ಪತಂಜಲಿಯಿಂದ ಸಿಬ್ಬಂದಿಗೆ ಪ್ರಿಪೇಯ್ಡ್ ಮೊಬೈಲ್ ಪ್ಲಾನ್

0
15

ಪತಂಜಲಿ ಬಿಎಸ್ಎನ್ಎಲ್-144 ಸ್ಕೀಂ ಅಡಿ ಪತಂಜಲಿ ಸಂಸ್ಥೆಯ ಸಿಬ್ಬಂದಿಗೆ ಪ್ರಿಪೇಯ್ಡ್ ಮೊಬೈಲ್ ಪ್ಲಾನ್ ಪ್ರಕಟಿಸಿದೆ. ರಾಜ್ಯದಲ್ಲಿರುವ ಪತಂಜಲಿಯ ಎಲ್ಲಾ ಮಳಿಗೆಗಳ ಸದಸ್ಯರಿಗೆ ಈ ಸೌಲಭ್ಯ ಸಿಗಲಿದೆ.

ಬೆಂಗಳೂರು: ಪತಂಜಲಿ ಬಿಎಸ್ಎನ್ಎಲ್-144 ಸ್ಕೀಂ ಅಡಿ ಪತಂಜಲಿ ಸಂಸ್ಥೆಯ ಸಿಬ್ಬಂದಿಗೆ ಪ್ರಿಪೇಯ್ಡ್ ಮೊಬೈಲ್ ಪ್ಲಾನ್ ಪ್ರಕಟಿಸಿದೆ. ರಾಜ್ಯದಲ್ಲಿರುವ ಪತಂಜಲಿಯ ಎಲ್ಲಾ ಮಳಿಗೆಗಳ ಸದಸ್ಯರಿಗೆ ಈ ಸೌಲಭ್ಯ ಸಿಗಲಿದೆ. 

ಕರ್ನಾಟಕದಲ್ಲಿ ಸುಮಾರು 24 ಸಾವಿರ ಮಳಿಗೆಗಳಿದ್ದು, ಅಲ್ಲಿರುವ ಎಲ್ಲಾ ಸಿಬ್ಬಂದಿಗೆ ಈ ಸೇವೆ ಸಿಗಲಿದೆ. 
ಪ್ರತಿನಿತ್ಯ ಅನ್ಲಿಟೆಡ್ ವಾಯ್ಸ್ ಕಾಲ್, ಆಲ್ ಒಂಡಿಯಾ ರೋಮಿಂಗ್, 100 ಎಸ್ಎಂಎಸ್ ಹಾಗೂ ಎರಡು ಜಿಬಿ ಡೇಟಾ ಸಿಗಲಿದೆ. 144 ರೂ.ಗೆ 30 ದಿನ, 792 ರೂ.ಗೆ 180 ದಿನ ಹಾಗೂ 1584 ರೂ.ಗೆ 365 ದಿನದ ಪ್ಲಾನ್ ಇದೆ. 

ಈಗಾಗಲೇ ಕಳೆದ ಮೇನಲ್ಲಿ ಈ ಯೋಜನೆ ಅಧಿಕೃತವಾಗಿ ಹರಿದ್ವಾರದಲ್ಲಿ ಬಿಡುಗಡೆ ಕಂಡಿದ್ದು, ಈಗ ರಾಜ್ಯದಲ್ಲಿ ಸೇವೆ ಸಿಗಲಿದೆ ಎಂದು ಬಿಎಸ್ಎನ್ಎಲ್ ಕರ್ನಾಟಕ ವಲಯದ ಮಹಾ ಪ್ರಬಂಧಕ ಆರ್.ಮಣಿ ತಿಳಿಸಿದರು.