ಪಂಡಿತ್‌ ವೆಂಕಟೇಶ್‌ ಕುಮಾರ್‌ಗೆ “ಸಾಮಗಾನ ಮಾತಂಗ ರಾಷ್ಟ್ರೀಯ ಪ್ರಶಸ್ತಿ”

0
423

ಭಾರತೀಯ ಸಾಮಗಾನ ಸಭಾ ಕೊಡಮಾಡುವ ‘ಸಾಮಗಾನ ಮಾತಂಗ ರಾಷ್ಟ್ರೀಯ ಪ್ರಶಸ್ತಿ’ಗೆ ಪಂಡಿತ್‌ ವೆಂಕಟೇಶ್‌ ಕುಮಾರ್‌ ಅವರನ್ನು ಆಯ್ಕೆ ಮಾಡಲಾಗಿದೆ.

ಬೆಂಗಳೂರು: ಭಾರತೀಯ ಸಾಮಗಾನ ಸಭಾ ಕೊಡಮಾಡುವ ‘ಸಾಮಗಾನ ಮಾತಂಗ ರಾಷ್ಟ್ರೀಯ ಪ್ರಶಸ್ತಿ’ಗೆ ಪಂಡಿತ್‌ ವೆಂಕಟೇಶ್‌ ಕುಮಾರ್‌ ಅವರನ್ನು ಆಯ್ಕೆ ಮಾಡಲಾಗಿದೆ.

ಪ್ರಶಸ್ತಿಯು 1 ಲಕ್ಷ ಹಾಗೂ ಸ್ಮರಣಿಕೆ ಒಳಗೊಂಡಿದೆ. ಬೆಂಗಳೂರಿನ ಚೌಡಯ್ಯ ಸ್ಮಾರಕ ಭವನದಲ್ಲಿ ಜನವರಿ 30ರಿಂದ ಫೆಬ್ರವರಿ 3ರವರೆಗೆ ಆಯೋಜಿಸಲಾಗುತ್ತಿರುವ ‘ಸಭಾದ 10ನೇ ವಾರ್ಷಿಕೋತ್ಸವ’ದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ.

ಪಂಡಿತ್‌ ವೆಂಕಟೇಶ್‌ ಕುಮಾರ್‌, ಮಹೇಶ್ ಕಾಳೆ, ರಂಜನಿ ಗಾಯತ್ರಿ, ಕುಮಾರೇಶ್‌ ಗಣೇಶ್‌, ರಾಹುಲ್‌ ದೇಶಪಾಂಡೆ, ಅಭಿಷೇಕ್ ರಘುರಾಮ್‌ ಅವರ ಯುಗಳ ಗಾಯನ ವಾರ್ಷಿಕೋತ್ಸವದ ಆಕರ್ಷಣೆಯಾಗಿದೆ. ಜಿ.ರವಿಕಿರಣ್‌, ಮಾನಸಿ ಪ್ರಸಾದ್, ಹೇರಂಭ, ಹೇಮಂತ್, ವಿನಯಶರ್ವ, ಎಸ್‌.ವಿ.ಸಹನಾ ಅವರು ಗಾಯನ ನಡೆಸಿಕೊಡಲಿದ್ದಾರೆ. ಉತ್ಸವದ ಕೊನೆಯ ದಿನ ಪುರಂದರ, ತ್ಯಾಗರಾಜ ಆರಾಧನೆ ಆಯೋಜಿಸಲಾಗಿದೆ. ಪಂಡಿತ್‌ ಜಯತೀರ್ಥ ಮೇವುಂಡಿ ಅವರು ಪುರಂದರರ ಕೀರ್ತನೆಗಳನ್ನು ಹಾಡಲಿದ್ದಾರೆ. ತ್ಯಾಗರಾಜರ ಕೃತಿಗಳನ್ನು ರಾಜೇಶ್‌ ವೈದ್ಯ ಪ್ರಸ್ತುತಪಡಿಸಲಿದ್ದಾರೆ.