ಪಂಕಜ್ ಆಡ್ವಾಣಿಗೆ 21ನೇ ವಿಶ್ವ ಕಿರೀಟ

0
402

ಭಾರತದ ಅಗ್ರ ಕ್ಯೂ ಆಟಗಾರ ಪಂಕಜ್ ಆಡ್ವಾಣಿ ವಿಶ್ವ ಕಿರೀಟ ಬೇಟೆಯನ್ನು 21ಕ್ಕೆ ವಿಸ್ತರಿಸಿಕೊಂಡಿದ್ದಾರೆ. ಐಬಿಎಸ್​ಎಫ್ ವಿಶ್ವ ಬಿಲಿಯರ್ಡ್ಸ್ ಚಾಂಪಿಯನ್​ಷಿಪ್​ನ ಅಂಕ ಮಾದರಿಯ ಗೆಲುವಿನ ಬಳಿಕ ಲಾಂಗ್ ಫಾರ್ವಟ್​ನಲ್ಲೂ ಪ್ರಶಸ್ತಿ ಜಯಿಸುವ ಮೂಲಕ ಅವರು ಈ ಸಾಧನೆ ಮಾಡಿದ್ದಾರೆ. ಏಕಕಾಲದಲ್ಲಿ ಎರಡೂ ಮಾದರಿಯಲ್ಲಿ ವಿಶ್ವ ಚಾಂಪಿಯನ್ ಪಟ್ಟಕ್ಕೇರಿದ ದಾಖಲೆಯನ್ನು 4ನೇ ಬಾರಿ ಬರೆದಿದ್ದಾರೆ.

ಯಾಂಗೋನ್ (ಮ್ಯಾನ್ಮಾರ್): ಭಾರತದ ಅಗ್ರ ಸ್ನೂಕರ್ ಆಟಗಾರ ಪಂಕಜ್ ಆಡ್ವಾಣಿ ವಿಶ್ವ ಕಿರೀಟ ಬೇಟೆಯನ್ನು 21ಕ್ಕೆ ವಿಸ್ತರಿಸಿಕೊಂಡಿದ್ದಾರೆ. ಐಬಿಎಸ್​ಎಫ್ ವಿಶ್ವ ಬಿಲಿಯರ್ಡ್ಸ್ ಚಾಂಪಿಯನ್​ಷಿಪ್​ನ ಅಂಕ ಮಾದರಿಯ ಗೆಲುವಿನ ಬಳಿಕ ಲಾಂಗ್ ಫಾರ್ವಟ್​ನಲ್ಲೂ ಪ್ರಶಸ್ತಿ ಜಯಿಸುವ ಮೂಲಕ ಅವರು ಈ ಸಾಧನೆ ಮಾಡಿದ್ದಾರೆ. ಏಕಕಾಲದಲ್ಲಿ ಎರಡೂ ಮಾದರಿಯಲ್ಲಿ ವಿಶ್ವ ಚಾಂಪಿಯನ್ ಪಟ್ಟಕ್ಕೇರಿದ ದಾಖಲೆಯನ್ನು 4ನೇ ಬಾರಿ ಬರೆದಿದ್ದಾರೆ.

33 ವರ್ಷದ ಪಂಕಜ್ ಭಾನುವಾರ ನಡೆದ ಫೈನಲ್ ಪಂದ್ಯದಲ್ಲಿ ಬೆಂಗಳೂರಿನವರೇ ಆದ ಬಿ. ಭಾಸ್ಕರ್ ಎದುರು 1500-299ರಿಂದ ಭರ್ಜರಿ ಗೆಲುವು ದಾಖಲಿಸಿದರು. 2 ಬಾರಿಯ ಏಷ್ಯನ್ ರಜತ ಪದಕ ವಿಜೇತ ಭಾಸ್ಕರ್, ಬೆಳ್ಳಿ ಪದಕಕ್ಕೆ ತೃಪ್ತಿಪಟ್ಟರು. ಪ್ರಶಸ್ತಿ ಹೋರಾಟದಲ್ಲಿ ಪಂಕಜ್ ಅವರ ಅದ್ಭುತ ಆಟದೆದುರು ಭಾಸ್ಕರ್ ಮಂಕಾಗಿ ಕಂಡರು. ಪಂಕಜ್ ಕಳೆದ ಗುರುವಾರವಷ್ಟೇ ಇಲ್ಲಿ ನಡೆದ ಅಂಕ ಮಾದರಿಯ ಟೂರ್ನಿಯಲ್ಲಿ 20ನೇ ವಿಶ್ವ ಕಿರೀಟ ಜಯಿಸಿದ್ದರು. ಪಂಕಜ್ ಸಮಯ ಮಾದರಿಯಲ್ಲಿ ಒಟ್ಟು 8ನೇ ಬಾರಿ ಪ್ರಶಸ್ತಿ ಜಯಿಸಿದ ಸಾಧನೆ ಮಾಡಿದರು. ಇದಕ್ಕೆ ಮುನ್ನ 2005, 2007, 2008, 2009, 2012, 2014 ಮತ್ತು 2015ರಲ್ಲಿ ಅವರು ಈ ಸಾಧನೆ ಮಾಡಿದ್ದರು. ಈ ಪೈಕಿ 2005, 2008 ಮತ್ತು 2014ರಲ್ಲಿ ಅವರು ಅಂಕ ಮತ್ತು ಸಮಯ ಮಾದರಿಯಲ್ಲಿ ಏಕಕಾಲದಲ್ಲಿ ವಿಶ್ವ ಚಾಂಪಿಯನ್ ಪಟ್ಟವೇರಿದ್ದರು. -ಪಿಟಿಐ