ನ್ಯೂಜಿಲೆಂಡ್ : ವಿದೇಶಿಗರಿಗೆ ಮನೆ ಖರೀದಿ ನಿಷೇಧ

0
28

ಗಗನಕ್ಕೇರುತ್ತಿರುವ ವಸತಿ ಬೆಲೆಗಳಿಗೆ ಕಡಿವಾಣ ಹಾಕುವ ಸಲುವಾಗಿ ವಿದೇಶಿಯರು ಮನೆ ಖರೀದಿಸುವುದನ್ನು ನ್ಯೂಜಿಲೆಂಡ್ ಸರ್ಕಾರ ನಿಷೇಧಿಸಿದೆ.

ವೆಲ್ಲಿಂಗ್ಟನ್ : ಗಗನಕ್ಕೇರುತ್ತಿರುವ ವಸತಿ ಬೆಲೆಗಳಿಗೆ ಕಡಿವಾಣ ಹಾಕುವ ಸಲುವಾಗಿ ವಿದೇಶಿಯರು ಮನೆ ಖರೀದಿಸುವುದನ್ನು  ನ್ಯೂಜಿಲೆಂಡ್ ಸರ್ಕಾರ ನಿಷೇಧಿಸಿದೆ.

ಸ್ಥಳೀಯರಿಗೆ ಕೈಗೆಟುಕುವ ದರದಲ್ಲಿ ಮನೆ ಒದಗಿಸುವ ಜೊತೆಗೆ ಸ್ಥಳೀಯರಿಗೆ ವಸತಿ ಮಾಲೀಕತ್ವದ ಪ್ರಮಾಣ ಹೆಚ್ಚಿಸುವ ಉದ್ದೇಶದಿಂದ ಸರ್ಕಾರ ಈ ಕ್ರಮ ಕೈಗೊಂಡಿದೆ.

ಇದಕ್ಕಾಗಿ ಕಾನೂನು ರೂಪಿಸಿದೆ.ಈ ಹಿಂದೆ ವಸತಿ ಮಾರುಕಟ್ಟೆ ವಿಶ್ವದಾದ್ಯಂತ ಹೂಡಿಕೆದಾರರಿಗೆ ಮುಕ್ತವಾಗಿತ್ತು. ಈ ಹೊಸ ಕಾನೂನು ಸರ್ಕಾರದ ಚುನಾವಣಾ ಘೋಷಣೆಗಳಲ್ಲೊಂದು. ಈಗಾಗಲೇ ವಸತಿ ಹೊಂದಿರುವವರಿಗೆ ಈ ಕಾನೂನಿನಿಂದ ಯಾವುದೇ ಪರಿಣಾಮ ಆಗುವುದಿಲ್ಲ