ನ್ಯೂಜಿಲೆಂಡ್‌ ಕ್ರಿಕೆಟರ್ “ರಾಸ್‌ ಟೇಲರ್‌” ನೂತನ ದಾಖಲೆ

0
596

ನ್ಯೂಜಿಲೆಂಡ್‌ ಬಲಗೈ ಕ್ರಿಕೆಟ್ ಬ್ಯಾಟ್ಸ್‌ಮನ್‌ ರಾಸ್‌ ಟೇಲರ್‌, ಫೆಬ್ರುವರಿ 20 ರ ಬುಧವಾರ ಯುನಿವರ್ಸಿಟಿ ಓವಲ್‌ ಮೈದಾನದಲ್ಲಿ ಹೊಸ ಮೈಲುಗಲ್ಲು ಸ್ಥಾಪಿಸಿದರು. ಅವರು ಏಕದಿನ ಮಾದರಿಯಲ್ಲಿ ಅತಿ ಹೆಚ್ಚು ರನ್‌ ಗಳಿಸಿದ ನ್ಯೂಜಿಲೆಂಡ್‌ನ ಆಟಗಾರ ಎಂಬ ದಾಖಲೆ ನಿರ್ಮಿಸಿದರು.

ಡ್ಯುನೆಡಿನ್‌ (ರಾಯಿಟರ್ಸ್‌): ಬಲಗೈ ಬ್ಯಾಟ್ಸ್‌ಮನ್‌ ರಾಸ್‌ ಟೇಲರ್‌, ಫೆಬ್ರುವರಿ 20 ರ ಬುಧವಾರ ಯುನಿವರ್ಸಿಟಿ ಓವಲ್‌ ಮೈದಾನದಲ್ಲಿ ಹೊಸ ಮೈಲುಗಲ್ಲು ಸ್ಥಾಪಿಸಿದರು. ಅವರು ಏಕದಿನ ಮಾದರಿಯಲ್ಲಿ ಅತಿ ಹೆಚ್ಚು ರನ್‌ ಗಳಿಸಿದ ನ್ಯೂಜಿಲೆಂಡ್‌ನ ಆಟಗಾರ ಎಂಬ ದಾಖಲೆ ನಿರ್ಮಿಸಿದರು.

ಬಾಂಗ್ಲಾದೇಶ ಎದುರಿನ ಮೂರನೇ ಪಂದ್ಯದಲ್ಲಿ 69 ರನ್‌ ಸಿಡಿಸಿದ ಟೇಲರ್‌ ಒಟ್ಟು ರನ್‌ ಅನ್ನು 8,026ಕ್ಕೆ ಹೆಚ್ಚಿಸಿಕೊಂಡು ಸ್ಟೀಫನ್‌ ಫ್ಲೆಮಿಂಗ್‌ ಹೆಸರಿನಲ್ಲಿದ್ದ ದಾಖಲೆ ಮೀರಿ ನಿಂತರು. ಫ್ಲೆಮಿಂಗ್‌ 8,007ರನ್‌ ಬಾರಿಸಿದ್ದರು.

34 ವರ್ಷ ವಯಸ್ಸಿನ ಟೇಲರ್‌, ಏಕದಿನ ಮಾದರಿಯಲ್ಲಿ 47ನೇ ಅರ್ಧಶತಕ ಸಿಡಿಸಿದ ಶ್ರೇಯಕ್ಕೂ ಪಾತ್ರರಾದರು. 

ಈ ಪಂದ್ಯದಲ್ಲಿ ಬಾಂಗ್ಲಾದೇಶವನ್ನು 88 ರನ್‌ಗಳಿಂದ ಮಣಿಸಿದ ನ್ಯೂಜಿಲೆಂಡ್‌ ತಂಡವು 3–0ರಿಂದ ಸರಣಿ ಗೆದ್ದು ‘ಕ್ಲೀನ್‌ ಸ್ವೀಪ್‌’ ಸಾಧನೆ ಮಾಡಿತು.