋವೆಂದರ್ ಸಹ ನಿಸ್ವಾರ್ಥರಾಗಿದ್ದರು’ ಎಂದು ಸ್ಲೇಟರ್ ಹೇಳಿದ್ದಾರೆ. ದಕ್ಷಿಣ ಆಫ್ರಿಕಾದಲ್ಲಿ 1930ರಲ್ಲಿ ಜನಿಸಿದ್ದ ಇವರು, 2016ರಲ್ಲಿ ನಿಧನರಾದರು.